Advertisement

ಒಂದೇ ಫ್ರೇಮ್‌ನಲ್ಲಿ ಅಣ್ತಮ್ಮಂದಿರು

11:34 AM Mar 14, 2019 | Sharanya Alva |

ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದಲ್ಲಿ ಸಾಯಿಕುಮಾರ್‌, ರವಿಶಂಕರ್‌ ಮತ್ತು ಅಯ್ಯಪ್ಪ ಸಹೋದರರು ನಟಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ಎದುರು ನೋಡುತ್ತಿದ್ದ ಈ ಮೂವರು ಸಹೋದರರು ಈಗ “ಭರಾಟೆ’ ಚಿತ್ರದ ಫೈಟಿಂಗ್‌ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ.

Advertisement

ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣದಲ್ಲಿ ಈ ಮೂವರು ಸಹೋದರರು ಪಾಲ್ಗೊಂಡಿದ್ದು, ಹೀರೋ ಶ್ರೀಮುರಳಿ ಜೊತೆ ಹೊಡೆದಾಡುವ ದೃಶ್ಯವನ್ನು ಸಾಹಸ ನಿರ್ದೇಶಕ ರವಿವರ್ಮ ಅವರು ಚಿತ್ರಿಕರಿಸಿಕೊಂಡಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಮೊದಲ ಬಾರಿಗೆ ಕ್ಲೈಮ್ಯಾಕ್ಸ್‌ ಚಿತ್ರೀಕರಣದಲ್ಲಿ ಹತ್ತು ಜನ ಖಳನಟರು ಆರ್ಭಟಿಸುತ್ತಿರುವುದು. ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ಸಹೋದರರ ಜೊತೆಗೆ ಶರತ್‌ ಲೋಹಿತಾಶ್ವ, ಉಗ್ರಂ ಮಂಜು, ನೀನಾಸಂ ಅಶ್ವತ್ಥ್, ದೀಪಕ್‌, ರಾಜವಾಡೆ, ಮನಮೋಹನ್‌ ಇತರರು ಪಾಲ್ಗೊಂಡಿದ್ದಾರೆ.

ಈ ಕ್ಲೈಮ್ಯಾಕ್ಸ್‌ ಫೈಟ್‌ ಸೀನ್‌ಲ್ಲಿ 80 ಮಂದಿ ಬಾಡಿ ಬಿಲ್ಡರ್ಸ್‌, 400 ಜನ ಜೂನಿಯರ್ಸ್‌ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಸುಮಾರು 8 ದಿನಗಳ ಕಾಲ ಮೋಹನ್‌ ಬಿ.ಕೆರೆ ಅವರು ಹಾಕಿರುವ ಭರ್ಜರಿ ಸೆಟ್‌ನಲ್ಲಿ ಈ ಫೈಟ್‌ ಸೀನ್‌ ಚಿತ್ರೀಕರಿಸಲಾಗುತ್ತಿದೆ. ಚೇತನ್‌ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಸುಪ್ರೀತ್‌ ನಿರ್ಮಾಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next