Advertisement

Dandeli: ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಕೃಷ್ಣ ಭಾಗವತ

10:18 AM Oct 08, 2024 | Team Udayavani |

ದಾಂಡೇಲಿ : ಕಳೆದ 17 – 18 ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಹೆಮ್ಮೆಯ ಕಲಾ ಪುತ್ರ ಕೃಷ್ಣ ಭಾಗವತ ಅವರು.

Advertisement

ಕಲಾ ಸೇವೆಗಾಗಿಯೇ ಜನ್ಮ ಪಡೆದ ಕೃಷ್ಣ ಭಾಗವತ ಅವರು ಕಳೆದ 17 -18 ವರ್ಷಗಳಿಂದ ನಿರಂತರವಾಗಿ ಭರತನಾಟ್ಯ ಗುರುಗಳಾಗಿ ಅಸಂಖ್ಯಾತ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಭರತನಾಟ್ಯ ಕಲಿಕೆಯ ಜೊತೆ ಜೊತೆಗೆ ಮಕ್ಕಳಿಗೆ ಆದರ್ಶ ಸಂಸ್ಕಾರ ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಲು ಸದಾ ಪ್ರೇರಣಾದಾಯಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಕೃಷ್ಣ ಭಾಗವತ ಅವರ ಗರಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕಲೆಯನ್ನೇ ಉಸಿರಾಗಿಸಿಕೊಂಡ ಕೃಷ್ಣ ಭಾಗವತ ಅವರು ಗುರುಗಳಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಗರದ ಸಂಸ್ಕಾರ ಸಹಕಾರ ಭಾರತಿ ಕಲಾ ಕೇಂದ್ರ, ಶ್ರೀ ಶಂಕರ ಮಠದ ವಿದ್ಯಾರ್ಥಿಗಳಿಂದ ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಸಮೂಹ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ದಾಂಡೇಲಿಯ ಮಕ್ಕಳ ಪಾಲಿಗೆ ಮೆಚ್ಚಿನ ಹಾಗೂ ವಾತ್ಸಲ್ಯದ ಗುರುಗಳಾಗಿರುವ ಕೃಷ್ಣ ಭಾಗವತ ಅವರ ಕಲಾಸೇವೆ ಅನುಕರಣೀಯ ಮತ್ತು ಅಭಿನಂದನೀಯ.

ಇದನ್ನೂ ಓದಿ: Result 2024:ಜಮ್ಮು-ಕಾಶ್ಮೀರದಲ್ಲಿ ಕೈ ಮೈತ್ರಿ ಗದ್ದುಗೆಯತ್ತ‌,ಹರ್ಯಾಣದಲ್ಲಿ ತೀವ್ರ ಪೈಪೋಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next