ಚಿಕ್ಕಬಳ್ಳಾಪುರ: ರೇಷ್ಮೆ,ಹೈನುಗಾರಿಕೆ,ತರಕಾರಿ ಮತ್ತು ದ್ರಾಕ್ಷಿ ಉತ್ಪಾದನೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಹಿತ್ಯ ಮತ್ತುಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹ ಅಮೂಲ್ಯ ಸಾಧನೆ ಮಾಡಿ ಎಲೆಮರಿಕಾಯಿಯೆಂತೆ ಸೇವೆ ಸಲ್ಲಿಸುತ್ತಿರುವ ಸಾಧಕರಿದ್ದಾರೆ ಆ ಪಟ್ಟಿಯಲ್ಲಿ ಭರತನಾಟ್ಯ ಕಲಾವಿದೆ ವಿದುಷಿ ಡಾ.ಹೆಚ್. ಆಶಾಲತಾ ಗುರುಪ್ರಸಾದ್ ಸೇರಿಕೊಂಡಿದೆ.
ಕಲಾ ಕ್ಷೇತ್ರದಲ್ಲಿ ಸಾಧನೆ: ಲಲಿತಕಲೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ದೇಶ-ವಿದೇಶಗಳ ಕಲಾವಿದರಿಗೆ ಪರಿಚಯಿಸಿ ಹೊಸ ಕಲಾವಿದರನ್ನುತಯಾರು ಮಾಡುವ ಕೆಲಸವನ್ನು ಮಾಡುತ್ತಿರುವ ಡಾ.ಎಚ್.ಆಶಾಲತಾ ಗುರುಪ್ರಸಾದ್ ಚಿಕ್ಕಬಳ್ಳಾಪುರದ ನಿವಾಸಿ. ಎಕನಾಮಿಕ್ಸ್‌ನಲ್ಲಿ ಎಂ.ಎ ಮಾಡಿ ಭರತನಾಟ್ಯಂನಲ್ಲಿ ಎಂ.ಎಫ್.ಎ ಹಾಗೂ ಸಂಗೀತದಲ್ಲಿ ಎಂ.ಎ ಮಾಡಿರುವ ವಿದುಷಿ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಸಾಧನೆ ಮಾಡಿದ್ದಾರೆ.
ಆನ್‌ಲೈನ್ ಮೂಲಕ: ಭರತನಾಟ್ಯ ಮತ್ತು ಸಂಗೀತ ಕಲೆ ಕಲಿಸಿ ಭಾರತೀಯ ಸಂಸ್ಕೃತಿಯನ್ನುದೇಶ-ವಿದೇಶಗಳಲ್ಲಿ ಶ್ರೀಮಂತಗೊಳಿಸಲುಶ್ರಮಿಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಕಲಾಸಕ್ತರಿಗೆಆನ್‌ಲೈನ್ ಮೂಲಕವೇ ಭರತನಾಟ್ಯ ಮತ್ತುಸಂಗೀತ ಕಲೆ ಕಲಿಸುತ್ತಿದ್ದಾರೆ. ಇವರ ಅಮೋಘಸಾಧನೆ ಮತ್ತು ನೃತ್ಯ ರೂಪಕಗಳನ್ನು ನೋಡಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.
ಗಿನ್ನಿಸ್ ರೆಕಾರ್ಡ್ಸ್: 2018 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ “”ಸಸ್ಯ ಶ್ಯಾಮಲಾಂ ಮಾತರಂ ಒಂದೇ ಮಾತರಂ”ನಲ್ಲಿ ದೇಶಾದ್ಯಂತ 1126 ಜನ ಏಕಕಾಲದಲ್ಲಿಭರತ್ಯನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ 1080 ಜನರು ಆಯ್ಕೆಯಾಗಿದ್ದರು. ಈ ಸ್ಪರ್ಧೆಗೆ ಗಿನ್ನಿಸ್ ಹಾಗೂ ಏಷಿಯಾ ಬುಕ್ ಆಫ್ರೆಕಾರ್ಡ್, ಇಂಡಿಯಾ ಬುಕ್ ರೆಕಾರ್ಡ್ಸ್ ಗರಿ ಮೂಡಿತ್ತು. 12 ನಿಮಿಷ 12 ಸೆಕೆಂಡ್ ನೃತ್ಯರೂಪಕ ಪ್ರದರ್ಶಿಸಿದ್ದರು. ಇದರಲ್ಲಿ ಮರ ಕಡಿಯಬಾರದು ಎಂಬ ಸಂದೇಶ ಒಳಗೊಂಡಿತ್ತು.
ಭಾರತ, ಅಮೆರಿಕಾ, ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಮಲೇಷಿಯಾ ಸಹಿತ ಅನೇಕ ದೇಶ ವಿದೇಶಗಳಲ್ಲಿರುವ ಕಲಾವಿದರಿಗೆ ಆನ್‌ಲೈನ್ ಮೂಲಕ ಭರತನಾಟ್ಯ ಮತ್ತು ಸಂಗೀತ, ವೀಣೆಯಲ್ಲಿ ತರಬೇತಿ ನೀಡುತ್ತಿದ್ದಾರೆ.
ಸ್ವಾವಲಂಬಿ ಜೀವನ ನಡೆಸಬೇಕು :
ನಾಟ್ಯಬ್ರಹ್ಮ ಎಂಬ ಬಿರುದು ಪಡೆದುಕೊಂಡಿರುವ ವಿದುಷಿ ಡಾ.ಹೆಚ್.ಆಶಾಲತಾ ಗುರುಪ್ರಸಾದ್ ಉದಯವಾಣಿಯೊಂದಿಗೆ ಮಾತನಾಡುತ್ತಾ, ಮಹಿಳೆಯರು ಇಂದು ಅನೇಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ನೌಕಾಪಡೆ, ಸೇನೆ, ಪೈಲಟ್ ಆಗಿ ಕೆಲಸವನ್ನು ಮಾಡುವ ಛಾಪು ಮೂಡಿಸಿದ್ದಾರೆ. ಆದರೂ ಸಹ ಇನ್ನಷ್ಟು ಸಾಧನೆ ಮಾಡಬೇಕು. ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿ ಅಂತ್ಯಗೊಳ್ಳಬೇಕು. ಕಳೆದ 35 ವರ್ಷದಲ್ಲಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಲಲಿತಕಲೆಯಲ್ಲಿ ಸಹ ಮಹಿಳೆಯರು ಆಸಕ್ತಿ ವಹಿಸಿ ವಿದ್ಯಾವಂತರಾಗಿ ಸ್ವಾವಲಂಬಿ ಜೀವನ ನಡೆಸಬೇಕು.