Advertisement
ಬುಧವಾರ ಶಾರದಾ ಇಂಟರ್‌ನ್ಯಾಶನಲ್‌ನಲ್ಲಿ ಬಿಜೆಪಿ ವತಿಯಿಂದ ಮೀನುಗಾರರು ಹಾಗೂ ಚಿಂತಕರಿಗಾಗಿ ಆಯೋಜಿಸಲಾಗಿದ್ದ “ಮನ್ ಕಿ ಬಾತ್ ಮೋದಿ ಕೆ ಸಾಥ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಮಂತರು ಗ್ಯಾಸ್ ಸಬ್ಸಿಡಿ ತ್ಯಜಿಸಬೇಕು ಎಂಬ ಮನವಿಗೆ ದೇಶದ 1.25 ಕೋಟಿ ಮಂದಿ ಸ್ಪಂದಿಸಿದ್ದಾರೆ. ಇದರಿಂದಾಗಿ 8 ಕೋಟಿ ಮಂದಿಗೆ ಗ್ಯಾಸ್ ನೀಡಲು ಸಾಧ್ಯವಾಯಿತು ಎಂದರು.
ಮೋದಿ ಸರಕಾರ ಸ್ಪಷ್ಟ ಗುರಿ ಮತ್ತು ನೀತಿ ಹೊಂದಿದೆ. ಜನಧನ ಮೂಲಕ ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಿದೆ. ಬಡವರಿಗೆ ಉಚಿತ ಮನೆ, ಗ್ಯಾಸ್ ಸಂಪರ್ಕ ನೀಡಿದೆ. ಮುದ್ರಾ ಯೋಜನೆಯಿಂದಾಗಿ ನವ ಉದ್ಯಮಿಗಳು ಭದ್ರತೆ ಇಲ್ಲದೆ ಸಾಲ ಪಡೆಯಲು ಸಾಧ್ಯವಾಗಿದೆ. ಇಂದು ಭಾರತೀಯ ಸೇನೆ ಜಗತ್ತಿನಲ್ಲಿ 3ನೇ ಸ್ಥಾನಕ್ಕೇರಿದೆ ಎಂದರು. ಬೋಟ್ ಪತ್ತೆಗೆ ಗರಿಷ್ಠ ಯತ್ನ
ಬೋಟ್ ಸಹಿತ ನಾಪತ್ತೆಯಾಗಿರುವ ಮೀನು ಗಾರರ ಪತ್ತೆಗೆ ಕೇಂದ್ರ ಸರಕಾರ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಮೀನುಗಾರರು ತಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಬಹುದು. ಅದರಿಂದ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದರು.
Related Articles
Advertisement
ರಾಜ್ಯ ಅಸಹಕಾರಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, “ಕೇಂದ್ರದ ಅನೇಕ ಯೋಜನೆಗಳ ಪ್ರಯೋಜನ ಜನರಿಗೆ ದೊರೆಯಲು ರಾಜ್ಯದ ಸರಕಾರ ಅಡ್ಡಿಯಾಗಿದೆ. ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಡಿ ಕುಟುಂಬದ ಪ್ರತಿಯೋರ್ವರಿಗೂ ಖಾಸಗಿ ಆಸ್ಪತ್ರೆಗಳಲ್ಲಿ 5 ಲ.ರೂ. ವೆಚ್ಚದ ಚಿಕಿತ್ಸೆ ಉಚಿತವಾಗಿ ದೊರೆಯುವಂತೆ ಮಾಡುತ್ತಿದೆ. ಉಜ್ವಲ ಯೋಜನೆಯಲ್ಲಿ ರಾಜ್ಯದ ಅಡ್ಡಿ ಇರಬಾರದೆಂಬ ಕಾರಣಕ್ಕೆ ತೈಲ ಕಂಪೆನಿಗಳ ಮೂಲಕ ನೇರವಾಗಿ ಜನರಿಗೆ ತಲುಪಿಸಿತು. ರೈತರಿಗೆ ನೀಡಿದ ಶೇ. 3 ಸಬ್ಸಿಡಿಯನ್ನು ರಾಜ್ಯ ಸರಕಾರ ಹಿಡಿದಿಟ್ಟುಕೊಂಡಿದೆ ಎಂದರು. ಮಾಹಿತಿಗೆ ಗಡು
ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಹಡಗಿನ ತಳಭಾಗಕ್ಕೆ ಢಿಕ್ಕಿಯಾಗಿರುವುದೇನು? ಅದು ಸುವರ್ಣ ತ್ರಿಭುಜವೇ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಒತ್ತಾಯಿಸಿದರು. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಡಾ| ವೈ. ಭರತ್ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಗಣ್ಯರಾದ ಉದಯ ಕುಮಾರ್ ಶೆಟ್ಟಿ, ಸದಾನಂದ ಬಳ್ಕೂರು, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು. ಸಂಚಾಲಕ ಯಶ್‌ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಮತ್ತು ಕುಯಿಲಾಡಿ ಸುರೇಶ್ ನಾಯಕ್ ನಿರ್ವಹಿಸಿದರು.