Advertisement

Congress ಶೀಘ್ರದಲ್ಲೇ ಭಾರತ್ ಜೋಡೋ ಯಾತ್ರೆ 2.0

02:00 AM Aug 09, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವ ಪುನರ್‌ಸ್ಥಾಪನೆಗೊಂಡ ಬೆನ್ನಲ್ಲೇ ಕಾಂಗ್ರೆಸ್‌ ಮತ್ತೆ ಚುರುಕಾಗಿದೆ. ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆ ಆರಂಭಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾರಂಭಿಸಿದೆ.

Advertisement

ಈ ಬಾರಿ ರಾಹುಲ್‌ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದು, ಶೀಘ್ರದಲ್ಲೇ “ಭಾರತ್‌ ಜೋಡೋ 2.0′ ಆರಂಭವಾಗಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಮಂಗಳವಾರ ಹೇಳಿದ್ದಾರೆ.

2ನೇ ಹಂತದಲ್ಲಿ ರಾಹುಲ್‌ ಅವರು ಗುಜರಾತ್‌ನಿಂದ ಮೇಘಾಲಯಕ್ಕೆ ಯಾತ್ರೆ ನಡೆಸಲಿದ್ದಾರೆ.

ಯಾತ್ರೆಯ ರೂಪುರೇಷೆಗಳು ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿಯಾಗಲಿದೆ ಎಂದೂ ಪಟೋಲೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next