Advertisement

ಭಾರತ್ ಜೋಡೋ ; ಮಾಜಿ ಸೈನಿಕರೊಂದಿಗೆ ರಾಹುಲ್ ಪಾದಯಾತ್ರೆ

06:58 PM Oct 22, 2022 | Team Udayavani |

ರಾಯಚೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮಾಜಿ ಸೈನಿಕರೊಂದಿಗೆ ಪಾದಯಾತ್ರೆ ನಡೆಸಿದರು.

Advertisement

ಇಂದು ಬೆಳಗ್ಗೆ ಜಿಲ್ಲೆಯ ಯರಗೇರಾದಲ್ಲಿ ಆರಂಭವಾದ 45ನೇ ದಿನದ ಯಾತ್ರೆ ಸಂಜೆ ರಾಯಚೂರು ನಗರದ ಬಸವೇಶ್ವರ ವೃತ್ತದ ಮೈದಾನದಲ್ಲಿ ಮುಕ್ತಾಯಗೊಂಡಿತು. ಮಾಜಿ ಸೈನಿಕರ ರಾಯಚೂರು ಜಿಲ್ಲಾ ಸಂಘದ ಸದಸ್ಯರು ರಾಷ್ಟ್ರಧ್ವಜ ಹಿಡಿದು ಗಾಂಧಿಯವರೊಂದಿಗೆ ಮೆರವಣಿಗೆ ನಡೆಸಿದರು.

ಮಾಜಿ ಸೈನಿಕರೊಂದಿಗೆ ಓಡಿರುವ ಸಣ್ಣ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ , ಸೈನಿಕರನ್ನು “ದೇಶದ ಗಡಿ ದೇಶದ ಭದ್ರತೆ ಇಂದು ಇವರಿಂದ ಸುರಕ್ಷಿತವಾಗಿದೆ. ಇವರು ದೇಶದ ರಕ್ಷಾ ಕವಚದಂತೆ. ದೇಶಾಭಿಮಾನಕ್ಕೆ ಇವರೇ ಸ್ಫೂರ್ತಿ. ಜೈ ಜವಾನ್! ಜೈ ಹಿಂದ್!” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ : ಪೋಷಕರಿಂದ ತಿಂಗಳಿಗೆ 100 ರೂ. ಸಂಗ್ರಹ ; ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ

ಶುಕ್ರವಾರ ಬೆಳಗ್ಗೆ ರಾಯಚೂರು ಗಡಿಭಾಗದ ಗಿಲ್ಲೇಸುಗೂರು ಬಳಿ ರಾಜ್ಯವನ್ನು ಪ್ರವೇಶಿಸಿದ ಯಾತ್ರೆಯು ಜಿಲ್ಲೆಯ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಹಾದು ಅಕ್ಟೋಬರ್ 23 ರಂದು ನೆರೆಯ ತೆಲಂಗಾಣವನ್ನು ಪ್ರವೇಶಿಸಲಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಇಂದು ಗಾಂಧಿ ಜೊತೆಗೆ ಮೆರವಣಿಗೆಯಲ್ಲಿ ಭಾಗಿಯಾದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next