Advertisement

Bharat: ರೈಲ್ವೆ ಪ್ರಸ್ತಾವನೆಯಲ್ಲೂ ‘ಇಂಡಿಯಾ’ ಬದಲು “ಭಾರತ”

06:52 PM Oct 28, 2023 | Team Udayavani |

ನವದೆಹಲಿ: “ಇಂಡಿಯಾ’ ಎಂಬ ಹೆಸರನ್ನು “ಭಾರತ” ಎಂದು ಬದಲಾಯಿಸಲಾಗುತ್ತದೆ ಎಂಬ ಚರ್ಚೆಗಳ ನಡುವೆಯೇ ಹೊಸ ಬೆಳವಣಿಗೆಯೊಂದು ನಡೆದಿದೆ. ರೈಲ್ವೇ ಸಚಿವಾಲಯವು ಕೇಂದ್ರ ಸಂಪುಟಕ್ಕೆ ಕಳುಹಿಸಿರುವ ಯೋಜನೆಯ ಪ್ರಸ್ತಾವನೆಯೊಂದರಲ್ಲಿ “ಇಂಡಿಯಾ” ಎಂದು ಮುದ್ರಿಸಬೇಕಾದಲ್ಲೆಲ್ಲ, “ಭಾರತ” ಎಂದು ಉಲ್ಲೇಖಿಸಿ ಕಳುಹಿಸಿದೆ.

Advertisement

ಹೀಗಾಗಿ ಹೆಸರು ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದಿದ್ದ ಜಿ20 ಸಮ್ಮೇಳನದ ವೇಳೆ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದ್ದ ಔತಣಕೂಟದ ಆಹ್ವಾನದಲ್ಲಿ “ಪ್ರಸಿಡೆಂಟ್‌ ಆಫ್ ಭಾರತ್‌” ಎಂದು ಮುದ್ರಿಸಲಾಗಿತ್ತು. ಇತ್ತೀಚೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಎಲ್ಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ’ ಬದಲು “ಭಾರತ” ಎಂದು ಬದಲಾಯಿಸುವಂತೆ ಸಲಹೆ ನೀಡಿತ್ತು.

ಕೇಂದ್ರ ಸರ್ಕಾರ ದೇಶದ ಹೆಸರು ಬದಲಾವಣೆ ಮಾಡುವ ಬಗ್ಗೆ ಪ್ರಯತ್ನ ನಡೆಸುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ, ಇದಕ್ಕೆಲ್ಲ ಸೊಪ್ಪು ಹಾಕದ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಪ್ರಕಟವಾಗುವ ಸರ್ಕಾರಿ ದಾಖಲೆಗಳಲ್ಲಿ, “ಭಾರತ” ಎಂದು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next