ಹೊಸದಿಲ್ಲಿ: ಮುಂದಿನ ತಿಂಗಳಿಂದ 15-18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡುತ್ತಿದ್ದಂತೆಯೇ ಭಾರತ್ ಬಯೋಟೆಕ್‌ನ ಮಕ್ಕಳ ಲಸಿಕೆಗೆ ಅನುಮೋದನೆ ಸಿಕ್ಕಿದೆ.
ಭಾರತದ ಪ್ರಧಾನ ಔಷಧ ನಿಯಂತ್ರಕರು (ಡಿಸಿಜಿಐ) ಹೈದ ರಾಬಾದ್‌ನ ಭಾರತ್ ಬಯೋಟೆಕ್ ಸಂಶೋಧಿಸಿ ಸಿದ್ಧಪಡಿಸಿರುವ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿದ್ದಾರೆ. ಭಾರತ್ ಬಯೋಟೆಕ್‌ನ ಲಸಿಕೆಯನ್ನು 12 ವರ್ಷಗಳಿಗಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಈಗಾಗಲೇ ಡಿಸಿಜಿಐ ಝೈಡಸ್ ಕ್ಯಾಡಿಲಾ ಕಂಪೆನಿಯ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಲು ಅನುಮೋದನೆ ನೀಡಲಾಗಿದೆ. ಅದು ಮೂರು ಡೋಸ್ ಲಸಿಕೆಯಾಗಿದ್ದು, ದೇಶದ ಮೊದಲ ಡಿಎನ್‌ಎ ಆಧಾರಿತವಾಗಿದೆ.
ಆತಂಕ ಬೇಡ: ಭಾರತದಲ್ಲಿ ಒಮಿಕ್ರಾನ್ ಕೇಸುಗಳು ಹೆಚ್ಚಾಗುವುದು ಖಂಡಿತ. ಆದರೆ ಅದರ ತೀವ್ರತೆ ಆತಂಕಕಾರಿಯಾಗಿ ಇರುವು ದಿಲ್ಲ ಎಂದು ದಕ್ಷಿಣ ಆಫ್ರಿಕದಲ್ಲಿ ಹೊಸ ರೂಪಾಂತರಿಯನ್ನು ದೃಢಪಡಿಸಿದ ವೈದ್ಯೆ ಡಾ| ಆ್ಯಂಜಿಲೀಕ್ ಕೋಟ್ಜೆ ಹೇಳಿದ್ದಾರೆ. ಸಂದರ್ಶ ನದಲ್ಲಿ ಮಾತನಾಡಿದ ಅವರು, ಈಗಿನ ಲಸಿಕೆಗಳಿಗೇ ಹೊಸ ರೂಪಾಂತರಿ ತಡೆವ ಸಾಮರ್ಥ್ಯ ಇದೆ ಎಂದರು.
ದಿಲ್ಲಿ, ಮುಂಬಯಿಯಲ್ಲಿ ಹೆಚ್ಚು: ದಿಲ್ಲಿ ಯಲ್ಲಿ ಶನಿವಾರ 249 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜೂ.13ರ ಬಳಿಕ ಒಂದು ದಿನದ ಅವಧಿಯಲ್ಲಿ ಗರಿಷ್ಠ ಮಟ್ಟದ ಏರಿಕೆ ಇದಾಗಿದೆ. ಮಹಾರಾಷ್ಟ್ರದಲ್ಲಿ 1,485 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 12 ಮಂದಿ ಅಸುನೀಗಿದ್ದಾರೆ. ಮುಂಬಯಿ ಯಲ್ಲಿ 757 ಹೊಸ ಪ್ರಕರಣಗಳು ದೃಢಪ ಟ್ಟಿವೆ. ಇದು ಜೂ.24ರ ಬಳಿಕ ಗರಿಷ್ಠದ್ದಾಗಿದೆ.
ಚೇತರಿಕೆಯೇ ಹೆಚ್ಚು: ಕೇರಳದಲ್ಲಿ 3,377 ಮಂದಿ ಸೋಂಕಿನಿಂದ ಚೇತರಿಸಿಕೊಂಡಿ ದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಸಂಖ್ಯೆಗಿಂತ ಚೇತರಿಕೆ ಸಂಖ್ಯೆ ಅಧಿಕವಾಗಿದೆ. ರಾಜ್ಯದಲ್ಲಿ ಹೊಸತಾಗಿ 2,407 ಹೊಸ ಕೇಸ್‌ಗಳು ದೃಢಪಟ್ಟಿವೆ.
ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಿದರೆ ಲಾಕ್‌ಡೌನ್ :
ಮಹಾರಾಷ್ಟ್ರದಲ್ಲಿ ಮೆಡಿಕಲ್ ಆಕ್ಸಿಜನ್ 800 ಮೆಟ್ರಿಕ್ ಟನ್‌ಗೆ ತಲುಪಿದರೆ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಸದ್ಯ ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ಬಳಕೆಯಾಗುತ್ತಿದೆ ಮತ್ತು ಅದಕ್ಕೆ ಬೇಡಿಕೆ ಇದೆ ಎಂಬ ಬಗ್ಗೆ ಅವರು ವಿವರ ನೀಡಿಲ್ಲ. ಜನರಿಗೆ ಲಾಕ್‌ಡೌನ್ ಹೆಸರಲ್ಲಿ ತೊಂದರೆ ನೀಡಲು ಬಯಸು ವುದಿಲ್ಲ. ಹೀಗಾಗಿ ಎಲ್ಲರೂ ಕೊರೊನಾ ನಿಯಮಗಳನ್ನು ಪಾಲಿಸ ಬೇಕು ಎಂದು ಮನವಿ ಮಾಡಿದರು.