Advertisement

ಭಂಡಾರಿ ವರ್ಟಿಕಾ ದುಬೈನಲ್ಲಿ  ವಸತಿ ಸಮುಚ್ಚಯದ ಬುಕ್ಕಿಂಗ್‌ ಆರಂಭ

05:14 PM Jun 05, 2017 | |

ಮಂಗಳೂರು: ನಗರದ ಪ್ರತಿuತ ಬಿಲ್ಡರ್ ಆ್ಯಂಡ್‌ ಡೆವಲಪರ್ ಭಂಡಾರಿ ಬಿಲ್ಡರ್ನವರ ಅತೀ ಎತ್ತರದ ಮಹತ್ವಾಕಾಂಕ್ಷೆಯ 56 ಮಹಡಿಯ ವಸತಿ ಸಮುಚ್ಚಯ ಯೋಜನೆ ಭಂಡಾರಿ ವರ್ಟಿಕಾ ಇದರ ಬುಕ್ಕಿಂಗ್‌ ಮೇ. 24 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್‌ನಲ್ಲಿ ಬ್ರೋಶರ್‌ ಅನಾವರಣದೊಂದಿಗೆ ಆರಂಭಗೊಂಡಿತು.

Advertisement

ಈ ಕಾರ್ಯಕ್ರಮದಲ್ಲಿ ದುಬೈನ ಕನ್ನಡ ಮತ್ತು ತುಳುಭಾಷಾ ಪ್ರವರ್ತಕ ಸವೋತ್ತಮ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಕೂಟದ ಅಧ್ಯಕ್ಷ ಮತ್ತು ಫಾರ್ಚೂನ್‌ ಗ್ರೂಪ್‌ನ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಹೊಟೇಲ್‌ ಉದ್ಯಮಿ ಕರುಣಾಕರ ಶೆಟ್ಟಿ, ಅರಬ್‌ ಉಡುಪಿ ಹೊಟೇಲ್‌ ಸಮೂಹದ ಅಧ್ಯಕ್ಷ ಎಸ್‌. ಬಿ. ಶೆಟ್ಟಿ, ಉದ್ಯಮಿಗಳಾದ ಸುಂದರ ಶೆಟ್ಟಿ ಹಾಗೂ ಸುಜತ್‌ ಶೆಟ್ಟಿ ಉಪಸ್ಥಿತರಿದ್ದರು.

ಭಂಡಾರಿ ವರ್ಟಿಕಾ ಅತೀ ಎತ್ತರದ 56 ಮಹಡಿಗಳ ವಸತಿ ಕಟ್ಟಡದ ತಾಂತ್ರಿಕ ರೂಪುರೇಷಗಳ ಬಗ್ಗೆ ಭಂಡಾರಿ ಬಿಲ್ಡರ್ನ ಆಡಳಿತ ನಿರ್ದೇಶಕ ಲಕ್ಷ್ಮೀಶ್‌ ಭಂಡಾರಿ ವಿವರ ನೀಡಿದರು.  ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವೇಣುಶರ್ಮಾ ಪ್ರಸ್ತಾವನೆಗೈದರು.

ಭಂಡಾರಿ ವರ್ಟಿಕಾ ಒಟ್ಟು  56 ಅಂತಸ್ತು

ಭಂಡಾರಿ ವರ್ಟಿಕಾ ಒಟ್ಟು 56 ಅಂತಸ್ತುಗಳನ್ನು ಹೊಂದಿದ್ದು ದಕ್ಷಿಣ ಭಾರತದಲ್ಲೇ ಅತೀ ಎತ್ತರದ ವಸತಿ ಸಮುಚ್ಚಯ ಕಟ್ಟಡವಾಗಿ ಹೊರಹೊಮ್ಮಲಿದೆ.  ಇದು ನಿಜವಾಗಿಯೂ ಸ್ಮಾರ್ಟ್‌ ಸಿಟಿಯಾಗಿ ಪರಿವರ್ತನೆಗೊಳ್ಳುವ ಮಂಗಳೂರು ಮಹಾನಗರಕ್ಕೆ ಹೆಮ್ಮೆ ವಿಷಯವೆನಿಸಲಿದೆ ಹಾಗೂ ಉತ್ತಮ ಕೊಡುಗೆಯಾಗಿದೆ. ಮೆ| ಗ್ಲೋಬಲ್‌ ಸ್ಟಾರ್‌ ರಿಯಲ್ಟರ್ ಈ ವಸತಿ ಸಮುಚ್ಚಯ ಯೋಜನೆಯ ಸಹ ಪ್ರವರ್ತಕರಾಗಿದ್ದು ಹಲವು ಪ್ರಥಮಗಳ ವಿಶೇಷತೆಗಳನ್ನು ಹೊಂದಿವೆ.  

Advertisement

ಈ ಭಂಡಾರಿ ವರ್ಟಿಕಾ 56 ಅಂತಸ್ತುಗಳಲ್ಲಿ 33 ಅಂತಸ್ತುಗಳವರೆಗೆ ಒಂದೇ ಫ್ಲಾÂಟ್‌ ಹೊಂದಿದ್ದು, 34 ಅಂತಸ್ತಿನಿಂದ  ಎರಡು ಅಂತಸ್ತುಗಳ  ಫ್ಲಾÂಟ್‌ಗಳನ್ನು ಹೊಂದಿವೆ.  ಈ ವಸತಿ ಸಮುಚ್ಚಯದ ಮಾಲಕರುಗಳಿಗೆ ಸುರಕ್ಷತೆಗೆ ವಿಶೇಷ ಕಾಳಜಿಯೊಂದಿಗೆ ಹಲವಾರು ವೈಶಿಷ್ಟéಗಳ ಸವಲತ್ತುಗಳನ್ನು ಒದಗಿಸಲಾಗುತ್ತಿದೆ.  

ಮಂಗಳೂರಿನಲ್ಲೇ ಪ್ರಥಮ ಬಾರಿಗೆ ರೆಸಿಡೆನ್ಸಿಯಲ್‌ ಅಳವಡಿಸಲಾದ ಭಂಡಾರಿ ವರ್ಟಿಕಾದ ಮುಖ್ಯದ್ವಾರದಲ್ಲಿ ಡಿಜಿಟಲ್‌ ಲಾಕ್‌, 360 ಡಿಗ್ರಿ ಸಿಸಿಟಿವಿ ಕವರೇಜ್‌, ಚಳಿಗಾಲದಲ್ಲಿ ಬಿಸಿ, ಸೆಕೆಗಾಲದಲ್ಲಿ  ತಣ್ಣೀರು ವಿಶೇಷತೆಯ ವಾತಾವರಣ ನಿಯಂತ್ರಣದ ಈಜುಕೊಳ, ವ್ಯಾಲೆಟ್‌ ಪಾರ್ಕಿಂಗ್‌, ಆವರಣದೊಳಗೆ ಆಟವಾಡಲು ತೆರಳುವ ಮಕ್ಕಳನ್ನು ಗಮನಿಸಲು ಜಿಪಿಎಸ್‌ ಟ್ರಾÂಕರ್‌, ಜಿಯೋ ಫೆನ್ಸಿಂಗ್‌ ಅಲರಾಂ, ಭಂಡಾರಿ ವರ್ಟಿಕಾ ರೆಸಿಡೆಂಟ್‌ ಆ್ಯಪ್‌, ಎಮರ್ಜೆನ್ಸಿ ಲಿಫ್ಟ್‌ ಇಂತಹ ಹಲವಾರು ವಿಶಿಷ್ಟ ವೈಶಿಷ್ಟÂತೆಗಳನ್ನು  ಅಳವಡಿಸಲಾಗಿದೆ.

ವಿವಿಧ ಸೌಲಭ್ಯÂಗಳು
ಈ ವಸತಿ ಸಮುಚ್ಚಯದಲ್ಲಿ ಆಧುನಿಕ ಸುಸಜ್ಜಿತ ಜಿಮ್ನೆàಶಿಯಂ, ಸ್ನೂಕರ್‌, ಟೇಬಲ್‌ ಟೆನ್ನಿಸ್‌, ಚಿಲ್ಡ್ರನ್ಸ್‌ ಪ್ಲೇ ಏರಿಯಾ, ಸ್ಟೀಮ್‌ ಬಾತ್‌ ಎಂಡ್‌ ಜಾಕುಸಿ, ಜಾಗರ್ ಟ್ರಾÂಕ್‌, ಸೈಕ್ಲಿಂಗ್‌ ಬೇ, ಡಿಜಿಟಲ್‌ ಗೇಮಿಂಗ್‌ ಝೋನ್‌, ರೂಫ್‌ ಟಾಪ್‌ ಪಾರ್ಟಿ ಹಾಲ್‌, ಸೆಂಟ್ರಲೈಸ್ಡ್ ಎಸಿ, ಆರ್‌ಎಫ್‌ಐಡಿ ಲಿಫ್ಟ್‌, ಫೌಂಟೇನ್‌ಯುಕ್ತ ಲ್ಯಾಂಡ್‌ಸ್ಕೇಪ್‌ ಗಾರ್ಡನ್‌, ಕಾರು ಪಾರ್ಕ್‌ ಮತ್ತು ಕಾಮನ್‌ ಏರಿಯಾಗಳಲ್ಲಿ ಸೆನ್ಸರ್‌ ಲೈಟ್‌ಸ್ಕೈ, ಗಾರ್ಡನ್‌, ಅಬ್ಸರ್‌ವೆàಶನ್‌ ಡೆಕ್‌, ನೆಟ್‌ವರ್ಕ್‌ ಬೂಸ್ಟರ್‌, ಬಾಸ್ಕೆಟ್‌ ಬಾಲ್‌ ಮತ್ತು ಸ್ಕೇಟಿಂಗ್‌ ರಿಂಕ್‌, ಕಾರು ಪಾರ್ಕಿಂಗ್‌ಗಳಲಿ ಎಲೆಕ್ಟಿÅಕಲ್‌ ಕಾರುಗಳಿಗೆ ಚಾರ್ಜಿಂಗ್‌ ಪಾಯಿಂಟ್‌ಗಳು, ಕಾರ್‌ ಪಾಕ್‌ ಆ್ಯಕ್ಸೆಸ್‌ ಎಂಟ್ರಿ, ಪೈಪ್‌ಡ್‌ ಮ್ಯೂಸಿಕ್‌ ಸಿಸ್ಟಮ್‌, ಹೊರಾಂಗಣದ ಲೆ„ಟಿಂಗ್‌ ವ್ಯವಸ್ಥೆ ಹಾಗೂ ಎಲ್‌ಯುಎಕ್ಸ್‌ ಕಂಟ್ರೋಲ್‌ನೊಂದಿಗೆ ಬಿಲ್ಡಿಂಗ್‌ ಲೈಟ್‌ ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next