Advertisement

ನರೇಗಾ ಸದ್ಬಳಕೆ ಮಾಡಿಕೊಳ್ಳಿ

01:57 PM May 02, 2020 | Naveen |

ಭಾಲ್ಕಿ: ಲಾಕ್‌ಡೌನ್‌ ನಂತಹ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ತಾಲೂಕಿನ ಜೋಳದಾಪಕಾ, ಜ್ಯಾಂತಿ, ರುದನೂರ, ಹಾಲಹಳ್ಳಿ(ಕೆ), ತೇಗಂಪುರ ಗ್ರಾಮಗಳಿಗೆ ಭೇಟಿ ನೀಡಿ ನರೇಗಾದಡಿ ನಡೆಯುತ್ತಿರುವ ನಾಲಾ ಟರ್ನಿಂಗ್‌, ಕ್ಷೇತ್ರಬದು ನಿರ್ಮಾಣ, ಕೆರೆ ಸೇರಿ ವಿವಿಧ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕೋವಿಡ್‌ 19 ಸೋಂಕು ಹರಡುವಿಕೆ ಭೀತಿಯಿಂದ ವಿಶ್ವವೇ ತಲ್ಲಣಗೊಂಡಿದೆ. ಈ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಇಂತಹ ತುರ್ತು ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಯಾರೊಬ್ಬರು ಧೈರ್ಯ ಕಳೆದು ಕೊಳ್ಳಬಾರದು ನಿಮ್ಮೊಂದಿಗೆ ನಾನಿದ್ದೇನೆ. ಕೋವಿಡ್ ರೋಗದ ಬಗ್ಗೆ ಭಯ ಬೇಡ. ಆದರೆ ಎಚ್ಚರದಿಂದ ಇರಬೇಕು. ಈಗಾಗಲೇ ಅಗತ್ಯ ಇರುವ ಕಡೆಗಳಲ್ಲಿ ಆಹಾರದ ಪೊಟ್ಟಣ, ತರಕಾರಿ ಕಿಟ್‌, ಮಾಸ್ಕ್ ಸೇರಿ ಪ್ರತಿಯೊಬ್ಬರಿಗೂ ಎರಡು ತಿಂಗಳ ಮುಂಗಡ ಪಡಿತರ ನೀಡುವುದು, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಂಡಿದ್ದು, ಸಮಾರೋಪಾದಿಯಲ್ಲಿ ಎಲ್ಲ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ನರೇಗಾದಡಿ ಒಬ್ಬರಿಗೆ ದಿನವೊಂದಕ್ಕೆ 275 ರೂ. ಯಂತೆ ಒಂದು ಪರಿವಾರಕ್ಕೆ ಕನಿಷ್ಠ 50 ದಿನ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಅದರಂತೆ ಎಲ್ಲ ಪಂಚಾಯಿತಿ ವ್ಯಾಪ್ತಿಗಳಲ್ಲಿ ನರೇಗಾದಡಿ ಕೆಲಸ ಪ್ರಾರಂಭವಾಗಿದೆ. ವಾರಕ್ಕೊಮ್ಮೆ ಕೂಲಿ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಯಾರು ಭಯ ಪಡಬೇಕಿಲ್ಲ ಎಂದು ಹೇಳಿದರು. ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಬಸವರಾಜ ನಾಯಕರ್‌, ಡಿವೈಎಸ್‌ಪಿ ಡಾ| ದೇವರಾಜ ಬಿ., ಗ್ರಾಪಂ ಅಧ್ಯಕ್ಷ ರವೀಂದ್ರ ಪಾಟೀಲ, ಶಶಿಧರ ಕೋಸಂಬೆ, ಪಿಕೆಪಿಎಸ್‌ ಅಧ್ಯಕ್ಷ ರಾಜಕುಮಾರ ಬಿರಾದಾರ, ವೈಜಿನಾಥ ಪಾಟೀಲ, ಬಸವರಾಜ ಪಾಟೀಲ, ಚಂದ್ರಕಾಂತ ಜ್ಯೊತೇಪ್ಪ, ಸಂಜು ಡೋಳಿ, ಶಿವ ಸದಾಶಿವ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ಪ್ರಭಾ, ರಮೇಶ ಪ್ರಭಾ, ಧನರಾಜ ಪಾಟೀಲ, ಸಂಜು ಪ್ರಭಾ, ರಾಜು ಕುಂಬಾರ, ಸತೀಶ ಮಡಿವಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next