Advertisement

ಶರಣರ ವಾಣಿ ಆಲಿಸಿ ಪಾವನರಾಗಿ

01:33 PM Jan 13, 2020 | Naveen |

ಭಾಲ್ಕಿ: ಆಧುನಿಕ ವ್ಯಕ್ತಿ ಹಣ ಗಳಿಸುವ ನೆಪದಲ್ಲಿ ಧಾರ್ಮಿಕ ಕಾರ್ಯಗಳಿಂದ ದೂರ ಉಳಿಯುತ್ತಿರುವುದರಿಂದ ಕೌಟುಂಬಿಕ ಮಾಯಾ, ಮಮತೆ, ವಾತ್ಸಾಲ್ಯ, ಪ್ರೀತಿ, ವಿಶ್ವಾಸ ಪರಸ್ಪರರಲ್ಲಿ ಕ್ಷೀಣಿಸುತ್ತಿದೆ. ಮನುಷ್ಯ ತನ್ನ ಜೀವನ ಪಾವನ ಮಾಡಿಕೊಳ್ಳಲು ಸಂತರ, ಸತ್ಪರುಷರ, ಮಾಹಾತ್ಮರ, ಶರಣರ ವಾಣಿ ಆಲಿಸುವುದು ಅಗತ್ಯವಾಗಿದೆ ಎಂದು ಗುಂಜರಗಾದ ಕೀರ್ತನಕಾರ ರಾಜೇಶ ಪಾಟೀಲ ಮಹಾರಾಜ ಹೇಳಿದರು.

Advertisement

ಪಟ್ಟಣದ ಅಡತ ಬಜಾರನಲ್ಲಿರುವ ವಿಠ್ಠಲ  ರುಕ್ಮೀಣಿ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ ಅಖಂಡ ಹರಿನಾಮ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಗಾಳಿ, ವಿದ್ಯುತ್‌ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದರ ಮಹಿಮೆ ಅಪಾರ, ಹಾಗೆ ಪ್ರಪಂಚದಲ್ಲಿ ದೇವರು ಗೋಚರವಾಗುವುದಿಲ್ಲ. ಆದರೆ ದೇವರ ಶಕ್ತಿ ಅಪಾರವಾಗಿದೆ. ಸಂತ ಜ್ಞಾನೇಶ್ವರ ಮಹಾರಾಜರು, ಸಂತ ತುಕಾರಾಮ ಮಹಾರಾಜರು ತಮ್ಮ ದೈವತ್ವದ ವಾಣಿಯಿಂದ ಭಕ್ತರು ಜೀವನ ಪರಿವರ್ತನೆ ಮಾಡುವಲ್ಲಿ ದೇವ ನಾಮಸ್ಮರಣೆಗೆ ಪ್ರಥಮಾದ್ಯತೆ ನೀಡಿದರು. ಭಕ್ತರು ತಾತ್ಕಾಲಿಕ ಭೌತಿಕ ಸುಖಕ್ಕೆ ಮರುಳಾಗದೆ ಆಧ್ಯಾತ್ಮಿಕ ಜ್ಞಾನ ಸಂಪಾದನೆಗೆ ಹೆಚ್ಚಿನ ಒಲವು ತೋರಬೇಕು ಎಂದು ಹೇಳಿದರು.

ಅಖಂಡ ಹರಿನಾಮ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸಮಾರಂಭದಲ್ಲಿ ಕೀರ್ತನಕಾರ ಬಿಜಲಗಾಂವದ ಶಿವಾಜಿರಾವ ಮಹಾರಾಜ, ಭಾಲ್ಕಿಯ ನರಸಿಂಗರಾವ ತೋರಣೆಕರ್‌ ಗುರುಜಿ, ಮುಖೇಡದ ಜ್ಞಾನೇಶ್ವರ
ಮಹಾರಾಜ, ಪಂಢರಪುರದ ಏಕನಾಥ ಮಹಾರಾಜ ಹಂಡೆ, ಎಕಂಬಾದ ಅವಧೂತ ಮಹಾರಾಜ, ಲಖಣಗಾಂವದ ಚೈತನ್ಯ ಮಹಾರಾಜ ಮತ್ತು ಕಳಸದಾಳ, ಹುಪಳಾ, ವಳಸಂಗ, ಧಾರಜವಾಡಿ, ಕೊಟಗ್ಯಾಳವಾಡಿ ಗ್ರಾಮದ ಭಜನಾ ಮಂಡಳಿಗಳು ಕೀರ್ತನೆ, ಭಜನೆ ನಡೆಸಿಕೊಟ್ಟರು.

ಪ್ರೊ| ಡಿ.ಜಿ. ಬಿರಾದಾರ, ಬಾಲಾಜಿರಾವ ತುಕದೆ ಮತ್ತು ಡಿಗಂಬರರಾವ ಕೊಟಗ್ಯಾಳೆ ಪ್ರಸಾದ ದಾಸೋಹಿಗಳಾಗಿದ್ದರು. ಪ್ರಮುಖರಾದ ಯಾದವರಾವ ಕನಸೆ, ಪ್ರೊ| ರಾಜಕುಮಾರ ಪಾಟೀಲ, ಆತ್ಮಾರಾಮ ಬಿರಾದಾರ, ಮಾಧವರಾವ
ತಳವಾಡೆ, ಬಾಲಾಜಿರಾವ ತುಕದೆ, ನಾಮದೇವರಾವ ತಗರಖೆಡೆ, ಅನೀಲ ಸಾವಕಾರ, ದೇವಿದಾಸರಾವ ಶಿಂದೆ, ಸತೀಶ ಬಾಮನೆ, ಹರಿಬಾವು ಶಿವುದೆ, ಸುರೇಶ ಕಾಳೆ, ರಾಜೇಂದ್ರ ಶಿಂಧೆ, ಕಿಶನರಾವ ಸಾವರೆ, ಮನೋಹರ ಬಿರಾದಾರ, ಗೋವಿಂದರಾವ ಹಾಲಿಪುರ್ಗಿ, ಕಾಶಿನಾಥರಾವ ಜೋಳದಾಪ್ಕೆ
ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next