Advertisement

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

11:41 AM Oct 18, 2021 | Team Udayavani |

ಶಿವರಾಜ್‌ ಕುಮಾರ್‌ ನಟನೆಯ “ಭಜರಂಗಿ-2′ ಚಿತ್ರ ಅ.29ರಂದು ಬಿಡುಗಡೆಯಾಗುತ್ತಿದೆ. ಈಗ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಅ.20ರಂದು ಸಂಜೆ ವೇಳೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ.

Advertisement

ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. “ಭಜರಂಗಿ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆದಿತ್ತು. ಅದೇ ಯಶಸ್ಸಿನ ಬಳಿಕ ನಿರ್ದೇಶಕ ಹರ್ಷ ಅವರು “ಭಜರಂಗಿ 2′ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌ ನೋಡಿದವರಿಗೆ ಇಲ್ಲೂ ಹೊಸದೊಂದು ಕಥೆ ಬಿಚ್ಚಿಕೊಳ್ಳುವ ನಿರೀಕ್ಷೆ ಹೆಚ್ಚಿದೆ.

ಅದೇನೆ ಇರಲಿ, “ಭಜರಂಗಿ’ ಮೂಲಕ ಶಿವರಾಜಕುಮಾರ್‌ ಹೊಸ ವಿಷಯ ಹೇಳಿದ್ದರು. ಈ ಬಾರಿ “ಭಜರಂಗಿ 2′ ಮೂಲಕವೂ ಹೊಸತನ ಕಟ್ಟಿಕೊಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ:ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಸ್ವಾಮಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ದೀಪು ಎಸ್‌. ಕುಮಾರ್‌ ಸಂಕಲನ ಮಾಡಿದರೆ, ರವಿ ಸಂತೆಹೈಕ್ಲು ಕಲಾ ನಿರ್ದೇಶನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next