Advertisement

ಭಯ ಹುಟ್ಟಿಸುವ ಭಯಾನಕ ಪಾತ್ರಗಳು  : ಭಜರಂಗಿ 2 ಟ್ರೇಲರ್ ಔಟ್

08:15 AM Oct 21, 2021 | Team Udayavani |

ಅದ್ಧೂರಿ ಸೆಟ್‌ ಗಳು, ಭಯ ಹುಟ್ಟಿಸುವ ಭಯಾನಕ ಪಾತ್ರಗಳು, ಬೆಂಕಿಯುಗುಳುವ ಕಂಗಳು… ಒಂದಾ. ಎರಡಾ…. “ಭಜರಂಗಿ-2′ ಟ್ರೇಲರ್‌ ನೋಡಿದಾಗ ನಿಮಗೆ ಸಾಕಷ್ಟು ವಿಭಿನ್ನ ಅಂಶಗಳು ಕಾಣಸಿಗುತ್ತವೆ.

Advertisement

ಹೌದು, ಶಿವರಾಜ್‌ ಕುಮಾರ್‌ ಅಭಿನಯದ “ಭಜರಂಗಿ-2′ ಚಿತ್ರದ ಟ್ರೇಲರ್‌ ಬುಧವಾರ ಸಂಜೆ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದವರು ಫಿದಾ ಆಗಿದ್ದಾರೆ. ನಿರ್ದೇಶಕ ಎ.ಹರ್ಷ “ಭಜರಂಗಿ-2′ ಚಿತ್ರದಲ್ಲಿ ಒಂದು ಫ್ಯಾಂಟಸಿ ಲೋಕವನ್ನೇ ಧರೆಗಿಳಿಸಿದ್ದಾರೆ.

ಕನ್ನಡಕ್ಕೆ ಹೊಸತೆನಿಸುವ ಈ ಫ್ಯಾಂಟಸಿ ಡ್ರಾಮಾದಲ್ಲಿ ಒಂದಷ್ಟು ವಿಚಿತ್ರ, ವಿಕ್ಷಿಪ್ತ ಪಾತ್ರಗಳು ಕಾಣಸಿಗುತ್ತವೆ. ಜೊತೆಗೆ ಅಗೋಚರ ಶಕ್ತಿಗಳ ಛಾಯೆ, ಮಾಯೆ ಎಲ್ಲವೂ ಈ ಟ್ರೇಲರ್‌ನಲ್ಲಿವೆ. ಅಲ್ಲಿಗೆ ಈ ಬಾರಿ ಕನ್ನಡಕ್ಕೆ “ಭಜರಂಗಿ-2′ ಒಂದು ಫ್ಯಾಂಟಸಿ ಡ್ರಾಮಾ ಸಿನಿಮಾವಾಗಿ ಪ್ರೇಕ್ಷಕರನ್ನು ರಂಜಿಸಲಿದೆ.

ಟ್ರೇಲರ್‌ನಲ್ಲಿ ಶಿವರಾಜ್‌ ಕುಮಾರ್‌, “ಭಜರಂಗಿ’ ಲೋಕಿ, ಭಾವನಾ, ಶ್ರುತಿ… ಪ್ರತಿ ಪಾತ್ರಗಳು ರಗಡ್‌ ಆಗಿಯೇ ಕಾಣಿಸಿಕೊಂಡಿವೆ. ಜೊತೆಗೆ ಇಡೀ ಪರಿಸರ ಕೂಡಾ ಕಥೆಗೆ ಪೂರಕವಾ ದಂತಿದೆ. “ಭಜರಂಗಿ’ ಕೂಡಾ ಒಂದು ಫ್ಯಾಂಟಸಿ ಡ್ರಾಮಾವಾಗಿತ್ತು. ಆದರೆ, ಅಲ್ಲೊಂದು ಲವ್‌ ಸ್ಟೋರಿಯೂ ಇತ್ತು.

ಆದರೆ, “ಭಜರಂಗಿ-2′ ಟ್ರೇಲರ್‌ ನಲ್ಲಿ ಲವ್‌ ಸ್ಟೋರಿ ಯಾಗಲಿ, ಮಿಕ್ಕಂತೆ ಯಾವ ಸುಳಿವೂ ಇಲ್ಲ. ಔಟ್‌ ಅಂಡ್‌ ಔಟ್‌ ಫ್ಯಾಂಟಸಿ ಲೋಕವೇ ಇದ್ದಂತಿದೆ. ಟ್ರೇಲರ್‌ ಚಿತ್ರದ ನಿರೀಕ್ಷೆ ಹೆಚ್ಚಿಸಿರೋದು ಸುಳ್ಳಲ್ಲ. ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದು, ಎ.ಹರ್ಷ ನಿರ್ದೇಶಿಸಿದ್ದಾರೆ. ಚಿತ್ರ ಅ.29ಕ್ಕೆ ತೆರೆ ಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next