Advertisement

ನಿತ್ಯ ಭಜನೆಯಿಂದ ನೆಮ್ಮದಿ: ಕಾಶೀ ಶ್ರೀ

12:24 PM Mar 17, 2017 | Team Udayavani |

ತೆಕ್ಕಟ್ಟೆ: ದೇವರನ್ನು ಮೆಚ್ಚಿಸುವ ಸಾಧನವೇ ಭಜನೆ. ನಿತ್ಯ ಭಜನೆಯ ಮೂಲಕ ದೇವರನ್ನು ಸ್ಮರಿಸುವು ದರಿಂದ ಜೀವನದಲ್ಲಿ ನೆಮ್ಮದಿ ಹಾಗೂ ಸಮೃದ್ಧಿ ದೊರೆಯುವುದು. ಈ ಹಿನ್ನೆಲೆಯಲ್ಲಿ ಗುರುಗಳ ಕೃಪೆಯಿಂದ ತೆಕ್ಕಟ್ಟೆ ಪೇಟೆಯಲ್ಲಿ ಸಮಾಜ ಬಾಂಧವರು ಅಭಿವೃದ್ಧಿ ಹೊಂದಿದ್ದು ಮುಂದೆಯೂ ಸಮಾ
ಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತ ಮುನ್ನಡೆಯುವಂತಾಗಲಿ ಎಂದು ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

Advertisement

ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ನೂತನವಾಗಿ ನಿರ್ಮಿಸಿರುವ ಶ್ರೀ ಸುಧೀಂದ್ರ ತೀರ್ಥ ಭಜನಾ ಮಂದಿರ ಹಾಗೂ ಶ್ರೀ ಸುಧೀಂದ್ರ ಸಭಾ ಭವನವನ್ನು ಗುರುವಾರ  ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಚೇಂಪಿ ವೆಂಕಟರಮಣ ದೇವಸ್ಥಾನ ಕೂಡುಕೂಟದ ವ್ಯಾಪ್ತಿಗೆ ಬರುವ ಹಾಗೂ ಚೇಂಪಿ ಹಾಗೂ ಕೋಟ ಶ್ರೀ ಕಾಶೀ ಮಠದ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ತೆಕ್ಕಟ್ಟೆ ಸಮಾಜ ಬಾಂಧವರು ಮುಂದೆಯೂ ಅಲ್ಲಿನ ಸಂಬಂಧ ಎಂದಿನಂತೆ ಮುಂದುವರಿಸಿಕೊಂಡು ಬರಬೇಕು. ಶ್ರೀ ವೆಂಕಟರಮಣ ಹಾಗೂ ವಿಠಲ ದೇವರ ಭಜನೆಯಿಂದ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ನುಡಿದರು.

ಶ್ರೀಧರ ಕಾಮತ್‌, ದಿನಕರ ಶೆಣೈ, ರಮೇಶ್‌ ಪಡಿಯಾರ್‌, ನೀಲಕಂಠ ಪ್ರಭು, ಗಣಪತಿ ನಾಯಕ್‌, ಗೋವ ರ್ಧನ ನಾಯಕ್‌, ಉದ್ಯಮಿ ರಮೇಶ್‌ ನಾಯಕ್‌, ಉದ್ಯಮಿ ಟಿ. ಸಂತೋಷ ನಾಯಕ್‌, ಉದ್ಯಮಿ ಅನಂತ ನಾಯಕ್‌, ರವೀಂದ್ರ ನಾಯಕ್‌, ರಾಮಚಂದ್ರ ಕಾಮತ್‌, ರಾಮಚಂದ್ರ ಪಡಿಯಾರ್‌, ವಿಶ್ವನಾಥ ಪಡಿಯಾರ್‌, ಗುರುಚರಣ್‌ ಪಡಿಯಾರ್‌, ವಿಶ್ವಾಸ್‌ ಪ್ರಭು, ತೆಕ್ಕಟ್ಟೆ ಜಿ.ಎಸ್‌.ಬಿ ಪಬ್ಲಿಕ್‌ ಚಾರಿಟೇಬಲ್‌ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ತೆಕ್ಕಟ್ಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಪರವಾಗಿ ಉದ್ಯಮಿ ಟಿ. ಸಂತೋಷ ನಾಯಕ್‌ ಸ್ವಾಗತಿಸಿ, ಸ್ವಾಮೀಜಿಯವರನ್ನು ಗೌರವಿಸಿದರು.

Advertisement

120 ದಿನಗಳಲ್ಲಿ ಭವ್ಯ ಭಜನ ಮಂದಿರದ ಕಟ್ಟಡ ನಿರ್ಮಾಣ
ತೆಕ್ಕಟ್ಟೆಯಲ್ಲಿ ಭಜನ ಮಂದಿರ ನಿರ್ಮಾಣ ಮಾಡುವ ಬಯಕೆಯಿಂದ  ತೆಕ್ಕಟ್ಟೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸುಮಾರು 60 ಕುಟುಂಬಗಳ ಸದಸ್ಯರು ಸ್ವಾಮೀಜಿಯವರ ಆಶೀರ್ವಾದ ಪಡೆದು ಕೇವಲ 120 ದಿನಗಳಲ್ಲೇ ಶ್ರೀ ಸುಧೀಂದ್ರತೀರ್ಥ ಭಜನಾ ಮಂದಿರ ಹಾಗೂ ಶ್ರೀ ಸುಧೀಂದ್ರ ಸಭಾಭವನ ಕಟ್ಟಡ ನಿರ್ಮಾಣ ಮಾಡಿದ್ದು, ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.

ಚಿತ್ರ: ದರ್ಶನ್‌ ಸ್ಟುಡಿಯೋ ತೆಕ್ಕಟ್ಟೆ
 

Advertisement

Udayavani is now on Telegram. Click here to join our channel and stay updated with the latest news.

Next