Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರಾéನಂತರ ಈ ದೇಶವನ್ನು ರಾಜಕಾರಣಿಗಳು -ಸಾಹಿತಿಗಳು ಒಡೆದಷ್ಟು ಯಾರೂ ಒಡೆದಿಲ್ಲ ಎಂದು ಭೈರಪ್ಪ ಹೇಳಿದ್ದಾರೆ. ಆದರೆ ಅವರ ಕಾದಂಬರಿಗಳಲ್ಲೇ ಒಡಕು ಹುಟ್ಟಿಸುವ ಅಕ್ಷರಗಳಿವೆ. ರಾಜಕಾರಣಿಗಳ ಬಗ್ಗೆ ಟೀಕಿಸುವ ಭೈರಪ್ಪನವರೇ ಪ್ರಧಾನಿ ಮೋದಿ ಅವರೊಂದಿಗಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ನ ಪ್ರಚಾರಕರಂತೆ ವರ್ತಿಸುತ್ತಾರೆ ಎಂದರು. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕೆಂದು ಕೆಲವರು ಹೇಳಿದ್ದಾರೆ. ಅವರು ಕಳಪೆ ಲೇಖಕರಂತೂ ಅಲ್ಲ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದರೆ ಸಂತೋಷ ಎಂದು ಹೇಳಿದರು.
ಗೋವಿನ ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಿಂತ, ಕತ್ತೆ ಹಾಲಿನಲ್ಲಿ ಪೌಷ್ಟಿಕಾಂಶ ಹೆಚ್ಚಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಕತ್ತೆಯನ್ನೇಕೆ ರಾಷ್ಟ್ರಪ್ರಾಣಿಯನ್ನಾಗಿ ಮಾಡಬಾರದು ಎಂದು ಕುಂ.ವೀ. ಪ್ರಶ್ನಿಸಿದರು. ಕೆಲವರು ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಮಾಡುತ್ತೇವೆ ಎಂದು ಹೊರಟಿದ್ದಾರೆ. ಗೋವಿನ ಹಾಲಿಗಿಂತ ಕತ್ತೆ ಹಾಲು ಅತ್ಯುತ್ತಮ. ಆದರೆ, ಕತ್ತೆ ಮತ್ತು ಕಾಗೆಯನ್ನು ಸನಾತನ ಸಮಾಜ ಕೀಳಾಗಿ ಕಾಣುತ್ತಾ ಬಂದಿದೆ. ಪಕ್ಷಿಗಳಲ್ಲಿ ಕಾಗೆ, ಪ್ರಾಣಿಗಳಲ್ಲಿ ಕತ್ತೆ ಶ್ರೇಷ್ಠವಾಗಿದೆ. ರಾಜ್ಯದಲ್ಲಿ ಕತ್ತೆ ಸಂತತಿ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.