Advertisement

Yakshagana; ಉಡುಪಿಯಲ್ಲಿ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ

09:35 PM Aug 11, 2024 | Team Udayavani |

ಯಕ್ಷಗಾನ ಕಲಾ ಸಂಘಟಕ ಸುಧಾಕರ ಆಚಾರ್ಯರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಯು ಆ. 15ರ ಮಧ್ಯಾಹ್ನ 1ರಿಂದ ರಾತ್ರಿ 8ರ ತನಕ ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ. ಭಾಗವತ-ಕವಿ ಬೊಟ್ಟಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಆಧಾರಿತ ‘ವೈಕುಂಠ ದರ್ಶನ’ ಯಕ್ಷಗಾನ ತಾಳಮದ್ದಳೆ ಹಾಗೂ ಸಂಜೆ 5ರಿಂದ ತೆಂಕು-ಬಡಗುತಿಟ್ಟಿನ ಪುರುಷ, ಮಹಿಳೆಯರು ಸಹಿತ 25 ಯುವ ಯಕ್ಷಾವತಾರಿಗಳಿಂದ ‘ನಾದ ವೈಕುಂಠ’ ನೆರವೇರಲಿದೆ.

Advertisement

ಕಲೆಯ ಮೂಲಕ ರಾಷ್ಟ್ರ ಪ್ರೇಮವನ್ನು ಮೆರೆಯುವ ದೃಷ್ಟಿಯಿಂದ 34 ವರ್ಷಗಳಿಂದ ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವದಂದು ನಿರಂತರವಾಗಿ ಆಚರಿಸಿಕೊಂಡು ಬಂದ ತಾಳಮದ್ದಳೆಯಲ್ಲಿ ಕಳೆದ 24 ವರ್ಷಗಳ ಕಾಲ ಭಾಗವತಿಕೆ ನಡೆಸಿಕೊಟ್ಟ ತೆಂಕುತಿಟ್ಟಿನ ಹಿರಿಯ ಪ್ರಸಿದ್ಧ ಭಾಗವತರಲ್ಲಿ ಒಬ್ಬರಾದ ರಸರಾಗ ಚಕ್ರವರ್ತಿ ಎಂದೇ ಕರೆಯಿಸಿಕೊಂಡ ರಾಗನಿಧಿ ಎಂ. ದಿನೇಶ ಅಮ್ಮಣ್ಣಾಯರಿಂದ ಈ ವರ್ಷ ದಾಖಲೆಯ ನಿರಂತರ 25ನೇ ಬಾರಿಯ ಭಾಗವತಿಕೆಯು 34ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಮೊಳಗಲಿದೆ.

ಕರ್ನಾಟಕ ಮೇಳವು ಮಳೆಗಾಲದಲ್ಲಿ ಮುಂಬಯಿಯ ಷಣ್ಮುಕಾನಂದ ಹಾಲ್‌ನಲ್ಲಿ ಭರ್ಜರಿ ತುಳು ಯಕ್ಷಗಾನ ಪ್ರದರ್ಶನ ನೀಡುತ್ತಾ ಬರುತ್ತಿತ್ತು. 25 ವರ್ಷಗಳ ಹಿಂದೆ ಮುಂಬಯಿ ಕಾರ್ಯಕ್ರಮ ದಿನಾಂಕದ ವ್ಯತ್ಯಾಸದಿಂದಾಗಿ ದಿನೇಶ ಅಮ್ಮಣ್ಣಾಯರು 1999ರಿಂದ (ಸ್ವಾತಂತ್ರ್ಯೋತ್ಸವ ಆಚರಣೆಯ ದಶಮಾನೋತ್ಸವ ಸಂಭ್ರಮ) ಭಾಗವತಿಕೆ ಮಾಡಲೊಪ್ಪಿ ತಮ್ಮ ಇಂಪಿನಿಂಚರ ಗಾನದ ಮೂಲಕ ಉಡುಪಿ ಪ್ರೇಕ್ಷಕರ ಕರ್ಣಾನಂದಕ್ಕೆೆ ಕಾರಣೀಭೂತರಾಗಿದ್ದಾರೆ.

ವಿನಯವಂತ ಶ್ರೀಮಂತ ಕಲಾವಿದ
ಪುತ್ತೂರು ಮೇಳದಿಂದ ಭಾಗವತರಾಗಿ ಯಕ್ಷ ಯಾನಕ್ಕೆೆ ಕಾಲಿಟ್ಟ ದಿನೇಶ ಅಮ್ಮಣ್ಣಾಯರು ಅಲ್ಲಿ 1 ವರ್ಷ ಪೂರೈಸಿ, ಕುಂಟಾರು 3, ಕದ್ರಿ 3, ಕರ್ನಾಟಕ 21 ಹಾಗೂ ಎಡನೀರು ಮೇಳದಲ್ಲಿ 15 ವರ್ಷ ಸೇವೆ ಸಲ್ಲಿಸಿ 2019ರಲ್ಲಿ 60 ವರ್ಷ ವಯಸ್ಸಾಗುತ್ತಿದ್ದಂತೆ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಇದೀಗ 5-6 ವರ್ಷಗಳಿಂದ ಕಲಾ ಪ್ರೇಕ್ಷಕರ ಒತ್ತಾಯಕ್ಕೆೆ ಮಣಿದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಲಾವಿದ ಕುಟುಂಬದಿಂದ ಬಂದಿರುವ ಸುಮಾರು ನಾಲ್ಕುವರೆ ದಶಕಕ್ಕೂ ಹೆಚ್ಚು ಯಕ್ಷ ಪಯಣಗೈದ ಹಿರಿಯ ಕಲಾವಿದ ಅಮ್ಮಣ್ಣಾಯರು ಸ್ವರ ಮಾಧುರ್ಯದ ಮೂಲಕ ಕಲಾ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಓರ್ವ ವಿನಯವಂತ ಶ್ರೀಮಂತ ಕಲಾವಿದ ಎಂದರೆ ಅತಿಶಯೋಕ್ತಿ ಆಗಲಾರದು.

25 ಯಕ್ಷಾವತಾರಿಗಳಿಂದ ಅಭಿನಂದನೆ
ಅಮ್ಮಣ್ಣಾಯರ ಸ್ವಾತಂತ್ರ್ಯೋತ್ಸವ 25ನೇ ಕಾರ್ಯಕ್ರಮದ ನಂಟಿನ ಗಂಟನ್ನು ಬಿಗಿಗೊಳಿಸಿ ಪುಷ್ಟೀಕರಿಸಲೋಸುಗ 25 ವರ್ಷದೊಳಗಿನ ಯಕ್ಷಾವತಾರಿಗಳಿಂದ ಅಮ್ಮಣ್ಣಾಯರಿಗೆ ವಿಶೇಷ ಅಭಿನಂದನೆ ನೆರವೇರಲಿದೆ.

Advertisement

ಆತ್ಮೀಯತೆ, ಅನ್ಯೋನ್ಯತೆಗೆ ಕಟ್ಟು ಬಿದ್ದೆೆ
”ಸುಧಾಕರ ಆಚಾರ್ಯರು ನನಗೆ ಹಿಂದಿನಿಂದಲೂ ಪರಿಚಯಸ್ಥರು. ನನ್ನಲ್ಲಿ ಕಾರ್ಯಕ್ರಮಕ್ಕೆೆ ಬರಲು ಸದಾ ಒತ್ತಾಯಿಸುತ್ತಿದ್ದರು. ಆದರೆ ನನಗೆ ಅದೇ ಸಮಯಕ್ಕೆೆ ಮುಂಬಯಿ ಕ್ಯಾಾಂಪ್ ಇರುವ ನೆಲೆಯಲ್ಲಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಆದರೆ 24 ವರ್ಷಗಳ ಹಿಂದೆ ಮುಂಬಯಿ ಕ್ಯಾಾಂಪ್‌ನ ಸಮಯದ ವ್ಯತ್ಯಾಾಸದಿಂದಾಗಿ ಉಡುಪಿಯ ಸ್ವಾತಂತ್ರ್ಯೋತ್ಸವ ಆಚರಣೆ ತಾಳಮದ್ದಳೆಯಲ್ಲಿ ನಿರಂತರವಾಗಿ ಭಾಗವಹಿಸಲು ಸಾಧ್ಯವಾಯಿತು. 24 ವರ್ಷಗಳಲ್ಲಿ ಒಂದು ವರ್ಷ ನನ್ನ ಮಗಳ ಅನಾರೋಗ್ಯದಿಂದ ಕಾರ್ಯಕ್ರಮಕ್ಕೆೆ ಬರಲು ಆಗುವುದಿಲ್ಲ ಎಂದು ಆಚಾರ್ಯರಿಗೆ ಹೇಳಿದ್ದೆೆ. ಆದರೆ ಆಚಾರ್ಯರು ಪಟ್ಟು ಬಿಡದೆ ನನ್ನನ್ನು ಅರಸಿಕೊಂಡು ಮಂಗಳೂರಿನ ಆಸ್ಪತ್ರೆಯ ವರೆಗೂ ಬಂದು ಕಾರ್ಯಕ್ರಮಕ್ಕೆೆ ಬರಲು ವಿನಂತಿಸಿದರು. ಅದೇ ಸಂದರ್ಭಕ್ಕೆೆ ಮಗಳೂ ಚೇತರಿಸಿಕೊಂಡ ನೆಲೆಯಲ್ಲಿ ಆ ವರ್ಷವೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಹೀಗೆ ಅವರ ಆತ್ಮೀಯತೆ, ಅನ್ಯೋನ್ಯತೆಗೆ ಕಟ್ಟು ಬಿದ್ದು ನಿರಂತರವಾಗಿ ಭಾಗವಹಿಸುವುದಕ್ಕೆೆ ಅನುವು ಮಾಡಿಕೊಟ್ಟಿದೆ. ಎಡನೀರು ಮೇಳದಲ್ಲಿ ಭಾಗವತನಾಗಿದ್ದಾಗ ಅಂದಿನ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮೀಜಿಯವರು ನನಗೆ ತೋರಿಸಿದ ತಂದೆಯ ಪ್ರೀತಿ, ತಾಯಿಯ ವಾತ್ಸಲ್ಯ ಮರೆಯುವಂತಿಲ್ಲ” ಎಂದು ಭಾಗವತ ಎಂ. ದಿನೇಶ ಅಮ್ಮಣ್ಣಾಯ ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next