ಚಂಡೀಗಢ: ಪಾನಮತ್ತರಾಗಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಆರೋಪವನ್ನು ತಳ್ಳಿಹಾಕಿರುವ ಆಮ್ ಆದ್ಮಿ ಪಕ್ಷ, ”ಪ್ರತಿಪಕ್ಷಗಳಿಗೆ ಮಾತನಾಡಲು ಸಮಸ್ಯೆಗಳಿಲ್ಲ, ಪಂಜಾಬ್ ಮುಖ್ಯಮಂತ್ರಿಗೆ ಆರೋಗ್ಯ ಸಮಸ್ಯೆಗಳಿವೆ” ಎಂದು ಸೋಮವಾರ ಹೇಳಿದೆ.
ಇದನ್ನೂ ಓದಿ: 466 ಕೋಟಿ ಯೆಸ್ ಬ್ಯಾಂಕ್ ವಂಚನೆ: ರಾಣಾ,ಗೌತಮ್ ವಿರುದ್ಧ ಸಿಬಿಐ ಚಾರ್ಜ್ ಶೀಟ್
ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಬಾದಲ್, ಮಾನ್ ಅವರು ” ತುಂಬಾ ಕುಡಿದಿದ್ದರಿಂದ ನಡೆಯಲು ಪರದಾಡುತ್ತಿದ್ದರು, ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಯಿತು ಮತ್ತು ವಿಮಾನವು 4 ಗಂಟೆಗಳ ವಿಳಂಬಕ್ಕೆ ಕಾರಣವಾಯಿತು,ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು. ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದೆ” ಎಂದು ಬಾದಲ್ ಟ್ವೀಟ್ ಮಾಡಿದ್ದರು.
ಗಮನಾರ್ಹವಾಗಿ, ಮಾನ್ ಅವರು ಸೋಮವಾರ ಜರ್ಮನಿಯಿಂದ ಎಂಟು ದಿನಗಳ ಪ್ರವಾಸದಿಂದ ಮರಳಿದ್ದಾರೆ. ಆರೋಪಕ್ಕೆ ಪ್ರತಿಕ್ರಿಯಿಸಿದ ಎಎಪಿ ನಾಯಕರಾದ ಕುಲದೀಪ್ ಧಲಿವಾಲ್ ಮತ್ತು ಮೀಟ್ ಹೇಯರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ”ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಬರಬಹುದು, ಪ್ರತಿಪಕ್ಷಗಳಿಗೆ ಮಾತನಾಡಲು ಯಾವುದೇ ಸಮಸ್ಯೆಗಳಿಲ್ಲ, ಆದ್ದರಿಂದ ಅವರು ಈ ನಕಲಿ ವಿಷಯವನ್ನು ಅರ್ಥಹೀನವಾಗಿ ಎತ್ತಿ ತೋರಿಸುತ್ತಿದ್ದಾರೆ” ಎಂದರು.