Advertisement

ಭಗವತೀ ಸೇವಾ ಸಂಘ ಮುಂಬಯಿ ವತಿಯಿಂದ ವಾರ್ಷಿಕ ಸೌಹಾರ್ದ ಕೂಟ

04:21 PM Feb 09, 2017 | Team Udayavani |

ಮುಂಬಯಿ: ಶ್ರೀ ಭಗವತೀ ಸೇವಾ ಸಂಘ ಮುಂಬಯಿ ಸಂಸ್ಥೆಯ ವತಿಯಿಂದ ವಾರ್ಷಿಕ  ಸೌಹಾರ್ದಕೂಟವು ಇತ್ತೀಚೆಗೆ ಥಾಣೆಯ ಏವೂರಿನ ವಿವೇಕಾನಂದ ಆಶ್ರಮದ ಸಮೀಪದಲ್ಲಿರುವ ಲಯನ್‌ ಪಾರ್ಕ್‌ ಸುಕೇಶ್‌ ಬಂಗ್ಲೋ ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಮುಂಬಯಿ ಮಹಾನಗರ ಸೇರಿದಂತೆ, ಉಪನಗರ ಹಾಗೂ ನೆರೆಯ ಥಾಣೆಯ ತೀಯಾ ಸಮಾಜ ಬಾಂಧವರು ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಗ್ಗೆ ಗಂಗಾಧರ ಕಲ್ಲಾಡಿ ಅವರು ಭಗವತೀ ಮಾತೆಗೆ ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಭಗವತೀ ಸೇವಾ ಸಂಘದ ಅಧ್ಯಕ್ಷ ರವಿ ಮಂಜೇಶ್ವರ, ಉಪಾಧ್ಯಕ್ಷ ಟಿ. ಸುಂದರ್‌, ಗೌರವ ಪ್ರಧಾನ ಕಾರ್ಯದರ್ಶಿ ಕೆ. ಪ್ರಭಾಕರ್‌, ಗೌರವ ಕೋಶಾಧಿಕಾರಿ ಟಿ. ಬಾಬು, ಹಿರಿಯ ಸದಸ್ಯರಾದ ಕಡಂಪ್ಪ ಸುವರ್ಣ, ಬಾಬು ಮಾವಿನಡಿ, ಅಪ್ಪುಂಜ್ಞೆ ಬಂಗೇರ, ಸದಸ್ಯರಾದ ಬಾಬು ಬಾದೆಮಾರ್‌, ಹೈಮೇಶ್‌ ಬಂಗೇರ, ಟಿ. ಆರ್‌. ಸಾಲ್ಯಾನ್‌, ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘದ ಮುಂಬಯಿ ಸಮಿತಿಯ ಗೌರವ ಕೋಶಾಧಿಕಾರಿ ರಮೇಶ್‌ ಸಾಲ್ಯಾನ್‌, ವಸಂತ್‌ ಗಾಂವೆªàವಿ ಮೊದಲಾದವರು ಉಪಸ್ಥಿತರಿದ್ದರು. ಇದೇಸಂದರ್ಭ ವಿಶೇಷ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆ ಗಳನ್ನು ವೃಂದಾ ದಿನೇಶ್‌, ಉಜ್ವಲಾ ಅವರು ನಡೆಸಿ ಕೊಟ್ಟರು. ಮುಖ್ಯ ಅತಿಥಿ ಯಾಗಿ ಆಗಮಿಸಿದ ಕನಿಲಭಗವತೀ ಕ್ಷೇತ್ರ ಮಂಜೇಶ್ವರದ ಗೌರವ ಕಾರ್ಯದರ್ಶಿ ವಿಶ್ವನಾಥ್‌ ಕುದ್ರು, ಡಾ| ದಯಾನಂದ ಕುಂಬ್ಳೆ ಅವರ ಉಪಸ್ಥಿತಿಯಲ್ಲಿ ಕಿರು ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಕನಿಲ ಭಗವತೀ ಕ್ಷೇತ್ರ ಮಂಜೇಶ್ವರ ಇದರ ಧಾರ್ಮಿಕ ಹಾಗೂ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು. ಕೆ. ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತ ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಾಬು ಬೆಳ್ಚಡ, ರಾಜ ತುಂಬೆ, ಇಂದಿರಾ ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಬಾಬು ಕೋಟ್ಯಾನ್‌, ಬಾಬು ಅಮೀನ್‌, ಸಚಿನ್‌ ಉಚ್ಚಿಲ್‌, ರಿತೇಶ್‌ ಭಾಯಂದರ್‌, ಪ್ರದೀಪ್‌ ಸುವರ್ಣ, ಲತಾ ಕರ್ಕೇರ, ಭಾಸ್ಕರ್‌ ಡೊಂಬಿವಲಿ, ಸುರೇಶ್‌ ಸಾಲ್ಯಾನ್‌, ಚಂದ್ರಾವತಿ, ಸಾವಿತ್ರಿ ಚಂದ್ರಶೇಖರ್‌, ದಿನೇಶ್‌ ನಾರಾಯಣನ್‌, ಅಶ್ವಿ‌ನ್‌, ವಿವೇಕ್‌, ಸುಧಾಕರ್‌ ವರ್ಕಾಡಿ, ಕೆ. ಟಿ. ರವೀಂದ್ರನ್‌, ಶಂಕರ್‌, ವೆಂಕಟೇಶ್‌, ಜಯೇಶ್‌ ಉದ್ಯಾವರ, ರಮೇಶ್‌ ಸುವರ್ಣ, ಕೇಶವ ಸುವರ್ಣ, ಇಂದಿರಾ, ಯಜ್ಞೆàಶ್‌ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು.
ಚಂದ್ರಾ ವಸಂತ್‌, ಗಂಗಾಧರ, ಸೀತಾ ಸಾಲ್ಯಾನ್‌, ಗೋವಿಂದ  ಮಂಜೇಶ್ವರ, ಉಮೇಶ್‌ ಮಂಜೇಶ್ವರ, ಪದ್ಮಿನಿ ಕೋಟೆಕಾರ್‌ ಅವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. ಇದೇ  ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವನ್ನು ಗೌರವಿಸಲಾಯಿತು. ಶುಭಾಕರ ಮತ್ತು ತಂಡದವರು ಫಲಾಹಾರ, ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು, ಯುವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next