Advertisement

Bhagavadgita: ಗ್ರಂಥ ರಾಶಿಗಳಲ್ಲಿ ಭಗವದ್ಗೀತೆ ಅತ್ಯಂತ ಶ್ರೇಷ್ಠ: ಪುತ್ತಿಗೆ ಶ್ರೀ

03:05 AM Dec 15, 2024 | Team Udayavani |

ಉಡುಪಿ: ಇಡೀ ಗ್ರಂಥ ರಾಶಿಗಳಲ್ಲಿ ಭಗವದ್ಗೀತೆ ಅತ್ಯಂತ ಶ್ರೇಷ್ಠ. ಅದನ್ನು ನಾವೆಲ್ಲರೂ ಜೀವನದಲ್ಲಿ ಸಾಧ್ಯವಾದಷ್ಟು ಮಥನಮಾಡಿ ಗೀತೆಯ ಸಂದೇಶವನ್ನು ಸ್ವೀಕರಿಸಬೇಕು. ಪ್ರತಿ ಸಲವೂ ಮಥನ ಮಾಡುತ್ತಿದ್ದರೆ ಹೊಸ ಹೊಸ ವಿಚಾರಗಳನ್ನು ಹೊಳೆಯುತ್ತವೆ ಎಂದು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಗೀತಾ ಜಯಂತಿ ಪ್ರಯುಕ್ತ ಕಿದಿಯೂರು ಹೊಟೇಲ್‌ ಪ್ರಾಯೋಜಕತ್ವದಲ್ಲಿ ರಾಜಾಂಗಣದಲ್ಲಿ 18 ದಿನ ನಡೆದ ಡಾ| ಶತಾವಧಾನಿ ಉಡುಪಿ ರಮಾನಾಥ ಆಚಾರ್ಯ ಅವರ ಭಗವದ್ಗೀತಾ ಪ್ರವಚನದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು. ಪ್ರಾಯೋಜಕರಾದ ಭುವನೇಂದ್ರ ಕಿದಿಯೂರು ಅವರನ್ನು ಶ್ರೀಗಳು ಸ್ಮರಣಿಕೆ ನೀಡಿ ಸಮ್ಮಾನಿಸಿದರು.

ಶ್ರೀ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಪ್ರವಚನಗಾರ ಡಾ| ಶತಾವಧಾನಿ ಉಡುಪಿ ರಮಾನಾಥ ಆಚಾರ್ಯ, ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ನಿರ್ದೇಶಕ ಜಿತೇಶ್‌ ಕಿದಿಯೂರು, ಮಠದ ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥಾಪಕ ರಮೇಶ್‌ ಭಟ್‌, ಮಹಿತೋಶ್‌ ಆಚಾರ್ಯ, ವಿಲಾಸ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next