ಮುಂಬಯಿ: ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹಬ್ಬವನ್ನು ಸುರಕ್ಷಿತ, ಪರಿಸರ ಸ್ನೇಹಿ ಮತ್ತು ಮಾಲಿನ್ಯ ಮುಕ್ತ ರೀತಿಯಲ್ಲಿ ಆಚರಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಕೇಳಿಕೊಂಡಿದ್ದಾರೆ.
ಗುರುವಾರ ರಾಜ್ಯದ ಜನರಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ ರಾಜ್ಯಪಾಲರು ದೀಪಾವಳಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ. ದೀಪಗಳ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿಯನ್ನು ತರಲಿ ಎಂದು ಹಾರೈಸಿದರು.
ನೋವೆಲ್ ಕೊರೊನಾ ವೈರಸ್ ನಮಗೆ ಒಡ್ಡಿರುವ ಸವಾಲು ಇನ್ನೂ ಮುಗಿದಿಲ್ಲ ಎಂದು ಕೋಶ್ಯಾರಿ ಬೊಟ್ಟು ಮಾಡಿ ತಿಳಿಸಿದ್ದಾರೆ.
ಸುರಕ್ಷಿತ, ಪರಿಸರ ಸ್ನೇಹಿ ಮತ್ತು ಮಾಲಿನ್ಯ ರಹಿತ ದೀಪಾವಳಿಯನ್ನು ಆಚರಿಸಲು ನಾನು ಜನರಿಗೆ ಮನವಿ ಮಾಡುತ್ತೇನೆ. ಕನಿಷ್ಠ ಒಬ್ಬ ಬಡ ಅಥವಾ ನಿರ್ಗತಿಕ ವ್ಯಕ್ತಿಯೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿಯನ್ನು ನಿಜವಾದ ಅರ್ಥದಲ್ಲಿ ಆಚರಿಸೋಣ ಎಂದು ಕರೆಯಿತ್ತರು.
ಇದನ್ನೂ ಓದಿ:ದ್ವಿಪಕ್ಷೀಯ ವಿಚಾರ ಬೇಡ: ಭಾರತದ ಬೆಂಬಲಕ್ಕೆ ನಿಂತ ರಷ್ಯಾ; ಚೀನಾ, ಪಾಕ್ ಗೆ ಮುಖಭಂಗ