Advertisement

ಪ್ರಾಮಾಣಿಕತೆ ಮೆರೆದ ಅಂಚೆ ಇಲಾಖೆ ನೌಕರರು

01:15 PM Jun 05, 2020 | Naveen |

ಭದ್ರಾವತಿ: ಅಂಚೆ ಕಚೇರಿಗೆ ಬಂದಿದ್ದ ಗ್ರಾಹಕರೊಬ್ಬರು ಅಲ್ಲಿಯೇ ಮರೆತು ಬಿಟ್ಟು ಹೋಗಿದ್ದ ದಾಖಲೆ ಹಾಗೂ ಹಣವಿದ್ದ ಪರ್ಸ್‌ ಅನ್ನು ಅವರಿಗೆ ಹಿಂತಿರುಗಿಸುವ ಮೂಲಕ ನಗರದ ಮುಖ್ಯ ಅಂಚೆ ಕಚೇರಿ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಹೊಸಮನೆಯ ಬೋರಯ್ಯ ಎನ್ನುವವರು ಬುಧವಾರ ಬೆಳಗ್ಗೆ ಕೆಲಸದ ನಿಮಿತ್ತ ನಗರದ ಮುಖ್ಯ ಅಂಚೆ ಕಚೇರಿಗೆ ಬಂದು ಕೆಲಸ ಮುಗಿಸಿ ಹಿಂತಿರುಗುವ ವೇಳೆ ರೈಟಿಂಗ್‌ ಡೆಸ್ಕ್ ಮೇಲೆಯೇ ತಮ್ಮ ಪರ್ಸ್‌ ಮರೆತು ಹೋಗಿದ್ದರು. ಇದೇ ಕಚೇರಿಯಲ್ಲಿ ತಾತ್ಕಾಲಿಕ ಅಟೆಂಡರ್‌ ಜಾರ್ಜ್‌ ಎನ್ನುವವರು ಈ ಪರ್ಸನ್ನು ಗಮನಿಸಿ ಪೋಸ್ಟ್‌ ಮಾಸ್ಟರ್‌ ವಿ. ಶ್ರೀಧರ್‌ ಅವರಿಗೆ ನೀಡಿದ್ದಾರೆ. ಇದನ್ನು ಇನ್ಸ್‌ಪೆಕ್ಟರ್‌ ಪ್ರಹ್ಲಾದ್‌ ಅವರ ಸಮ್ಮುಖದಲ್ಲಿ ತೆರೆದು ನೋಡಿದಾಗ ಪರ್ಸ್‌ನಲ್ಲಿ 5,530 ರೂ. ಹಣ, ಡಿಎಲ್‌ ,ಆರ್‌ಸಿ, ಪ್ಯಾನ್‌ ಕಾರ್ಡ್‌ ಸೇರಿದಂತೆ ಹಲವು ಮುಖ್ಯವಾದ ಮೂಲ ದಾಖಲೆಗಳಿರುವುದು ಕಂಡುಬಂದಿತು.

ಕೂಡಲೇ ಪೋಸ್ಟ್‌ ಮ್ಯಾನ್‌ ಮಧುಸೂಧನ್‌ ಅವರ ಸಹಾಯದಿಂದ ಪರ್ಸ್‌ ಕಳೆದುಕೊಂಡ ವ್ಯಕ್ತಿ ಯಾರು ಎಂದು ಪತ್ತೆ ಮಾಡಿ ಅವರನ್ನು ಸಂಪರ್ಕಿಸಿದಾಗ ಆ ವ್ಯಕ್ತಿ ಬೋರಯ್ಯ ಎಂದು ತಿಳಿದು ಬಂದ ನಂತರ, ಅವರನ್ನು ಮುಖ್ಯ ಅಂಚೆ ಕಚೇರಿಗೆ ಕರೆಸಿಕೊಂಡು ಅದು ಅವರದೇ ಎಂದು ಸಾಬೀತು ಮಾಡಿದ ನಂತರ ಪೋಸ್ಟ್‌ ಮಾಸ್ಟರ್‌ ವಿ. ಶ್ರೀಧರ್‌ ಅವರು ಪರ್ಸ್ ನ್ನು ಬೋರಯ್ಯನವರಿಗೆ ಹಸ್ತಾಂತರಿಸಿದ್ದಾರೆ. ಬೋರಯ್ಯ ಅವರು, ಪೋಸ್ಟ್‌ ಮಾಸ್ಟರ್‌ ಹಾಗೂ ಅಂಚೆ ಇಲಾಖೆ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಗಾಗಿ ಧನ್ಯವಾದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next