Advertisement

ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸದಿರಲು ಮನವಿ

06:15 PM May 15, 2020 | Naveen |

ಭದ್ರಾವತಿ: ನಗರಕ್ಕೆ ಹೊರರಾಜ್ಯ ಮತ್ತು ಹೊರಜಿಲ್ಲೆಯಿಂದ ಬಂದಿರುವ ಜನರನ್ನು ಇಲ್ಲಿನ ವಿವಿಧ ಸರ್ಕಾರಿ ಇಲಾಖೆಯ ಕಟ್ಟಡಗಳಲ್ಲಿ ಕ್ವಾರಂಟೈನ್‌ನಲ್ಲಿಡಲು ತಾಲೂಕು ಆಡಳಿತ ಮುಂದಾಗಿರುವುದನ್ನು ವಿರೋಧಿಸಿ ಆಯಾ ಬಡಾವಣೆಯ ನಾಗರಿಕರು ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್‌ ಶಿವಕುಮಾರ್‌ ಅವರು ಆಯಾ ಪ್ರದೇಶಗಳಿಗೆ ತೆರಳಿ ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸಬಾರದು ಎಂದು ಅಲ್ಲಿನ ಜನರ ಮನವೊಲಿಸುವ ಸಾಮೂಹಿಕ ಶಾಂತಿ ಸಭೆ ನಡೆಸಿದರು.

Advertisement

ಹೆಂಚಿನ ಸಿದ್ದಾಪುರ, ಆನವೇರಿ ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಪಂ ಅಧಿಕಾರಿಗಳೊಂದಿಗೆ ತೆರಳಿದ ತಹಶೀಲ್ದಾರ್‌ ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಇಲ್ಲಿ ಕ್ವಾರಂಟೈನ್‌ಗೆ ಬಳಸುತ್ತಿರುವ ಕಟ್ಟಡಗಳಲ್ಲಿರುಸುತ್ತಿರುವ ಜನರು ಕೋವಿಡ್ ಸೋಂಕಿತ ವ್ಯಕ್ತಿಗಳಲ್ಲ, ಒಂದೊಮ್ಮೆ ಅವರ ಪೈಕಿ ಯಾರಿಗಾದರೂ ಕೊರೊನಾ ಸೋಂಕುಯಿರುವುದು ತಪಾಸಣೆಯ ನಂತರ ಕಂಡುಬಂದರೆ ಅಂತವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಇಲ್ಲಿ ಯಾವುದೇ ಕೋವಿಡ್  ಸೋಂಕಿತರಿಗೆ ಕ್ವಾರಂಟೈನ್‌ ಅಲ್ಲಿ ಇಡಲಾಗುವುದಿಲ್ಲ. ಆದ್ದರಿಂದ ನಾಗರೀಕರು ಭಯಪಡುವ ಅವಶ್ಯಕತೆಯಿಲ್ಲ. ಇಲ್ಲಿ ಕ್ವಾಂರಂಟೈನ್‌ ನಲ್ಲಿಡಲ್ಪಡುವ ಜನರು ನಿಮ್ಮಜನರೆ ಆಗಿದ್ದಾರೆ, ಇವರಿಗೆ ನೀವು ಇಲ್ಲಿರಲು ಅವಕಾಶ ನೀಡದಿದ್ದರೆ ಬೇರಾರು ಆಶ್ರಯ ನೀಡುತ್ತಾರೆ ಯೋಚಿಸಿ, ಕೋವಿಡ್ ಹೋರಾಟದಲ್ಲಿ ಸರ್ಕಾರದ ನಿರ್ಧಾರಕ್ಕೆ ಸಹಕರಿಸಿ ನಡೆಯುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂಬುದನ್ನು ಅರಿತು ನಾಗರೀಕರು ಕ್ವಾರಂಟೈನ್‌ಗೆ ವಿರೋಧಿಸದೆ ಸಹಕರಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಗಾಯತ್ರಿ, ತಾಪಂ ಇಒ ತಮ್ಮಣ್ಣಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next