Advertisement

ಭರ್ತಿಯಾದ ಭದ್ರಾ ಜಲಾಶಯ: ಇಂದು ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು

09:25 AM Jul 14, 2022 | Team Udayavani |

ಶಿವಮೊಗ್ಗ: ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತದೆ.

Advertisement

186 ಅಡಿ ಪೂರ್ಣಮಟ್ಟದ ಡ್ಯಾಮ್ ನಲ್ಲಿ ಈಗ ನೀರಿನ ಮಟ್ಟ 183.50 ಅಡಿಗೆ ತಲುಪಿದೆ. ಒಳ ಹರಿವು 43 ಸಾವಿರ ಕ್ಯೂಸೆಕ್ ಇರುವುದರಿಂದ ಭರ್ತಿಗೆ ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆ ಗೇಟ್ ಗಳನ್ನು ತರೆದು ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ಅವಧಿಗೆ ಮುನ್ನ ಭದ್ರಾ ಡ್ಯಾಂ ಭರ್ತಿ: ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜು.15ರೊಳಗೆ ಭರ್ತಿ ಆಗಿರುವುದು ಅಚ್ಚುಕಟ್ಟು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳ ಜೀವನಾಡಿ ಆಗಿರುವ ಭದ್ರಾ ಜಲಾಶಯ ನಿರೀಕ್ಷೆ ಮೀರಿ ಅವಧಿಗೆ ಮುನ್ನವೇ ಭರ್ತಿಯಾಗಿದೆ.

ಇದನ್ನೂ ಓದಿ:ವಿಡಿಯೋ ನೋಡಿ|ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಸೆಕ್ಯುರಿಟಿ ಗಾರ್ಡ್

Advertisement

Udayavani is now on Telegram. Click here to join our channel and stay updated with the latest news.

Next