ಶ್ರೀನಗರ್: ಜನಪ್ರಿಯ ಫ್ಯಾಂಟಸಿ ಸ್ಪೋರ್ಟ್ಸ್ ಗೇಮ್ ಆಗಿರುವ ʼಡ್ರೀಮ್ 11ʼ ನಲ್ಲಿ ಯುವಕನೊಬ್ಬ 1 ಕೋಟಿ ರೂ. ಗೆದ್ದು ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಭದೇರ್ವಾ ಎನ್ನುವ ಪಟ್ಟಣದ ಸಾಗರ್ ಭಗತ್ 1 ಕೋಟಿ ಗೆದ್ದ ಅದೃಷ್ಟಶಾಲಿ ಯುವಕ.
ಸಾಗರ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯವೊಂದರಲ್ಲಿ 59 ರೂಪಾಯಿಯನ್ನು ಕಟ್ಟಿ ಡ್ರೀಮ್ 11 ಆ್ಯಪ್ ನಲ್ಲಿ ಗ್ರ್ಯಾಂಡ್ ಲೀಗ್ ತಂಡವನ್ನು ಮಾಡಿದ್ದರು. ಪಂದ್ಯ ಮುಗಿದ ಬಳಿಕ ಅವರು 1 ಕೋಟಿ ರೂ.ವನ್ನು ಗೆದ್ದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ಸಾಗರ್, “ನಿನ್ನೆ ತಡರಾತ್ರಿ ಗಾಢ ನಿದ್ರೆಯಲ್ಲಿ ಮಲಗಿದ್ದೆ. ನನ್ನ ಕೆಲವು ಸ್ನೇಹಿತರು ನನಗೆ ಕರೆ ಮಾಡಿ ಡ್ರೀಮ್-11 ನಲ್ಲಿ ನಾನು ಮೊದಲು ಬಂದಿದ್ದೇನೆ ಎಂದು ಹೇಳಿದರು. ಆ್ಯಪ್‌ನಿಂದ ತಾನು ಒಂದು ಕೋಟಿ ರೂಪಾಯಿ ಗೆದ್ದಿದ್ದೇನೆ ಎಂಬ ಸಂದೇಶ ಬಂದಾಗ ದಿಗ್ಭ್ರಮೆಗೊಂಡಿದ್ದೆ ಮತ್ತು ಆಶ್ಚರ್ಯಚಕಿತನಾಗಿದ್ದೆ” ಎಂದು ಹೇಳುತ್ತಾರೆ.
1 ಕೋಟಿ ಗೆದ್ದಿರುವ ಸಾಗರ್ ಲೋಕಲ್ ಸ್ಟಾರ್ ಆಗಿದ್ದಾರೆ. ಅವರನ್ನು ಅಭಿನಂದನೆ ಸಲ್ಲಿಸಿ, ಸ್ಥಳೀಯರು ಸನ್ಮಾನವನ್ನು ಮಾಡಿದ್ದಾರೆ.
2022 ರಿಂದ ತಾನು ಡ್ರೀಮ್ 11 ನಲ್ಲಿ ಕೋಟಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೆ ಎಂದು ಸಾಗರ್ ಹೇಳುತ್ತಾರೆ.
ಪ್ರಸ್ತುತ ಚಂಡೀಗಢದಲ್ಲಿ ಬಿ.ಟೆಕ್ ಓದುತ್ತಿರುವ ಸಾಗರ್, ಪೋಷಕರೊಂದಿಗೆ ಸಮಾಲೋಚಿಸಿ ನಂತರ ಹಣವನ್ನು ಖರ್ಚು ಮಾಡುವುದಾಗಿ ಹೇಳಿದ್ದಾರೆ. ಅವರ ಈ ಗೇಮಿಂಗ್ ಜರ್ನಿಯಲ್ಲಿ ಇದುವರೆಗೆ ಸಾವಿರಾರು ರೂಪಾಯಿಗಳನ್ನು ಗೆದ್ದಿದ್ದಾರೆ ಹಾಗೂ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತಾರೆ.