Advertisement

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

06:52 PM Oct 22, 2021 | Team Udayavani |

ಮುಂಬೈ: ಹಿಂದಿಯ “ಭಾಬಿ ಜೀ ಘರ್‌ ಪರ್‌ ಹೈಂ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಆಸಿಫ್ ಶೇಖ್‌ ಅವರನ್ನು ಲಂಡನ್‌ನ ವರ್ಲ್ಡ್ ಬುಕ್‌ ಆಫ್ ರೆಕಾರ್ಡ್ಸ್‌ ಗುರುತಿಸಿದೆ.

Advertisement

ಒಂದೇ ಧಾರಾವಾಹಿಯಲ್ಲಿ 300ಕ್ಕೂ ಅಧಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ. ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆಸಿಫ್, “ಈ ಮೈಲುಗಲ್ಲು ಸಾಧ್ಯವಾಗುವುದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

2015ರಿಂದ ಪ್ರಸಾರವಾಗುತ್ತಿರುವ ಹಾಸ್ಯ ಧಾರವಾಹಿ ಭಾಬಿ ಜೀ ಘರ್‌ ಪರ್‌ ಹೈಂ ಇದಾಗಲೇ 1,656 ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿಯನ್ನು ಶಶಾಂಕ್‌ ಬಾಲಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

Advertisement

Udayavani is now on Telegram. Click here to join our channel and stay updated with the latest news.

Next