Advertisement

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

04:33 PM Jan 05, 2025 | Team Udayavani |

ಸಿಡ್ನಿ: ಕಳೆದ ಒಂದೂವರೆ ತಿಂಗಳಿನಿಂದ ಸಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿ ರವಿವಾರ ಅಂತ್ಯವಾಗಿದೆ. ಭಾರತೀಯ ದಿಗ್ಗಜ ಸುನೀಲ್‌ ಗಾವಸ್ಕರ್‌ ಮತ್ತು ಆಸ್ಟ್ರೇಲಿಯನ್‌ ಲೆಜೆಂಡ್‌ ಅಲನ್‌ ಬಾರ್ಡರ್‌ ಹೆಸರಿನಲ್ಲಿರುವ ಬಾರ್ಡರ್‌ ಗಾವಸ್ಕರ್‌ ಟ್ರೋಫಿಯನ್ನು ದಶಕದ ಬಳಿಕ ಆಸ್ಟ್ರೇಲಿಯಾ ಗೆದ್ದುಕೊಂಡಿದೆ.

Advertisement

ಆದರೆ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಅಲನ್‌ ಬಾರ್ಡರ್‌ ಅವರನ್ನು ಮಾತ್ರ ಕರೆಯಲಾಗಿತ್ತು. ಸುನೀಲ್‌ ಗಾವಸ್ಕರ್‌ ಅವರು ಮೈದಾನದಲ್ಲಿ ಉಪಸ್ಥಿತರಿದ್ದರೂ ಅವರಿಗೆ ಕರೆಯಲಾಗಲಿಲ್ಲ. ಇದಕ್ಕೆ ಗಾವಸ್ಕರ್‌ ಬೇಸರ ವ್ಯಕ್ತಪಡಿಸಿದರು.

ತನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಜೊತೆಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರೆ ಚೆನ್ನಾಗಿತ್ತು ಎಂದು ಗಾವಸ್ಕರ್ ಹೇಳಿದರು.

“ನಾನು ನಿಸ್ಸಂಶಯವಾಗಿ ಪ್ರೆಸೆಂಟೇಶನ್‌ ಗಾಗಿ ಅಲ್ಲಿರಲು ಇಷ್ಟಪಡುತ್ತಿದ್ದೆ. ಯಾಕೆಂದರೆ, ಇದು ಬಾರ್ಡರ್-ಗಾವಸ್ಕರ್ ಟ್ರೋಫಿ” ಎಂದು ಗವಾಸ್ಕರ್ ಅವರನ್ನು ಕೋಡ್ ಸ್ಪೋರ್ಟ್ಸ್ ಉಲ್ಲೇಖಿಸಿದೆ.

Advertisement

“ಅಂದರೆ, ನಾನು ಇಲ್ಲಿಯೇ ಮೈದಾನದಲ್ಲಿಯೇ ಇದ್ದೆ. ನನ್ನ ಪ್ರಕಾರ, ಪ್ರೆಸೆಂಟೇಶನ್ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯಾ ಗೆದ್ದಿರುವುದು ಮುಖ್ಯವಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದರು ಆದ್ದರಿಂದ ಅವರು ಗೆದ್ದರು. ನಾನು ಭಾರತೀಯ ಎಂಬ ಕಾರಣಕ್ಕೆ ನನಗೆ ಟ್ರೋಫಿ ಪ್ರೆಸೆಂಟೇಶನ್‌ ಗೆ ಕರೆಯಲಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ನೀಡಲು ನಾನು ಸಂತೋಷಪಡುತ್ತಿದ್ದೆ” ಎಂದು ಗಾವಸ್ಕರ್ ಹೇಳಿದರು.‌

ಆಸ್ಟ್ರೇಲಿಯಾ ಸರಣಿಯನ್ನು ಗೆದ್ದು ಬಿಜಿಟಿ ಪಡೆದುಕೊಂಡರೆ ಟ್ರೋಫಿ ವಿತರಣೆಗೆ ನಿಮ್ಮ ಅಗತ್ಯವಿಲ್ಲ ಎಂದು ಸಂಘಟಕರು ಹೇಳಿದ್ದರು ಎಂದು ಗಾವಸ್ಕರ್ ಸ್ವತಃ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next