Advertisement

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

05:00 PM Nov 16, 2024 | Team Udayavani |

ಪರ್ತ್:‌ ಇನ್ನು ಕೆಲವೇ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-‌ ಗಾವಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಆರಂಭವಾಗಲಿದೆ. ನವೆಂಬರ್‌ 22ರಿಂದ ಪರ್ತ್‌ ನಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದೆ. ಇದಕ್ಕೂ ಮೊದಲು ಭಾರತ ತಂಡವು ಭಾರತ ಎ ವಿರುದ್ದದ ಮೂರು ದಿನಗಳ ಅಭ್ಯಾಸ ಪಂದ್ಯವಾಡುತ್ತಿದೆ.

Advertisement

ಅಭ್ಯಾಸ ಪಂದ್ಯದಲ್ಲೇ ಭಾರತಕ್ಕೆ ನೋವಿನ ಅನುಭವವಾಗಿದೆ. ಪ್ರಮುಖ ಬ್ಯಾಟರ್‌ ಗಳು ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ (KL Rahul) ಅವರು ಭುಜಕ್ಕೆ ಗಾಯವಾಗಿತ್ತು. ಬಳಿಕ ಅವರು ಮೈದಾನ ತೊರೆದಿದ್ದರು. ಅಲ್ಲದೆ ವಿರಾಟ್‌ ಕೊಹ್ಲಿ (Virat Kohli) ಅವರು ಸ್ಕ್ಯಾನಿಂಗ್‌ ಗೆ ಒಳಗಾಗಿದ್ದರು. ಇದೀಗ ಶುಭಮನ್‌ ಗಿಲ್‌ (Shubman Gill)ಕೂಡಾ ಗಾಯಗೊಂಡಿದ್ದಾರೆ.

ಇಂಟ್ರಾ ಸ್ಕ್ಯಾಡ್‌ ಪಂದ್ಯದ ವೇಳೆ ಗಿಲ್‌ ಕೈಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ. ಅವರ ಗಾಯದ ಬಗ್ಗೆ ಇದುವರೆಗೂ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ವರದಿಯ ಪ್ರಕಾರ ಫೀಲ್ಡಿಂಗ್ ಮಾಡುವಾಗ ಶುಭಮನ್‌ ಗಿಲ್ ಎಡಗೈಗೆ ನೋವು ಮಾಡಿಕೊಂಡಿದ್ದಾರೆ. ಹೀಗಾಗಿ ನಂತರ ಪಿಚ್‌ ನಿಂದ ಗಿಲ್‌ ಹೊರನಡೆದರು.

“ಅವರು ಸ್ಲಿಪ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಎಡಗೈಗೆ ಗಾಯ ಮಾಡಿಕೊಂಡರು. ಬಳಿಕ ಮೈದಾನಕ್ಕೆ ಹಿಂತಿರುಗಲಿಲ್ಲ. ಈ ಗಾಯವು ನವೆಂಬರ್ 22 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ ಗೆ ಗಿಲ್ ಅವರ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ” ಎಂದು ವರದಿ ಹೇಳಿದೆ.

Advertisement

ಟೀಂ ಇಂಡಿಯಾದ ನಾಯಕ, ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಅವರು ಮೊದಲ ಪಂದ್ಯವಾಡುವುದು ಇನ್ನೂ ಖಚಿತವಾಗಿಲ್ಲ. ರೋಹಿತ್‌ ಮತ್ತು ಪತ್ನಿ ರಿತಿಕಾ ಅವರು ಎರಡನೇ ಮಗುವಿನ ಜನನದ ಕಾರಣದಿಂದ ರೋಹಿತ್‌ ಶರ್ಮಾ ಅವರು ಇನ್ನೂ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ರೋಹಿತ್ ಅವರ ಪತ್ನಿ ರಿತಿಕಾ ಸಜ್ದೆಹ್ ಅವರು ಶುಕ್ರವಾರ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಶನಿವಾರ ರೋಹಿತ್‌ ಶರ್ಮಾ ದೃಢಪಡಿಸಿದ್ದಾರೆ.

ಮೊದಲ ಪಂದ್ಯ ಆರಂಭಕ್ಕೆ ಇನ್ನೂ ಒಂದು ವಾರದ ಸಮಯವಿದ್ದರೂ ಇನ್ನೂ ಮೊದಲ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ ಎಂದು ಇನ್ನೂ ಖಚಿತಪಡಿಸಿಲ್ಲ.

ರಾಹುಲ್‌ – ವಿರಾಟ್‌ ಗೆ ಗಾಯ

ಶುಕ್ರವಾರ ಪರ್ತ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದಾಗ ಕೆಎಲ್‌ ರಾಹುಲ್ ಬಲಗೈ ಮಣಿಗಂಟಿಗೆ ಚೆಂಡಿನೇಟು ಬಿದ್ದಿದೆ. ಇದರಿಂದ ಅವರು ಅಂಗಳ ತೊರೆಯ‌ ಬೇಕಾಯಿತು. ಅಭ್ಯಾಸ ವೇಳೆ ಬ್ಯಾಟಿಂಗ್‌ ಮಾಡುತ್ತಿದ್ದಾಗ ಪ್ರಸಿದ್ಧ್ ಕೃಷ್ಣ ಅವರ ಎಸೆತ ವೊಂದು ನೇರವಾಗಿ ರಾಹುಲ್‌ ಮಣಿಗಂಟಿಗೆ ಅಪ್ಪಳಿಸಿತು. ಕೂಡಲೇ ಅಭ್ಯಾಸ ನಿಲ್ಲಿಸಿದ ರಾಹುಲ್‌ ಚಿಕಿತ್ಸೆ ಪಡೆದರು

ಆಸ್ಟ್ರೇಲಿಯಾದಲ್ಲಿ ಅಭ್ಯಾಸ ನಡೆಸುವಾಗ, ಭಾರತದ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಆದರೆ ಸ್ಕ್ಯಾನಿಂಗ್‌, ಗಾಯಕ್ಕೆ ಕಾರಣ ಇತ್ಯಾದಿ ಯಾವ ಬಗ್ಗೆಯೂ ನಿಖರ ಮಾಹಿತಿ ಲಭಿಸಿಲ್ಲ. ಬಾರ್ಡರ್‌-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಆರಂಭಕ್ಕಿನ್ನು 1 ವಾರವಷ್ಟೇ ಬಾಕಿ ಇರುವಾಗ ಈ ಸಂಗತಿ ಕೇಳಿ ಬಂದಿದ್ದು, ತಂಡ ಭೀತಿಗೀಡಾಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next