Advertisement

ಬಿಜಿಎಸ್‌ ಚುಂಚಾದ್ರಿ ಕುಡ್ಲೋತ್ಸವ  

12:19 PM Dec 28, 2017 | Team Udayavani |

ಮಹಾನಗರ : ಶಿಕ್ಷಣದ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಬಾಹ್ಯವಾಗಿ ಪ್ರೇರಕವಾಗಲು ಬೇಕಾಗುವ ತಾಂತ್ರಿಕ, ವೈಜ್ಞಾನಿಕ ತಿಳಿವಳಿಕೆಗಳ ಜತೆಗೆ ಅಂತರಂಗದ ಸಂಸ್ಕಾರಕ್ಕೆ ಯೋಗ, ಧ್ಯಾನ ಹಾಗೂ ಅಧ್ಯಾತ್ಮ ಜ್ಞಾನವು ಅಗತ್ಯ ಎಂದು ಶ್ರೀ ರಾಮಕೃಷ್ಣ ಮಠದ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌ ಅವರು ಹೇಳಿದರು.

Advertisement

ಕಾವೂರಿನ ಬಿಜಿಎಸ್‌ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಿಜಿಎಸ್‌ ಚುಂಚಾದ್ರಿ ಕುಡ್ಲೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಇವು ವ್ಯಕ್ತಿಯ ತಪ್ಪು ಒಪ್ಪುಗಳನ್ನು ಅರಿ ಯಲು ಮತ್ತು ತುಲನೆ ಮಾಡಲು ಸಹಕಾರಿಯಾಗಿ, ತಾನು ಸರಿದಾರಿಯಲ್ಲಿ ನಡೆದು ಸನ್ನಡತೆಯನ್ನರಿಯಲು ಅವಕಾಶ ಮಾಡಿಕೊಡುತ್ತದೆ ಎಂದರು.

ಬಾಹ್ಯ, ಆಂತರಿಕ ಜ್ಞಾನ ಅಗತ್ಯ
ಒಂದು ಪಕ್ಷಿಯು ಎತ್ತರದಲ್ಲಿ ಹಾರಾಡಲು ಎರಡು ರೆಕ್ಕೆಗಳು ಬೇಕಾಗುವ ರೀತಿಯಲ್ಲಿ ಮನುಷ್ಯನ ಬೆಳವಣಿಗೆಗೆ ಬಾಹ್ಯ ಹಾಗೂ ಆಂತರಿಕ ಜ್ಞಾನ ಅಗತ್ಯ. ಈ ನಿಟ್ಟಿನಲ್ಲಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರಿನಲ್ಲಿ ನೈತಿಕ ಶಿಕ್ಷಣವನ್ನು ಕೊಡುವ ಸಂಸ್ಥೆಯನ್ನು ಸ್ಥಾಪಿಸಿ ಸನ್ನಡತೆಯ ಸಮಾಜವನ್ನು ರೂಪಿಸುವಲ್ಲಿ ನೆರವಾದ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಪ್ರಾತಃ ಸ್ಮರಣೀಯ ಎಂದರು.

ಸನ್ನಡತೆ ಕಲಿಸಿ
ಆಶೀರ್ವಚನ ನೀಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು, ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ಮನೆಯಂಗಳದಲ್ಲೆ ಸಂಸ್ಕಾರಯುತ ನಡವಳಿಕೆಯನ್ನು ನೀಡಿ ಗುರುಹಿರಿಯರನ್ನು ಗೌರವಿಸಿ ಬಾಳುವ ಸನ್ನಡತೆಯನ್ನು ಕಲಿಸಬೇಕು. ಆಧುನಿಕ ವಿದ್ಯೆ, ಸಂಪ್ರದಾಯದ ಜತೆಗೆ ಆಧ್ಯಾತ್ಮಿಕ ವಿದ್ಯೆಯನ್ನು ಕಲಿಸಿ ಕೊಟ್ಟಲ್ಲಿ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ. ಆಧುನಿಕ ವಿದ್ಯೆಯು ಜೀವನದ ಬಾಹ್ಯ ಸುಖಕ್ಕೆ ಕಾರಣವಾದರೆ ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ವಿದ್ಯೆಯು ಅಂತರಂಗದ ಸುಖವನ್ನು ನೀಡುವಂತಹುದು ಎಂದರು.

ಹಾವೇರಿಯ ಮಾರ್ಕಂಡೇಶ್ವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಸಂಸ್ಥೆಯ ಆಡಳಿತಾಧಿಕಾರಿ ಸುಬ್ಬಕಾರಡ್ಕ
ಮೊದಲಾದವರು ಉಪಸ್ಥಿತರಿದ್ದರು. ಬಿಜಿಎಸ್‌ ಪದವಿ ಕಾಲೇಜಿನ ಪ್ರಾಂಶುಪಾಲೆ ಸುಲತಾ ರಾಜಾರಾಂ ಸ್ವಾಗತಿಸಿದರು. ರೇಶ್ಮಾ ಸಿ. ನಾಯರ್‌ ವಂದಿಸಿದರು. ಬಿಜಿಎಸ್‌ ಎಜುಕೇಶನ್‌ ಸೆಂಟರ್‌ನ ಪ್ರಮೀಳ ವಾರ್ಷಿಕ ವರದಿ ಯನ್ನು ವಾಚಿಸಿದರು. ಮೇಘನಾ ಮತ್ತು ನಾಗರಾಜ್‌ ತಮನ್‌ಕರ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next