Advertisement

ಹಿಡಿ ಮಣ್ಣನ್ನೂ ಮುಟ್ಟಲು ಬಿಡೆವು ಮಹಾರಾಷ್ಟ್ರಕ್ಕೆ ಎಚ್ಚರಿಕೆ

12:29 AM Jan 01, 2020 | Lakshmi GovindaRaj |

ಬೆಂಗಳೂರು: ಬೆಳಗಾವಿ ಗಡಿಯ ಹಿಡಿ ಮಣ್ಣನ್ನೂ ಮುಟ್ಟಲು ಬಿಡುವುದಿಲ್ಲ. ಇದಕ್ಕಾಗಿ ನಾವು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿಯು ಮಹಾರಾಷ್ಟ್ರ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದೆ.

Advertisement

ಬೆಳಗಾವಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಡೆಯನ್ನು ಖಂಡಿಸಿರುವ ಸಮಿತಿಯು ಉದ್ಧವ್‌ ಠಾಕ್ರೆ ನೀಡಿ ಹೇಳಿಕೆಗೆ ವಿರೋಧ ವ್ಯಕ್ತಡಿಸಿದೆ. ಶಿವಸೇನೆಯು ರಾಜಕೀಯಕ್ಕಾಗಿ ಕರ್ನಾಟಕ ಗಡಿ ವಿಚಾರವನ್ನು ಕೆಣಕುತ್ತಿದೆ. ಸದ್ಯ ಮಹಾರಾಷ್ಟ್ರದ ಆರು ಜಿಲ್ಲೆಗಳಷ್ಟು ಪ್ರದೇಶ ಕನ್ನಡಿಗರದ್ದೆ ಆಗಿದ್ದು, ಮರೆತ ಉದ್ಧವ್‌ ಠಾಕ್ರೆ ಅವಿವೇಕಿ ಹೇಳಿಕೆ ನೀಡಿರುವುದು ಸಮಂಜಸವಲ್ಲ.

ಇನ್ನು ಕರ್ನಾಟಕ ಗಡಿ ಹೋರಾಟ ಸಮಿತಿಯು ಹಿಂದಿನಷ್ಟೇ ತ್ಯಾಗ, ಬಲಿದಾನಕ್ಕೆ ಸಿದ್ಧವಿದ್ದು, ಮಹಾರಾಷ್ಟ್ರ ಆಕ್ರಮಿತ ಕನ್ನಡ ಭಾಷಾ ಪ್ರದೇಶವಾಗಿರುವ ಸೊಲ್ಲಾಪುರ, ಕೊಲ್ಲಾಪುರ, ಪಂಡರಾಪುರ, ಘಡಹಿಂಡ್ಲಜ, ಚಂದಘಟ, ಈಚಲಕರಂಜಿ ಪ್ರದೇಶವನ್ನು ಕಾನೂನಾತ್ಮಕವಾಗಿ, ಹೋರಾಟಾತ್ಮಕವಾಗಿ ಪಡೆಯುತ್ತವೆ. ಮಹಾರಾಷ್ಟ್ರ ಸರ್ಕಾರವಾಗಲಿ, ಅಲ್ಲಿನ ಸಂಘ ಸಂಸ್ಥೆಗಳಾಗಲಿ ಅನಗತ್ಯ ಕರ್ನಾಟಕದ ಪ್ರದೇಶಗಳಲ್ಲಿ ಕಿಚ್ಚು ಹಚ್ಚುವ ಕೆಲಸವನ್ನು ಮಾಡಂತೆ ಎಚ್ಚರಿಸಿ ಪತ್ರಿಕಾ ಪ್ರಕಟಣೆ ನೀಡಿದೆ.

ಮಹಾ ಸಿಎಂ ನಿಲುವಿಗೆ ಚಿ.ಮೂ. ಖಂಡನೆ
ಬೆಂಗಳೂರು: ಬೆಳಗಾವಿ ಗಡಿಪ್ರದೇಶದ ವಿಚಾರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ನಿಲುವನ್ನು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿರುವ ಮಹಾರಾಷ್ಟ್ರ ಸಿಎಂ ಉದ್ಧವ್‌ಠಾಕ್ರೆ ಅವರ ಮಾತು ಉದ್ಧಟತನದಿಂದ ಕೂಡಿದೆ ಎಂದು ದೂರಿದ್ದಾರೆ.

Advertisement

ರಾಜಕೀಯ ಪೂರಿತ: ಬೆಳಗಾವಿ, ನಿಪ್ಪಾಣಿ ಪ್ರದೇಶಗಳು ಕರ್ನಾಟಕಕ್ಕೆ ಈಗಾಗಲೇ ಸೇರಿವೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದು, ಆ ಹಿನ್ನೆಲೆಯಲ್ಲಿ ಈ ಕುರಿತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿ ಪ್ರದೇಶದ ಕುರಿತ ಉದ್ಧವ್‌ ಠಾಕ್ರೆ ಅವರ ಹೇಳಿಕೆ ರಾಜಕೀಯ ಪೂರಿತವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next