Advertisement
ಬಯಲಿನಲ್ಲೇ “ಐಸ್ ಬಾತ್’: ಘಟನೆ ಬಗ್ಗೆ ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿ ಆಂಗ್ಲ ಪತ್ರಿಕೆಗೆ ಮಾತನಾಡಿದ್ದಾರೆ. ಅವರು ಹೇಳಿದ್ದು ಇಷ್ಟು. “ತಂಡ ಉಳಿದು ಕೊಂಡಿರುವ ಹಾಸ್ಟೇಲ್ ಪಕ್ಕದಲ್ಲಿ ಮುರಿದು ಹೋಗಿರುವ ಹಳೆಯ ಪ್ಲ್ರಾಸ್ಟಿಕ್ ಟ್ಯಾಂಕಿಯೊಂದು ಇದೆ. ಆಟಗಾರರಿಗೆ ಅಲ್ಲಿಯೇ “ಐಸ್ ಬಾತ್’ ಮಾಡಿ ಸಲಾ ಗುತ್ತಿದೆ. ಹಾಗೆ ನೋಡುವುದಾದರೆ ತಲಾ ಇಬ್ಬರು ಆಟಗಾರರಿಗೆ ಒಳಾಂಗಣ ಜಾಗದಲ್ಲಿ ಟಬ್‌ಗಳನ್ನು ನೀಡಿ “ಐಸ್ ಬಾತ್’ಗೆ ವ್ಯವಸ್ಥೆ ಮಾಡಿಸಬೇಕು. ಪ್ರತಿಯೊಬ್ಬ ಆಟಗಾರನಿಗೆ 10-15 ನಿಮಿಷ ಐಸ್ ನೀರಿನ ಸ್ನಾನ ಸಿಗಬೇಕು. ಆದರೆ ಇಲ್ಲಿ ಒಂದೇ ಟಬ್‌ನಲ್ಲಿ 6-8 ಆಟಗಾರರು ಐಸ್ ನೀರಿನ ಸ್ನಾನ ಮಾಡುತ್ತಾರೆ. ಇದರಿಂದ ಐಸ್ ನೀರಿನ ಸ್ನಾನದ ಪರಿಣಾಮ ಆಟಗಾರರ ಮೇಲೆ ಬೀರುವುದಿಲ್ಲ ಎಂದಿದ್ದಾರೆ.
ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ ಬಳಿಕ ಆಟಗಾರರು ರಿಲ್ಯಾಕ್ಸ್ ಮಾಡಲು ಐಸ್ ನೀರಿನ ಸ್ಥಾನ ಮಾಡುತ್ತಾರೆ. ಇದನ್ನು ಪ್ರತಿ ದಿನವೂ ಮಾಡಿದರೆ ಒಳ್ಳೆಯದು. ಇದನ್ನು “ಐಸ್ ಬಾತ್’ ಎಂದು ಕರೆಯಲಾಗುತ್ತದೆ. “ಐಸ್ ಬಾತ್” ಮಾಡುವುದರಿಂದ ಹಲವು ಪ್ರಯೋಜನವಿದೆ. ಆಟಗಾರನ ಆಯಾಸ ಶೀಘ್ರ ಪರಿಹಾರವಾಗುತ್ತದೆ. ಜತೆಗೆ ನೋವು ನಿವಾರಣೆಯಾಗುತ್ತದೆ. ಐಸ್ ನೀರಿನ ಸ್ನಾನಕ್ಕೆ ಒಳಾಂಗಣ ಕ್ರೀಡಾಂಗಣ ಉತ್ತಮ. ಕನಿಷ್ಠ ಎಂದರೂ 10/10 ವಿಸ್ತೀರ್ಣದಲ್ಲಿ ಟ್ಯಾಂಕ್ ಅಳವಡಿಸಬೇಕು. ಅದರಲ್ಲಿ ಒಬ್ಬ ಅಥವಾ ಇಬ್ಬರಿಗಷ್ಟೇ ಅವಕಾಶ. ಹೀಗೆ ಮಾಡಿದಾಗ ಐಸ್ ನೀರಿನ ಸ್ನಾನದ ಪರಿಣಾಮ ಕಾಣಬಹುದು.