Advertisement

ಕುಮಟಾದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿ: ಜಯ ಕಂಡ ದಿನಕರ ಶೆಟ್ಟಿ

10:34 PM May 13, 2023 | Team Udayavani |

ಕುಮಟಾ:ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಕೆ ಶೆಟ್ಟಿ ಪ್ರತಿಸ್ಪರ್ಧಿ ಜೆಡಿಎಸ್ ನ ಸೂರಜ್ ನಾಯ್ಕ ಸೋನಿ ವಿರುದ್ದ ಗೆಲುವು ಸಾಧಿಸಿದ್ದಾರೆ.

Advertisement

ಕುಮಟಾ ಹೊನ್ನಾವರ ಕ್ಷೇತ್ರದ ಒಟ್ಟೂ 18 ಸುತ್ತಿನಲ್ಲಿ ಮೊದಲ ಎರಡು ಸುತ್ತುಗಳನ್ನು ಹೊರತುಪಡಿಸಿ ನಂತರದ 17 ನೇ ಸುತ್ತಿನ ವರೆಗೆ ಸೂರಜ್ ನಾಯ್ಕ ಸೋನಿ ಮುನ್ನಡೆ ಕಾಯ್ದುಕೊಂಡಿದ್ದು, ಬಳಿಕ 18 ಸುತ್ತಿನಲ್ಲಿ ದಿನಕರ ಶೆಟ್ಟಿ, ಸೂರಜ್ ಸೋನಿ ವಿರುದ್ದ 673 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ.

ಒಟ್ಟೂ 9 ಅಭ್ಯರ್ಥಿಗಳ ಪೈಕಿ, ಕಾಂಗ್ರೆಸ್ ನ ನಿವೇದಿತ್ ಆಳ್ವಾ 19272, ಬಿಜೆಪಿಯ ದಿನಕರ ಶೆಟ್ಟಿ 59966, ಜೆಡಿಎಸ್ ನ ಸೂರಜ್ ನಾಯ್ಕ ಸೋನಿ 59293, ಆಮ್ ಆದ್ಮಿ ಪಕ್ಷದ ರೂಪಾ ನಾಯ್ಕ 1963, ಲೋಕ್ ಶಕ್ತಿ ಪಕ್ಷದ ದಿನೇಶ್ಚಂದ್ರ ಅಂಗಡಿಕೇರಿ 712, ರಾಷ್ಟ್ರೀಯ ಜನಸಂಭವನಾ ಪಕ್ಷದ ನಾಗರಾಜ ಶೇಟ್ 464, ಸ್ವತಂತ್ರ ಅಭ್ಯರ್ಥಿ ಈಶ್ವರ ಗೌಡ 3595, ಗಣಿ ಇಮಾಬ್ ಸಾಬ್ 694, ಸುಬ್ರಹ್ಮಣ್ಯ ಭಟ್ 531, ಹಾಗೂ ನೋಟಾ 2095 ಮತಗಳ ಚಲಾವಣೆಯಾಗಿದೆ.

ಗೆಲುವಿನ ಸಂಭ್ರಮದಲ್ಲಿ ಪ್ರತಿಕ್ರಿಯೆ ನೀಡಿದ ದಿನಕರ ಶೆಟ್ಟಿ,ಇದು ನನ್ನೊಬ್ಬನ ಗೆಲುವಲ್ಲ.ಪಕ್ಷದ ಕಾರ್ಯಕರ್ತರ ಗೆಲುವು, ಅವರ ಪರಿಶ್ರಮ ಹಾಗೂ ಪಕ್ಷದ ಹಿರಿಯ ನಾಯಕರುಗಳ ಬೆಂಬಲದಿಂದ ಗೆಲುವು ಸಾದ್ಯವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಜನಪ್ರತಿನಿಧಿಯಾಗಿ ಅನುಭವ ಇದೆ.ಒಂದು ಬಾರಿ ಜೆಡಿಎಸ್ ನಿಂದ ಹಾಗೂ ಎರಡು ಬಾರಿ ಬಿಜೆಯಿಂದ ಗೆದ್ದು ಶಾಸಕನಾಗಿದ್ದೇನೆ.ಅಭಿವೃದ್ಧಿ ಕಾರ್ಯಗಳು ಕೆಲವೊಂದು ಬಾಕಿ ಉಳಿದದ್ದು, ಅವುಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ.ಕುಮಟಾ ಹೊನ್ನಾವರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿದ್ದು ಅದನ್ನು ಪೂರ್ಣಗೊಳಿಸಿ ಜನರಿಗೆ ನೀಡಬೇಕು ಎನ್ನುವುದು ಬಹುದೊಡ್ಡ ಕನಸಾಗಿತ್ತು.ಈದೀಗ ಈ ನಿಟ್ಟಿನಲ್ಲಿ ಕಾರ್ಯಪ್ರವರ್ತನಾಗುತ್ತೇನೆ.ಈ ಬಾರಿಯ ಗೆಲುವಿಗೆ ಶ್ರಮಿಸಿದ ಎಲ್ಲಾ ಹಿರಿ ಕಿರಿಯ ಕಾರ್ಯಕರ್ತರೂ ಹಾಗೂ ಮತದಾರರಿಗೂ ನನ್ನ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ವೇಳೆ ಸತತ ಪೈಪೋಟಿ ನೀಡಿದ ಸೂರಜ್ ನಾಯ್ಕ ಸೋನಿ ಮಾತನಾಡಿ ‘ನನ್ನ ಹಿಂದೆ ಯಾವುದೇ ರಾಷ್ಟ್ರೀಯ ನಾಯಕ, ರಾಷ್ಟ್ರೀಯ ಜನಪ್ರತಿನಿಧಿ ಇಲ್ಲ.ಕುಮಾರಸ್ವಾಮಿಯವರ ಬೆಂಬಲದೊಂದಿಗೆ ನನ್ನ ಸ್ವಂತ ಪ್ರಯತ್ನದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಬೆಂಬಲ ಪಡೆದಿರುವುದು ನನ್ನ ಅದೃಷ್ಟ.ಅದಕ್ಕಾಗಿ ನಾನು ಯಾವಾಗಲೂ ಜನರಿಗೆ ಋಣಿಯಾಗಿರುತ್ತೇನೆ.ಕಾಂಗ್ರೆಸ್ ಅಭ್ಯರ್ಥಿ ಕೊನೆಯವರೆಗೂ ಪ್ರಬಲವಾಗಿದ್ದರೆ ನನಗೆ ಗೆಲುವು ಸಾದ್ಯವಾಗುತ್ತಿತ್ತು.ಅವರ ಕೊನೆ ಘಳಿಗೆಯಲ್ಲಿನ ವರ್ತನೆಯಿಂದ ಅವರಿಗೆ ಬೀಳಬೇಕಾದ ಮತಗಳು ಬಿಜೆಪಿಗೆ ವರದಾನವಾಗಿದೆ.ನಾನು ಈ ಹಿಂದಿನಿಂದಲೂ ನಾನು ಹೋರಾಟದ ಹಾದಿಯಲ್ಲೇ ಬಂದವನು.ಈಗಲೂ ಹೋರಾಟ ಮಾಡಿದ್ದೇನೆ.ಸದಾ ಜನರೊಂದಿಗೆ ಇರುತ್ತೇನೆ.ಆದರೆ ಮುಂದಿನ ರಾಜಕೀಯ ನಡೆಯ ಬಗ್ಗೆ ಮನೆಯ ಜನ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next