Advertisement

ಬೆಟ್ಟಂಪಾಡಿ: ಶ್ರೀ ಕೃಷ್ಣ ಚರಿತ ಮಹಾಕಾವ್ಯ ಬಿಡುಗಡೆ

01:58 PM Feb 24, 2017 | Team Udayavani |

ಬೆಟ್ಟಂಪಾಡಿ : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಮತ್ತು ಡಾ| ಡಿ. ಸದಾಶಿವ ಭಟ್‌ ವಿರಚಿತ ಯಕ್ಷಗಾನ ಮಹಾಕಾವ್ಯ ಶ್ರೀ ಕೃಷ್ಣ ಚರಿತ ಇದರ ಬಿಡುಗಡೆ ಕಾರ್ಯಕ್ರಮ ಫೆ. 22ರಂದು ಬೆಟ್ಟಂಪಾಡಿ ದೇವಸ್ಥಾನದ ವಠಾರದಲ್ಲಿ ರಾತ್ರಿ  ನಡೆಯಿತು.

Advertisement

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಶಿವರಾಮ ಶಿಶಿಲ ಕೃತಿ ಅನಾವರಣಗೊಳಿಸಿ ಮಾತನಾಡಿ, ಯಕ್ಷಗಾನ ಮಹಾಕಾವ್ಯ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿ ಕಾವ್ಯದ ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿವರಿಸಿದರು.

ಗ್ರಂಥ ಪ್ರಕಟಣ ಸಮಿತಿ ಸಂಚಾಲಕ ನುಳಿಯಾಲು ರಘುನಾಥ ರೈ ಮಾತನಾಡಿ, ಎಲ್ಲ ಭಾಷೆಯಲ್ಲಿ ಯಕ್ಷಗಾನ ಪ್ರಸಂಗವನ್ನು ಶಾಸ್ತ್ರೀಯವಾಗಿ ಬರೆದ ಮೊದಲ ಕವಿ ಸದಾಶಿವ ಭಟ್ಟರು. ಇವರ ಕಾವ್ಯ ಎಲ್ಲರೂ ಮೆಚ್ಚುವ ರೀತಿಯಲ್ಲಿ ಇದೆ ಎಂದು ತಿಳಿಸಿದರು.

ಡಾ| ಡಿ. ಸದಾಶಿವ ಭಟ್‌ ಮಾತನಾಡಿ, ಕಾವ್ಯ ಬರೆಯಲು ಸಿಕ್ಕಿದ ಪ್ರೇರಣೆ ಹಾಗೂ ತಮ್ಮ ಹೊಸ ಪ್ರಯೋಗದ ಬಗ್ಗೆ ವಿವರಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಮುಖ್ಯಸ್ಥ ಡಾ| ತಾಳ್ತಜೆ ವಸಂತ ಕುಮಾರ್‌  ಮಾತನಾಡಿ, ಇದೊಂದು ಸೃಜನಶೀಲ ಬರವಣಿಗೆಯಾಗಿದ್ದು, ಹೊಸತನವನ್ನು ಹೊಂದಿದೆ. ಅಲ್ಲದೆ ದೇಶೀಯ ಮಾರ್ಗದ ರೂಪದಲ್ಲಿ ಬರೆದ ಮೊದಲ ಕಾವ್ಯ ಎಂದು ಹೇಳಿದರು.

Advertisement

ಬೆಟ್ಟಂಪಾಡಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ರೈ ಗುತ್ತು ಸಂಘದ ಗೌರವಾಧ್ಯಕ್ಷ ಕೆ. ಸಂಜೀವ ಶೆಟ್ಟಿ  ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಎಂ. ಶ್ಯಾಂ ಪ್ರಸಾದ್‌ ಪ್ರಾರ್ಥಿಸಿ, ಅಧ್ಯಕ್ಷ  ಟಿ. ಚಂದ್ರಶೇಖರ ಮಣಿಯಾಣಿ ಸ್ವಾಗತಿಸಿದರು.  ಗ್ರಂಥ ಪ್ರಕಟಣ ಸಮಿತಿ ಕಾರ್ಯದರ್ಶಿ ಬಿ. ವೆಂಕಟ್ರಾವ್‌ ಮಾತನಾಡಿದರು. 

ಸಂಘದ ಕಾರ್ಯದರ್ಶಿ ಟಿ. ಲಕ್ಷ್ಮಣ ಮಣಿಯಾಣಿ ವರದಿ ವಾಚಿಸಿ, ಸದಸ್ಯ ಐ. ಗೋಪಾಲಕೃಷ್ಣ ರಾವ್‌ ವಂದಿಸಿದರು. ಶಿಕ್ಷಕ ಎಸ್‌. ಭಾಸ್ಕರ ಶೆಟ್ಟಿ ನಿರೂಪಿಸಿದರು. ಕಾವ್ಯ ಅನಾವರಣಗೊಳಿಸಿದ ಶಿವರಾಮ ಶಿಶಿಲ, ಸಮಾರಂಭದ ಅಧ್ಯಕ್ಷ ತಾಳ್ತಜೆ ವಸಂತಕುಮಾರ್‌ ಹಾಗೂ ಕತೃì ಡಾ| ಡಿ. ಸದಾಶಿವ ಭಟ್‌ ಅವರನ್ನು ಸಮ್ಮಾನಿಸಲಾಯಿತು. ಅನಂತರ ಚಂದ್ರಶೇಖರ ಮಣಿಯಾಣಿ ನಿರ್ದೇಶನದ ಡಾ| ಡಿ. ಸದಾಶಿವ ಭಟ್‌ ವಿರಚಿತ ಮಕ್ಕಳ ಯಕ್ಷಗಾನ ಪ್ರಸಂಗ ಶ್ವೇತಾವಸಾನ ಹಾಗೂ ಅತಿಥಿ ಹಾಗೂ ಸಂಘದ ಕಲಾವಿದರಿಂದ ಶ್ರೀ ಕೃಷ್ಣ ಬಾಲಲೀಲೆ, ಕಂಸವಧೆ ಮತ್ತು ಸಣ್ತೀ ಪರೀಕ್ಷೆ ಯಕ್ಷಗಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next