Advertisement

ಇಂದಿರಾ ಕ್ಯಾಂಟೀನ್‌ಗೆ ಉತ್ತಮ ಪ್ರತಿಕ್ರಿಯೆ

10:04 AM Feb 17, 2019 | |

ಬಸವನಬಾಗೇವಾಡಿ: ರಾಜ್ಯಸರಕಾರ ಶುರುಮಾಡಿರುವ ಇಂದಿರಾ ಕ್ಯಾಂಟೀನ್‌ ಸೇವೆಗೆ ಪಟ್ಟಣ ಸೇರಿದಂತೆ ತಾಲೂಕಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಸರಕಾರದ ಅನೇಕ ಯೋಜನೆಗಳು ಜಾರಿಗೆ ಬರುವ ಮುನ್ನವೆ ಹಳ್ಳ ಹಿಡಿಯುತ್ತವೆ.

Advertisement

ಇನ್ನೂ ಅನೇಕ ಯೋಜನೆಗಳು ಜಾರಿಗೆ ಬಂದು ಅವುಗಳು ಜನರಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ಮುಟ್ಟುವಲ್ಲಿ ವಿಫಲಗೊಂಡ ಉದಾಹರಣೆಗಳೆ ಹೆಚ್ಚಿವೆ. ಆದರೆ ಬಸವನಬಾಗೇವಾಡಿ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಮಾತ್ರ ಪಟ್ಟಣದ ಸೇರಿದಂತೆ ತಾಲೂಕಿನ ಜನತೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿರುವುದರಿಂದ ಈ ಯೋಜನೆ ಸಾರ್ವಜನಿಕರಿಗೆ ಸಹಕಾರಿಯಾಗಿದೆ.

ಬೆಳಗ್ಗೆ ಉಪಹಾರ ಕೇವಲ 5 ರೂ. ಹಾಗೂ ಮಧ್ಯಾಹ್ನದ ಊಟ 10 ರೂ.ಗೆ ನೀಡುವ ಮೂಲಕ ಹಸಿದವರ ಹೊಟ್ಟೆಯನ್ನು ತುಂಬಿಸುವ ಕಾರ್ಯ ಉತ್ತಮವಾಗಿದೆ. ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರ ಹಾಗೂ 5 ತಾಲೂಕು ಕೇಂದ್ರ ಹೊಂದಿರುವ ಜಿಲ್ಲೆಯಲ್ಲಿ ವಿಜಯಪುರ ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಗೊಂಡರೆ ಬೇರೆ ಯಾವ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಗೊಂಡಿಲ್ಲ. ಬಸವನಬಾಗೇವಾಡಿ ಪಟ್ಟಣದಲ್ಲಿ ಫೆ. 2ರಂದು ಇಂದಿರಾ ಕ್ಯಾಂಟೀನ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಹೀಗಾಗಿ ತಾಲೂಕಿನ ಹಾಗೂ ಪಟ್ಟಣದ ಕಾರ್ಮಿಕರು ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ.
 
ಈಗ ಪ್ರತಿನಿತ್ಯ ಬೆಳಗ್ಗೆ ಉಪ್ಪಿಟ್ಟು ಹಾಗೂ ಕೇಸರಿಬಾತ್‌ ನೀಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಚಿತ್ರಾನ್ನ ಹಾಗೂ ಮೊಸರನ್ನ ನೀಡಲಾಗುತ್ತದೆ. ಇನ್ನೊಂದು ದಿನ ಅನ್ನ ಸಾಂಬರ್‌ ಹಾಗೂ ಮೊಸರನ್ನ ನೀಡಲಾಗುತ್ತದೆ. ಆದರೆ ರಾಜ್ಯಸರಕಾರದ ಆದೇಶ ಪ್ರತಿನಿತ್ಯ ಬೆಳಗ್ಗೆ ಬೇರೆ ಬೇರೆ ತಿಂಡಿ ತಿನಿಸು ನೀಡಬೇಕು. ಮಧ್ಯಾಹ್ನ ಊಟಕ್ಕೂ ಕೂಡಾ ಬೇರೆ ಬೇರೆ ಅಡುಗೆಯನ್ನು ತಯಾರಿಸಿ ಬಡಿಸಬೇಕೆಂಬ ಆದೇಶ ಇದೆ. 

ಪ್ರಕಾಶ ಬೆಣ್ಣೂರ

Advertisement

Udayavani is now on Telegram. Click here to join our channel and stay updated with the latest news.

Next