Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 11ಕ್ಕೆ ಸಿಎಂ ಮನೆಗೆ ಮುತ್ತಿಗೆ

06:39 PM Jul 08, 2022 | Team Udayavani |

ತುಮಕೂರು: ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕಾರಿ ಮಂಡಳಿಯ ತೀರ್ಮಾನದಂತೆ ಜು.11 ರಂದು ಕಬ್ಬಿನ ಬಾಕಿ ಹಣ ನೀಡಬೇಕು ಹಾಗೂ ಕಬ್ಬುಗೆ ಟನ್‌ಗೆ 4,500 ರೂ. ನೀಡಬೇಕು ಮತ್ತು ಕರ ನಿರಾಕರಣೆ ಚಳವಳಿ ಸಂದರ್ಭದಲ್ಲಿ ಮನೆಯ ವಿದ್ಯುತ್‌ ಬಿಲ್‌
ಪಾವತಿಸದ ರೈತ ಕುಟುಂಬಗಳಿಗೆ ನೀಡಿರುವ ತೊಂದರೆ ನಿವಾರಿಸಬೇಕೆಂದು ಆಗ್ರಹಿಸಿ ಮುಖ್ಯ ಮಂತ್ರಿ ಮನೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ ತಿಳಿಸಿದರು.

Advertisement

ನಗರದ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ಜು.11ರ ಮುಖ್ಯಮಂತ್ರಿ ಮನೆ ಮುತ್ತಿಗೆ ಕಾರ್ಯ ಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಸಕ್ಕರೆ ಕಾರ್ಖಾನೆ ಗಳಿಗೆ ಸರಬರಾಜು ಮಾಡಿದ ಸಾವಿ ರಾರು ಟನ್‌ ಕಬ್ಬಿಗೆ ನೂರಾರು ಕೋಟಿ ರೂ.ಬಾಕಿ ರೈತರಿಗೆ ಬರಬೇಕಿದೆ. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಉನ್ನತ ಹುದ್ದೆಯಲ್ಲಿರುವ ಜನಪ್ರತಿ ನಿಧಿಗಳೇ ಆಗಿರುವುದರಿಂದ ಸರ್ಕಾರ ಅವರಿಂದ ರೈತರ ಬಾಕಿ ವಸೂಲಿ ಮಾಡಿಕೊಡಲು ಸಾಧ್ಯವಾಗಿಲ್ಲ.

ಅತ್ಯಂತ ಕಡಿಮೆ ದರ: ರೈತರಿಗೆ ಬರಬೇಕಾಗಿರುವ ಕಬ್ಬು ಬಾಕಿ ಬಿಲ್‌ ಪಾವತಿಸಬೇಕು ಎಂಬುದು ರೈತ ಸಂಘದ ಆಗ್ರಹವಾಗಿದೆ. ಜೊತೆಗೆ ಪ್ರಸ್ತುತ ಕಬ್ಬಿಗೆ ಟನ್‌ಗೆ 3,150 ರೂ. ನೀಡುತ್ತಿದ್ದು, ಅತ್ಯಂತ ಕಡಿಮೆ ದರವಾಗಿದೆ. ಇಂದಿನ ರಸಗೊಬ್ಬರ, ಕೃಷಿ ಕೂಲಿಯ ದರಕ್ಕೆ ಅನುಗುಣವಾಗಿ ಪ್ರತಿಟನ್‌ ಕಬ್ಬಿಗೆ 4,500 ರೂ. ನೀಡಬೇಕೆಂಬುದು ರೈತ ಸಂಘದ ಬೇಡಿಕೆ ಯಾಗಿದೆ ಎಂದರು.

300ಕ್ಕೂ ಹೆಚ್ಚು ರೈತರು ಭಾಗಿ: ಇದುವರೆಗೂ ರೈತರು, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀ ಕರ ನಡುವೆ ಹಲವಾರು ಸಭೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಜು.11 ರಂದು ಸಿಎಂ ಮನೆ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳ ಲಾಗಿದೆ.

ಜಿಲ್ಲೆಯಿಂದ 300ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರವೀಶ್‌ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು ನೂರಾರು ಎಕರೆಯಲ್ಲಿ ಬೆಳೆದಿದ್ದ ತೆಂಗು, ಅಡಕೆ, ಮಾವು ಇನ್ನಿತರ ತೋಟಗಾರಿಕಾ ಬೆಳೆಗಳು ನಾಶವಾ ಗಿವೆ. ಆದರೆ ಸರ್ಕಾರ ಅವೈ ಜ್ಞಾನಿಕ ಪರಿಹಾರ ನೀಡಿದೆ. ಸರ್ಕಾರ ಕೂಡಲೇ ಎನ್‌.ಡಿ.ಆರ್‌.ಎಫ್ ಮತ್ತು ಎಸ್‌.ಡಿ.ಆರ್‌. ಎಫ್ ನಿಯಮಗಳ ಅನ್ವಯ ಪರಿಹಾರಗಳನ್ನು
ನೀಡುವ ಮೂಲಕ ಸಂಕಷ್ಟದಲ್ಲಿ ರುವ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

Advertisement

ಕ್ರಮಕ್ಕೆ ಒತ್ತಾಯ: ಗುಬ್ಬಿ ತಾಲೂಕು ಬಿಕ್ಕೆಗುಡ್ಡ, ಹಾಗಲವಾಡಿ ಏತನೀರಾವರಿ ಯೋಜನೆಗಳ ಆರಂ ಭವಾಗಿ ಐದು ವರ್ಷ ಕಳೆದಿದ್ದರೂ ಇದುವ ರೆಗೂ ಪೂರ್ಣ ಗೊಂಡಿಲ್ಲ. ಅನುದಾನದ ಕೊರತೆ ಯಿಂದ ಭೂ ಸ್ವಾಧೀನ ಪ್ರಕ್ರಿಯೆ ವಿಳಂಭವಾಗಿ ಕಾಮಗಾರಿ ಗಳು ನನೆಗುದಿಗೆ ಬಿದ್ದಿವೆ. ಸರ್ಕಾರ ಕೂಡಲೇ ಕ್ರಮ ತೆಗೆದು ಕೊಳ್ಳಬೇಕೆಂಬುದು ರೈತ ಸಂಘದ ಒತ್ತಾಯ ವಾಗಿದೆ ಎಂದರು. ಸಭೆಯಲ್ಲಿ ರೈತ ಸಂಘದ ವಿವಿಧ ತಾಲೂಕು ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳಾದ ಪೂಜಾರಪ್ಪ, ಶಬ್ಬೀರ, ಸಿದ್ದರಾಜು, ರಂಗ ಹನುಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next