Advertisement

ವಿದ್ಯುತ್‌ ಖಾಸಗೀಕರಣಕ್ಕೆ ಬೆಸ್ಕಾಂ ನೌಕರರ ವಿರೋಧ

12:33 PM Oct 06, 2020 | Suhan S |

ದೊಡ್ಡಬಳ್ಳಾಪುರ: ವಿದ್ಯುತ್‌ ವಲಯದಲ್ಲಿ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್‌ ಸರಬರಾಜು ಕಂಪನಿಗಳ ‌ ಗುತ್ತಿಗೆ ನೌಕರರ ಸಂಘದ ಸದಸ್ಯರು ಸೋಮವಾರ ಕಪ್ಪುಪಟ್ಟಿ ಧರಿಸಿ ಬೆಸ್ಕಾಂ ಕಚೇರಿ ಮುಂದೆ ಸಾಂಕೇಕವಾಗಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ, ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್‌.ಮುತ್ತುರಾಜ್, ಕಾರ್ಯದರ್ಶಿ ರಘುನಂದನ್‌, ಚಿಕ್ಕಪ್ಪ, ನಗರ ವಿಭಾಗದ ಕಾರ್ಯಪಾಲಕ ‌ ಎಂಜಿನಿಯರ್‌ ಎನ್‌.ರೋಹಿತ್‌, ಗ್ರಾಮೀಣ ಭಾಗದ ಎಂಜಿನಿಯರ್‌ ಸಿ.ಮೋಹನ್‌, ಕೇಂದ್ರ ಸರ್ಕಾರ ವಿದ್ಯುತ್‌ ಕಂಪನಿಗಳನ್ನು ಖಾಸಗೀ ಕರಣ ಮಾಡುತ್ತಿರುವುದು ನೌಕರರ ಸೇವಾ ಭದ್ರತೆಗೆ ಅಪಾಯ ಎದುರಾಗಲಿದೆ. ಸರ್ಕಾರಿ ಸ್ವಾಮ್ಯದಲ್ಲಿದ್ದ ಕಂಪನಿಗಳು ಖಾಸಗೀಕರಣಗೊಂಡ ನಂತರ ಅಲ್ಲಿನ ನೌಕರರ ಸೇವಾ ಭದ್ರತೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಈಗಾಗೇ ಸಾಬೀತಾಗಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರವೂ ಸೇರಿದಂತೆ ಹಲವು ರಾಜ್ಯಗಳು ಈ ಕಾಯ್ದೆ ವಿರೋಧ ವ್ಯಕ ¤ಪಡಿಸಿದ್ದವು. ಆದರೆ ಕೇಂದ್ರ ಸರ್ಕಾರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರದೆ, ವಿದ್ಯುತ್‌ ವಿತರಣಾ ಕಂಪೆನಿಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ವಿದ್ಯುತ್‌ ವಿತರಣೆ ಖಾಸಗೀಕರಣನಿಂದ ಸರ್ಕಾರ ನೀಡುತ್ತಿರುವ ಸಾಮಾಜಿಕ ಕಾರ್ಯ ಕ್ರಮಗಳಾದ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಉಚಿತ ವಿದ್ಯುತ್‌ ಮತ್ತು ರಿಯಾಯಿತಿಗಳು ರದ್ದಾಗಲಿವೆ. ಹೋರಾಟಕ್ಕೆ ನಮ್ಮ ರಾಜ್ಯ ನೌಕರರು ಸಹಮತ‌ ಸೂಚಿಸಿ ಬೆಂಬಲ ಸೂಚಿಸಿದ್ದಾರೆ.  ಈ ನಿಟ್ಟಿನಲ್ಲಿ ಕೆಲಸಕ್ಕೆ ಹಾಜರಾಗಿ ಕಪ್ಪು ಪಟ್ಟಿ ಧರಿಸಿ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಉಪವಿಭಾಗದ ಎಲ್ಲಾ ಕಾರ್ಯ ಮತ್ತು ಪಾಲನಾ ಘಟಕದ ಅಧಿಕಾರಿಗಳು, ನೌಕರರು, ಮಾಪಕ ಓದುಗರು ಹಾಗೂ ಗ್ರಾಮ ವಿದ್ಯುತ್‌ ಪ್ರತಿನಿಧಿಗಳು ಭಾಗವಹಿಸಿದ್ದರು.

ರಿಯಾಯಿತಿ ದರದಲ್ಲಿ ವಿದ್ಯುತ್‌ ಸಿಗಲ್ಲ : ಮುನಿಆಂಜಿನಪ್ಪ :

ನೆಲಮಂಗಲ: ವಿದ್ಯುತ್‌ಖಾಸಗೀಕರಣದಿಂದ ಗ್ರಾಹಕರು ಹಾಗೂ ನೌಕರರಿಗೆ ಸಮಸ್ಯೆಯಾಗುತ್ತದೆ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮುನಿಆಂಜಿ ನಪ್ಪ ಹೇಳಿದ್ದಾರೆ.

Advertisement

ನಗರದ ಕೆಇಒ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ಹಾಗೂ ಬೆಸ್ಕಾಂ ನೌಕರರುಕೈಗೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

ಖಾಸಗೀಕರಣದಿಂದ ಕಂಪನಿಯವರು ಹೇಳುವ ಬೆಲೆ ನೀಡುವ ಅನಿವಾರ್ಯತೆ ಎದುರಾಗಲಿದ್ದು, ಈಗ ಕೆಲಸ ನಿರ್ವಹಿಸುವ ಸಾವಿರಾರು ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ ಉತ್ತಮವಾಗಿ ವಿದ್ಯುತ್‌ ಪ್ರಸರಣಾ ವ್ಯವಸ್ಥೆ ಇದ್ದು, ಭಾಗ್ಯ ಜ್ಯೋತಿ, ರೈತರ ಕೊಳವೆ ಭಾವಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ನೀಡುವ ರಿಯಾಯಿತಿ ಹಣವನ್ನು ಸರಕಾರ ತಡವಾಗಿ ನೀಡಿದರೂ ವಿದ್ಯುತ್‌ ಸರಬರಾಜು ಮಾಡಲಾಗುತಿದೆ.ಖಾಸಗೀಕರಣ ಮಾಡಿದರೆ

ಶ್ರೀಮಂತರಿಗೂ, ಬಡವರಿಗೂ ವ್ಯತ್ಯಾಸವಿಲ್ಲದಂತೆ ಮಾಡುವ ಈ ಕಾಯ್ದೆಯಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಸಹಾಯಕ ಅಭಿಯಂತರರ ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯ ಹೇಮಂತ್‌.ಎಲ್‌ ಮಾತನಾಡಿ, ಎಲ್ಲಾ ಸಂಘಟನೆಗಳು, ನೌಕರರ ಅಭಿಪ್ರಾಯ ಸಂಗ್ರಹಿಸಿ ಕಾಯ್ದೆ ರೂಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯುತ್‌ ಖಾಸಗೀಕರಣ ಮಾಡಿದ ಪರಿಣಾಮ ಗ್ರಾಹಕರಿಗೆ ಸಮಸ್ಯೆಯಾಗಿದೆ ಎಂದರು.

ಈ ವೇಳೆ ಕರ್ನಾಟಕ ವಿದ್ಯುತ್‌ ಪ್ರಸರಣಾ ಮಂಡಳಿ ಸ್ಥಳೀಯ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ, ಎಇಇ ನಾಗರಾಜು ಹೆಚ್‌ಪಿ, ಡಿಪ್ಲೋಮಾ ಜೂನಿಯರ್‌ ಅಸೋಶಿಯ ಶನ್‌ ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯ ಸುರೇಶ್‌, ಲೆಕ್ಕಾಧಿಕಾರಿಗಳ ಸಂಘದ ಶ್ರೀಕಾಂತ್‌, ಎಸ್ಸಿ ಎಸ್ಟಿ ನೌಕರರ ಸಂಘದ ಶ್ರೀನಿವಾಸ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next