Advertisement

ಬರ್ಮುಡಾ ರಹಸ್ಯ ಬಯಲು

06:00 AM Aug 03, 2018 | |

ಲಂಡನ್‌: ಶತಮಾನದಿಂದ ನಿಗೂಢವಾಗಿ ಉಳಿದಿರುವ ಬರ್ಮುಡಾ ತ್ರಿಕೋನದ ರಹಸ್ಯವನ್ನು ಇದೀಗ ಬ್ರಿಟಿಷ್‌ ವಿಜ್ಞಾನಿಗಳು ಭೇದಿಸಿದ್ದಾರೆ. ಬರ್ಮುಡಾ ತ್ರಿಕೋನದಲ್ಲಿ ಅಷ್ಟೊಂದು ಹಡಗುಗಳು ಮುಳುಗಲು 100 ಅಡಿ ಎತ್ತ ರದ ರಾಕ್ಷಸ ಅಲೆಗಳೇ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಚಾನೆಲ್‌ 5ನಲ್ಲಿ ದಿ ಬರ್ಮುಡಾ ಟ್ರ್ಯಾಂಗಲ್‌ ಎನಿಗ್ಮಾ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿರುವ ಸೌತಾಂಪ್ಟನ್‌ ಯುನಿವರ್ಸಿಟಿಯ ತಜ್ಞರು ಈ ರಾಕ್ಷಸ ಅಲೆಗಳನ್ನು ನೈಸರ್ಗಿಕ  ವಿದ್ಯಮಾನ ಎಂದು ಬಣ್ಣಿಸಿದ್ದಾರೆ. ಜತೆಗೆ ಸಿಮ್ಯುಲೇಟರ್‌ಗಳನ್ನು ಉಪಯೋಗಿಸಿ ಕೊಂಡು ದೈತ್ಯ ನೀರಿನ ಅಲೆಗಳನ್ನು ಮರುಸೃಷ್ಟಿ ಮಾಡಿ ವಿವರಣೆ ನೀಡಿದ್ದಾರೆ. 

ಈ ದೈತ್ಯ ಅಲೆಗಳು ಕೆಲ ನಿಮಿಷಗಳಷ್ಟು ಹೊತ್ತು ಮಾತ್ರ ಇರುತ್ತವೆ. ಕೆಲವೊಂದು 100 ಅಡಿಗಳಷ್ಟು ಎತ್ತರಕ್ಕೂ ಬರುತ್ತವೆ. ಇದನ್ನು 1997ರಲ್ಲಿ ಮೊದಲ ಬಾರಿಗೆ ಉಪಗ್ರಹದ ಮೂಲಕ ಪತ್ತೆ ಮಾಡಲಾಗಿದೆ. ದಕ್ಷಿಣ ಮತ್ತು ಉತ್ತರದಿಂದ ಹಾಗೂ ಇದರೊಂದಿಗೆ ಫ್ಲೋರಿ ಡಾ ದಿಂದ ಬಿರುಗಾಳಿ ಒಟ್ಟಿಗೆ ಬರುವುದರಿಂ ದಾಗಿ ರಾಕ್ಷಸ ಸ್ವರೂಪ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಎಲ್ಲಿದೆ ಬರ್ಮುಡಾ ತ್ರಿಕೋನ?: ಉತ್ತರ ಅಟ್ಲಾಂಟಿಕಾ ಸಮುದ್ರದ ಪಶ್ಚಿಮ ಭಾಗದಲ್ಲಿ ಫ್ಲೋರಿಡಾ, ಬರ್ಮುಡಾ ಹಾಗೂ ಪೋಟೋ- ರಿಕೊ ನಡುವಿನ 7,00,000 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶವೇ ಈ ನಿಗೂಢ ಸ್ಥಳವಾಗಿದೆ. ಕಳೆದ 100 ವರ್ಷ ಗಳಲ್ಲಿ ಆ ತ್ರಿಕೋನಾಕಾರದ ಆ ಭಾಗದಲ್ಲಿ ಹಾದು ಹೋದ ಅನೇಕ ಹಡಗುಗಳು ನಾಪತ್ತೆ ಯಾ ಗಿದ್ದು 1,000ಕ್ಕೂ ಹೆಚ್ಚು ಮಂದಿ ಜೀವ ಕಳೆದು ಕೊಂಡಿದ್ದಾರೆ, ಈ ಕಾರಣಕ್ಕಾಗಿಯೇ ಇದು ಸೈತಾನನ ತ್ರಿಕೋನ ಎಂದೇ ಕುಖ್ಯಾತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next