Advertisement
10 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್)ದ ಎಂಡಿ ಅಂಜುಂ ಪರ್ವೇಜ್ ಅವರು “ಉದಯವಾಣಿ’ ಯೊಂದಿಗೆ ತಮ್ಮ ಕಾರ್ಯನಿರ್ವಹಣೆಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
Related Articles
Advertisement
10 ವರ್ಷಗಳಲ್ಲಿ ಟೆಂಡರ್‌ಗೆ ನೀವು ಸಾಕಷ್ಟು ಕಾಲಹರಣ ಮಾಡಿದ್ದೀರಿ… ಕಾಲಹರಣವೆನ್ನಲಾಗದು. ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಆರಂಭದಲ್ಲಿದ್ದವು. ಅದೆಲ್ಲವನ್ನೂ ದಾಟಿ ನಾವು ಗುರಿ ತಲುಪಿದ್ದೇವೆ. ಅಲ್ಲದೆ, ಹಿಂದಿನ ತಪ್ಪುಗಳು ಪುನರವರ್ತನೆ ಆಗದಂತೆ ನೋಡಿಕೊಂಡಿದ್ದೇವೆ. ಉದಾಹರಣೆಗೆ ಹೊರವರ್ತುಲ ರಸ್ತೆಯಲ್ಲಿ ತ್ವರಿತ ಗತಿಯಲ್ಲಿ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿದ್ದೇವೆ. “2ಬಿ’ಗೆ ಕೂಡ ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 3ನೇ ಹಂತದಲ್ಲೂ ಈ ಕ್ರಮವನ್ನು ಅನುಸರಿಸಲಾಗುವುದು.
ಭವಿಷ್ಯದಲ್ಲಿ ಮೆಟ್ರೋ ಜಾಲ ಎಷ್ಟು ವಿಸ್ತರಿಸುವ ಗುರಿ ಇದೆ ಹಾಗೂ ಯಾವಾಗ ಪೂರ್ಣ? ಸುಮಾರು 375 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಈಗಾಗಲೇ ನಮ್ಮ ಬಳಿ ಇದೆ. 2024ಕ್ಕೆ 2ನೇ ಹಂತ ಪೂರ್ಣಗೊಳ್ಳಲಿದೆ. ಅದಕ್ಕೂ ಮೊದಲೇ ಮೂರನೇ ಹಂತಕ್ಕೆ ಅನುಮೋದನೆ ಪಡೆದು, ಟೆಂಡರ್ ಪ್ರಕ್ರಿಯೆ ಶುರು ಮಾಡುವ ಗುರಿ ಇದೆ. ಈ ಮಧ್ಯೆ ಬೇಡಿಕೆ, ಸಂಚಾರದಟ್ಟಣೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಿನ್ಯಾಸಗಳನ್ನು ಅಂತಿಮಗೊಳಿಸಲಾಗುವುದು.
ಇದನ್ನೂ ಓದಿ;- 50 ಕೋಟಿ ರೂ.ಯೋಜನೆಗೆ ಗ್ರಹಣ
ಪ್ರಾಪರ್ಟಿ ಡೆವಲಪ್‌ಮೆಂಟ್‌ನಲ್ಲಿ ಮೆಟ್ರೋ ಸಾಕಷ್ಟು ಹಿಂದೆಬಿದ್ದಿದೆಯೇ? ನಿಜ. ಆದರೆ, ಇದುವರೆಗೆ ನಮ್ಮ ಆದ್ಯತೆ ಸಾಧ್ಯವಾದಷ್ಟು ಮಾರ್ಗಗಳ ವಿಸ್ತರಣೆ ಹಾಗೂ ಸೇವೆ ಆಗಿತ್ತು. ಇದಕ್ಕೆ ಪೂರಕವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗವನ್ನು ವೃದ್ಧಿಸುತ್ತಾ ಹೋಗಬೇಕಾಯಿತು. ಮುಂದಿನ ದಿನಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಸೇರಿದಂತೆ ವಿವಿಧ ಮಾದರಿಗಳಲ್ಲಿ ಇದನ್ನು ಅಭಿವೃದ್ಧಪಡಿಸಲಾಗುವುದು.
ಸಿಲಿಕಾನ್ ಸಿಟಿಯಲಿ ಮೆಟ್ರೋ ವಿಸ್ತರಣೆಗಿರುವ ಅವಕಾಶಗಳ ಬಗ್ಗೆ ಹೇಳಿ?
ಬೆಂಗಳೂರು ಐಟಿ ಹಬ್ ಹಾಗೂ ಶಿಕ್ಷಣದ ಹಬ್ ಆಗಿದೆ. ಇಲ್ಲಿದ್ದಷ್ಟು ಶಿಕ್ಷಣ ಸಂಸ್ಥೆಗಳು, ಟೆಕ್ ಪಾರ್ಕ್‌ಗಳು ಬೇರೆ ಎಲ್ಲಿಯೂ ಇಲ್ಲ. ಅದಕ್ಕೆ ಪೂರಕವಾಗಿ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ತುಮಕೂರು ರಸ್ತೆ ಹೀಗೆ ವಿವಿಧೆಡೆ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕೆ ದೊರೆತೆ ಸ್ಪಂದನೆ ಕೂಡ ನಾವು ನೋಡಿದ್ದೇವೆ. ಆದ್ದರಿಂದ ಮೆಟ್ರೋ ವಿಸ್ತರಣೆಗೆ ಇಲ್ಲಿ ವಿಪುಲ ಅವಕಾಶಗಳಿವೆ. ಇದರ ಅಗತ್ಯತೆಯೂ ಇಲ್ಲಿ ಹೆಚ್ಚಿದೆ. ಯಾಕೆಂದರೆ, ವಿಶ್ವದಲ್ಲಿ ಅತಿಹೆಚ್ಚು ವಾಹನದಟ್ಟಣೆ ಹೊಂದಿರುವ ನಗರ ಕೂಡ ಇದಾಗಿದೆ.