ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ ಸ್ಟ್ರಾಗ್ರಾಂನಲ್ಲಿ ಯುವತಿಯೊಂದಿಗೆ ಯುವಕನೊಬ್ಬ ಖಾಸಗಿಯಾಗಿ ನಡೆಸಿದ ಚಾಟ್ ಹಾಗೂ ವಿಡಿಯೋ ಕರೆಗಳ ಸ್ಕ್ರಿನ್‌ಶಾಟ್‌ಗಳನ್ನು ಇಟ್ಟುಕೊಂಡು ಆತನ ಸ್ನೇಹಿತರೇ ಸಿಸಿಬಿ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿರುವ ಪ್ರಕರಣ ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಸುನೀಲ್, ಹೇಮಂತ್, ಪ್ರವೀಣ್ ಎಂಬು ವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಚಾಮರಾಜಪೇಟೆ ನಿವಾಸಿ ಬಿ.ವಿನೋದ್(20) ವಂಚನೆಗೊಳಗಾದವರು. ವಿನೋದ್‌ನಿಂದ ಆತನ ಸ್ನೇಹಿತರಾದ ಸುನೀಲ್, ಹೇಮಂತ್, ಪ್ರವೀಣ್ ಎಂಬುವರು 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತು ಹಾಗೂ ಬರೋಬ್ಬರಿ 15.90 ಲಕ್ಷ ರೂ. ನಗದು ಸುಲಿಗೆ ಮಾಡಿದ್ದಾರೆ.
ದೂರುದಾರ ವಿನೋದ್ ಕಳೆದ ಏಪ್ರಿಲ್ ನಲ್ಲಿ ಇನ್‌ಸ್ಟ್ರಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಪರಿ ಚಯಿಸಿ ಕೊಂಡಿದ್ದು, ನಂತರ ಇಬ್ಬರು ಖಾಸಗಿಯಾಗಿ ಚಾಟಿಂಗ್ ಹಾಗೂ ವಿಡಿಯೋ ಕಾಲ್ ಮಾಡಿದ್ದಾರೆ. ಅನಂತರ ವಿನೋದ್‌ಗೆ ಸೆಕ್ಸ್ ಮಾಡಲು ಯುವತಿ ಆಹ್ವಾನ ನೀಡಿದ್ದರು. ಅದಕ್ಕೆ ವಿನೋದ್ ನಿರಾಕರಿಸಿದ್ದು, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಈ ವಿಚಾ ರವನ್ನು ವಿನೋದ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಜತೆಗೆ ಅಶ್ಲೀಲ ವಿಡಿಯೋ, ಫೋಟೋ ಸ್ಕ್ರಿನ್ ಶಾಟ್ ಕೊಟ್ಟಿದ್ದಾನೆ.
ಅದನ್ನು ಇಟ್ಟುಕೊಂಡ ಆರೋಪಿ ಗಳು ಆತನಿಗೆ ಸಿಸಿಬಿ ಪೊಲೀಸರಿಗೆ ಈ ವಿಚಾರ ಗೊತ್ತಾ ಗಿದೆ. ನಾವುಗಳು ಪೊಲೀಸರನ್ನು ಒಪ್ಪಿಸುತ್ತೇವೆ. ಸೆಂಟಲ್ ಮೆಂಟ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಕೆಲ ದಿನಗಳ ಬಳಿಕ ವಿನೋದ್‌ಗೆ ಕರೆ ಮಾಡಿದ ಸುನೀಲ್, “ಬೇಗ ಸೆಟಲ್‌ಮೆಂಟ್ ಮಾಡು. ಇಲ್ಲವಾ ದರೆ, ಪೊಲೀಸರು ನಿನ್ನನ್ನು ಬಂಧಿಸುತ್ತಾರೆ’ ಎಂದು ಬೆದರಿಸಿದ್ದಾನೆ.
ಅದರಿಂದ ಆತಂಕಗೊಂಡ ವಿನೋದ್, ಪೊಲೀಸರೊಂದಿಗೆ ಸೆಟಲ್‌ಮೆಂಟ್ ಮಾಡಿಕೊಳ್ಳಲು ಒಪ್ಪಿದ್ದಾನೆ. ಅದರಂತೆ ಮೊದಲಿಗೆ ಆರೋಪಿ ಸುನೀಲ್ ಗೆ 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತು ನೀಡಿದ್ದಾನೆ. ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿರುವ ಸುನೀಲ್, “ಸಿಸಿಬಿ ಪೊಲೀಸರು ಈ ಚಿನ್ನಕ್ಕೆ ಒಪ್ಪುತ್ತಿಲ್ಲ. ಮತ್ತಷ್ಟು ಹಣ ಕೊಡಬೇಕು’ ಎಂದು 3.50 ಲಕ್ಷ ರೂ. ಪಡೆದು ಕೊಂಡಿದ್ದಾನೆ. ನಂತರ ಹಂತ-ಹಂತವಾಗಿ ಬರೋಬ್ಬರಿ 15.90 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಅನಂತರವೂ ಹಣಕ್ಕೆ ಬೇಡಿಕೆ ಇಟ್ಟಾಗ ತಿಲಕನಗರ ಪೊಲೀಸರಿಗೆ ವಿನೋದ್ ದೂರು ನೀಡಿದ್ದಾನೆ.