Advertisement

ಸಿಂಗಾಪುರ ಪ್ರಯಾಣಿಕರಿಗೆ ವಿನಾಯ್ತಿ

10:37 AM Dec 11, 2021 | Team Udayavani |

ಬೆಂಗಳೂರು: ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿ ಯುವವರಿಗೆ ಈಗ ಬಿಗ್‌ ರಿಲೀಫ್ ಸಿಕ್ಕಿದೆ! ಕೇಂದ್ರ ಸರ್ಕಾರವು ಸಿಂಗಪುರವನ್ನು ಹೈರಿಸ್ಕ್ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟಿದ್ದು, ಈ ಮೂಲಕ ಆ ದೇಶದಿಂದ ಭಾರತಕ್ಕೆ ಬಂದಿಳಿಯುವವರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೊಳಗಾಗಬೇಕು ಎಂಬ ನಿಯಮದಿಂದ ವಿನಾಯ್ತಿ ನೀಡಿದೆ.

Advertisement

ಇದರ ಬೆನ್ನಲ್ಲೇ ಶುಕ್ರವಾರದಿಂದ ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿಯುವ ಪ್ರಯಾಣಿಕರನ್ನು ನೇರವಾಗಿ ಮನೆಗೆ ಕಳುಹಿಸಲಾಗುತ್ತಿದೆ. ಸಿಂಗಾಪುರದಿಂದ ಬೆಂಗಳೂರಿಗೆ ನಿತ್ಯ 280 ಆಸನಗಳ ಒಂದು ವಿಮಾನ ಕಾರ್ಯಾಚರಣೆ ನಡೆಸುತ್ತದೆ. ಇದರಲ್ಲಿ ಅಂದಾಜು 200 ಜನ ಬಂದಿಳಿಯುತ್ತಿದ್ದಾರೆ.

ಅವರೆಲ್ಲರಿಗೂ ಈಗ ಕೇವಲ ಸ್ಕ್ರೀನಿಂಗ್‌ ಮಾತ್ರ ಮಾಡಲಾಗುತ್ತದೆ. ನಂತರ ನೇರವಾಗಿ ಅವರು ಮನೆಗೆ ತೆರಳಬಹುದು. ಅಲ್ಲಿ ಏಳು ದಿನಗಳ ಕಾಲ ಮನೆಯಲ್ಲೇ ಐಸೋಲೇಷನ್‌ ಆಗಬೇಕು ಎಂದಷ್ಟೇ ಸೂಚಿಸಲಾಗು ತ್ತಿದೆ. ಹಾಗಾಗಿ, ಗಂಟಲು ದ್ರವ ಮಾದರಿ ನೀಡುವುದು ಹಾಗೂ ಅದರ ವರದಿ ಬರುವವರೆಗೆ ಕಾಯಬೇಕಾದ ಮತ್ತು ಒಂದು ವೇಳೆ ಪಾಸಿಟಿವ್‌ ಇದ್ದರೆ, ಕ್ವಾರಂಟೈನ್‌ಗೆ ಒಳಗಾಗುವ ಕಿರಿಕಿರಿ ಇರುವುದಿಲ್ಲ.

ಇದನ್ನೂ ಓದಿ:- ಹೆಚ್ಚಿದ ಒಮಿಕ್ರಾನ್ ಭೀತಿ: ಮುಂಬೈನಲ್ಲಿ ಸೆಕ್ಷನ್ 144 ಜಾರಿ

“ನಿತ್ಯ ವಿವಿಧ ದೇಶಗಳಿಂದ ಸುಮಾರು 3,000- 3,500 ಜನ ಆಗಮಿಸುತ್ತಾರೆ. ಈ ಪೈಕಿ 1,400ರಿಂದ 1,500 ಹೈರಿಸ್ಕ್ ರಾಷ್ಟ್ರಗಳಿಂದ ಆಗಮಿಸುತ್ತಾರೆ. ಈ ಪೈಕಿ ಗುರುವಾರ ರಾತ್ರಿಯಿಂದಲೇ ಸಿಂಗಾಪುರದಿಂದ ಬರುವ ಪ್ರಯಾಣಿಕರಿಗೆ ಈ ಪರೀಕ್ಷೆಗಳಿಂದ ವಿನಾಯ್ತಿ ನೀಡಲಾಗಿದೆ. 72 ಗಂಟೆ ಮೊದಲೇ ಪರೀಕ್ಷೆ ನಡೆಸಿ, ನೆಗೆಟಿವ್‌ ಇರುವ ಪ್ರಮಾಣಪತ್ರ ತೋರಿಸಿ ಮನೆಗಳಿಗೆ ಹೋಗಬಹುದಾಗಿದೆ. ಕೇಂದ್ರದ ನಿರ್ದೇಶನದ ಮೇರೆಗೆ ಈ ವಿನಾಯ್ತಿ ಕಲ್ಪಿಸಲಾಗಿದೆ.

Advertisement

ಒಂದು ವೇಳೆ ಬೇರೆ ರಾಷ್ಟ್ರಗಳಿಂದ ಸಿಂಗಾಪುರಕ್ಕೆ ಕನೆಕ್ಟಿಂಗ್‌ ವಿಮಾನಗಳ ಮೂಲಕ ಬಂದರೆ, ಆ ಪ್ರಯಾಣಿಕರ ಮೂಲ ಪರಿಶೀಲಿಸಲಾಗುವುದು. ಉಳಿದ 12 ಹೈರಿಸ್ಕ್ ರಾಷ್ಟ್ರಗಳಿಂದ ಬಂದಿದ್ದರೆ, ನಿರ್ಬಂಧಗಳು ಅನ್ವಯ ಆಗಲಿವೆ’ ಎಂದು ಹೆಸರು ಹೇಳಲಿಚ್ಛಿಸದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಹೈರಿಸ್ಕ್ ದೇಶಗಳಿಂದ ಬಂದವರಿಗೆ ಪರೀಕ್ಷೆ

ಪ್ರಸ್ತುತ ಹೈರಿಸ್ಕ್ ದೇಶಗಳಿಂದ ಇಲ್ಲಿಗೆ ಬರುವ ಪ್ರಯಾಣಿಕರನ್ನು ಸ್ಕ್ರೀನಿಂಗ್‌ ಜತೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಪರೀಕ್ಷೆಗೆ ಕಳುಹಿಸಿ, ವರದಿ ಬರುವವರೆಗೂ ಪ್ರಯಾಣಿಕರು ನಿಲ್ದಾಣದಲ್ಲೇ ಇರಬೇಕಾಗುತ್ತದೆ. ವರದಿಯಲ್ಲಿ ಪಾಸಿಟಿವ್‌ ಬಂದರೆ, ನಂತರದಲ್ಲಿ ಅದನ್ನು ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು. ಈ ಮಧ್ಯೆ ಆ ಪ್ರಯಾಣಿಕ 14 ದಿನಗಳು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

“ನಿತ್ಯ ಸರಾಸರಿ 1,400 ಮಂದಿ ವಿದೇಶಗಳಿಂದ ಬಂದಿಳಿಯುತ್ತಿದ್ದಾರೆ. ಇದರಲ್ಲಿ ಸಿಂಗಪುರದಿಂದ ಬರುವವರೂ ಇದ್ದಾರೆ. ಕೇಂದ್ರದ ನಿರ್ದೇಶನದ ಪ್ರಕಾರ ಹೀಗೆ ಸಿಂಗಾ ಪುರದಿಂದ ಬರುವವರಿಗೆ “ಆರ್‌ಟಿಪಿಸಿ ಆರ್‌ ಕಡ್ಡಾಯ ನಿಯಮ’ದಿಂದ ವಿನಾಯ್ತಿ ನೀಡ ಲಾಗಿದೆ. ಉಳಿದ 12 ದೇಶಗಳಿಂದ ಈಗಾಗಲೇ ಇರುವ ನಿರ್ಬಂಧಗಳು ಅನ್ವಯ ಆಗಲಿವೆ.’ ಸಿ.ಶಿಖಾ, ಬಿಐಎಎಲ್‌ರಾಜ್ಯ ನೋಡಲ್‌ ಅಧಿಕಾರಿ

  • – ವಿಜಯಕುಮಾರ ಚಂದರಗಿ
Advertisement

Udayavani is now on Telegram. Click here to join our channel and stay updated with the latest news.

Next