Advertisement

ಬಾಕಿ ಮರುಪಾವತಿ ಹಣ ವಿದ್ಯಾರ್ಥಿಗಳ ಕೈ ಸೇರುತ್ತಿಲ್ಲ

02:15 PM Feb 15, 2021 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯವು ನಿರ್ದಿಷ್ಟ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮರುಪಾವತಿಗೆನೀಡಬೇಕಾಗಿರುವ ಬಾಕಿ ಹಣವನ್ನುಕಾಲೇಜುಗಳು ತಮ್ಮಲ್ಲೇ ಉಳಿಸಿಕೊಂಡು  ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕಾಲೇಜಿನ ಎಂ.ಕಾಂ. ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್‌ಮೂಲಕ ಸೀಟು ಹಂಚಿಕೆ ನಡೆಯುತ್ತದೆ.ಸೀಟು ಪಡೆದ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿ ಮಾಡುತ್ತಾರೆ. ಆನ್‌ ಲೈನ್‌ ಮೂಲಕವೇ ಶುಲ್ಕ ಪಾವತಿಸುವವ್ಯವಸ್ಥೆ ಇರುವುದರಿಂದ ಶುಲ್ಕಪಾವತಿಯ ನಂತರ ವಿವಿಯು ತನ್ನ ಶುಲ್ಕವನ್ನು ಉಳಿಸಿಕೊಂಡು(ವಿವಿಶುಲ್ಕ), ಉಳಿದ ಹಣವನ್ನು ಕಾಲೇಜಿಗೆಶುಲ್ಕ ಮರುಪಾವತಿಗಾಗಿ ನೀಡುತ್ತದೆ.ಹಾಗೆಯೇ ಕಾಲೇಜುಗಳು ದಾಖಲಾತಿವೇಳೆ ವಿದ್ಯಾರ್ಥಿಗಳಿಂದಲೂ ಶುಲ್ಕಪಾವತಿಸಿಕೊಳ್ಳುತ್ತವೆ. ಆದರೆ, ವಿವಿಯಿಂದ ಬರುವ ಮರು ಪಾವತಿ ಹಣವನ್ನು ಮಾತ್ರ ಕೆಲವೊಂದುಕಾಲೇಜುಗಳು ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿಲ್ಲ. ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ ಎಂದು ಎಂ.ಕಾಂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕಾಲೇಜುಗಳಲ್ಲಿ ಶುಲ್ಕ ಮರುಪಾವತಿ ಮಾಡದೇ ಇರುವ ಬಗ್ಗೆ ವಿವಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ,ಮಾಹಿತಿ ಸಂಗ್ರಹ ಮಾಡಿದ್ದೇವೆ. ಅದರೆ, ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತಿಲ್ಲ. ಏನೇ ಇದ್ದರೂ ಕಾಲೇಜಿನಲ್ಲೇ ಕೇಳಬೇಕು ಎನ್ನುತ್ತಿದ್ದಾರೆ. ವಿವಿಯಲ್ಲಿ ಈ ಸಂಬಂಧ ಯಾವುದೇ ಬಾಕಿ ಇಲ್ಲ ಎನ್ನುತ್ತಿದ್ದಾರೆ. ಕಾಲೇಜಿನಲ್ಲೂ ಸ್ಪಂದನೆ ಸಿಗುತ್ತಿಲ್ಲ. ವಿವಿ ಶುಲ್ಕಕ್ಕಿಂತ ಹೆಚ್ಚು ಹಣ ಪಾವತಿ ಮಾಡಿದ್ದೇವೆ. ಅದನ್ನು ವಿವಿ ವಾಪಾಸ್‌ ಕಾಲೇಜಿಗೆ ನೀಡುತ್ತಿದೆ. ಆದರೆ, ಕಾಲೇಜಿನಿಂದ ಮಾತ್ರ ನಮಗೆ ಮರುಪಾವತಿ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ವ್ಯವಸ್ಥೆ:

ಸರ್ಕಾರದಿಂದ ಬರುವ ವಿದ್ಯಾರ್ಥಿ ವೇತನಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ವಿದ್ಯಾರ್ಥಿ ವೇತನಕ್ಕೆಸರ್ಕಾರವೇ ರೂಪಿಸಿರುವ ನಿರ್ದಿಷ್ಟ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಅದು ನೇರವಾಗಿ ನಮ್ಮ ಖಾತೆಗೆ ಬರಲಿದೆ.ಆದರೆ, ವಿವಿಯಿಂದ ನಮ್ಮ ದಾಖಲಾತಿ ಶುಲ್ಕದ ಹಣವನ್ನು ಕಾಲೇಜಿಗೆ ನೀಡುವುದರಿಂದ ಕಾಲೇಜಿನವರು ನಮಗೆ ನೀಡುತ್ತಿಲ್ಲ. ಕಾಲೇಜಿಗೂ ನಾವುಪ್ರತ್ಯೇಕವಾಗಿ ಪಾವತಿ ಮಾಡುತ್ತೇವೆ. ಹೀಗಾಗಿ ಎರಡು ಕಡೆ ಹೊರೆಯಾಗುತ್ತದೆ.ವಿವಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನೇರ ಹಣವರ್ಗಾವಣೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ರೀತಿಯಲ್ಲಿಕಾಲೇಜುಗಳ ಅನ್ಯಾಯ ಮಾಡುವುದುಸರಿಯಲ್ಲ. ಶುಲ್ಕ ಮರುಪಾವತಿಯ ಹಣವನ್ನು ಆಗಿಂದಾಗೇ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆಆಗಬೇಕು. ಕೆಲವು ಕಾಲೇಜಿನಲ್ಲಿ ಹಣ ವರ್ಗಾವಣೆ ಆಗುತ್ತಿದೆ. ಇನ್ನು ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡುತ್ತಿಲ್ಲ ಎಂದು ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ವಿವಿಯು ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರು ಪಾವತಿ ಮಾಡುವುದನ್ನು ಉಳಿಸಿಕೊಳ್ಳುವುದಿಲ್ಲ. ಆಯಾ ಕಾಲೇಜುಗಳಿಗೆ ನೇರವಾಗಿ ಕಳುಹಿಸುತ್ತೇವೆ. ಈಗ ಎಲ್ಲವೂ ಆನ್‌ಲೈನ್‌ ಆಗಿರುವುದರಿಂದ ನೇರ ವಿದ್ಯಾರ್ಥಿಗಳ ಖಾತೆಗೆ ಹೋಗುತ್ತದೆ. ಕಾಲೇಜುಗಳು ಆ ರೀತಿ ಮರುಪಾವತಿ ಹಣವನ್ನು ಉಳಿಸಿಕೊಳ್ಳಲು ಬರುವುದಿಲ್ಲ. ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂವಿವಿ ಕುಲಪತಿ

 

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next