Advertisement

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

10:39 PM Jan 26, 2022 | Team Udayavani |

ಬೆಂಗಳೂರು: “ಪ್ರೈಮ್‌ ವಾಲಿಬಾಲ್‌ ಲೀಗ್‌’ನಲ್ಲಿ ಆಡುವ ಬೆಂಗಳೂರು ಟಾರ್ಪೆಡಾಸ್‌ ತಂಡಕ್ಕೆ ರಂಜಿತ್‌ ಸಿಂಗ್‌ ನಾಯಕರಾಗಿ ಆಯ್ಕೆಯಾಗಿದ್ದಾರೆ.

Advertisement

ಪಂಜಾಬ್‌ನವರಾದ ರಂಜಿತ್‌ ಸಿಂಗ್‌ ಭಾರತ ಪರ 50ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. 2012ರಲ್ಲಿ 22ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಯೂತ್‌ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ವಿವಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ತಂಡ ರಂಜಿತ್‌ ಅವರನ್ನು 4.4 ಲಕ್ಷ ರೂ.ಗೆ ಖರೀದಿಸಿತ್ತು.

ಇದನ್ನೂ ಓದಿ:ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಭಾರತದ ಮಾಜಿ ನಾಯಕ ರಂಜಿತ್‌ ಸಿಂಗ್‌ 2014ರ ಏಶ್ಯ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆ ಸಿದ್ದರು. ಅವರ ಸಾರಥ್ಯದಲ್ಲಿ ತಂಡ ಬೆಳ್ಳಿ ಪದಕ ಗೆದ್ದಿತ್ತು. ತಲಾ ಎರಡು ಬಾರಿ ಏಶ್ಯ ಕಪ್‌, ಏಶ್ಯನ್‌ ಗೇಮ್ಸ್ ಏಶ್ಯನ್‌ ಚಾಂಪಿಯನ್‌ಶಿಪ್‌ ಮತ್ತು ದಕ್ಷಿಣ ಏಶ್ಯ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಅನುಭವಿ ರಂಜಿತ್‌ ನಾಯಕತ್ವದಲ್ಲಿ ಬೆಂಗಳೂರು ತಂಡ ಮೊದಲ ಸಲ ಚಾಂಪಿಯನ್‌ ಪಟ್ಟ ಅಲಂಕರಿಸೀತೇ ಎಂಬುದೊಂದು ಕುತೂಹಲ.

ಹೈದರಾಬಾದ್‌ನ “ಗಚ್ಚಿ ಬೌಲಿ ಕ್ರೀಡಾಂಗಣ’ದಲ್ಲಿ ಫೆ. 5ರಂದು ವಾಲಿಬಾಲ್‌ ಲೀಗ್‌ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next