Advertisement

European MP: ಟಿಕೆಟ್‌ ಖರೀದಿಸದೆ ನಮ್ಮ ಮೆಟ್ರೋ ಏರಿದ್ದವ ಈಗ ಯುರೋಪ್‌ ಸಂಸದ!

12:08 PM Jul 15, 2024 | Team Udayavani |

ನವದೆಹಲಿ: ಬೆಂಗಳೂರಿನ ಮೆಟ್ರೋದಲ್ಲಿ ಟಿಕೆಟ್‌ ಖರೀದಿಸದೆ ಪ್ರಯಾಣಿಸಿ ವಿವಾದ ಸೃಷ್ಟಿಸಿದ್ದ ಸೈಪ್ರಸ್‌ ದ್ವೀಪ ರಾಷ್ಟ್ರದ ಯುಟ್ಯೂಬರ್‌ ಫಿದಿಯಾಸ್‌ ಪನಯೋತು ಐರೋಪ್ಯ ಒಕ್ಕೂಟದ ಸಂಸತ್‌ ಸದಸ್ಯ ರಾಗಿ ಆಯ್ಕೆಯಾಗಿದ್ದಾರೆ. ಫಿದಿಯಾಸ್‌ಗೆ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್ ಅಭಿನಂದನೆ ತಿಳಿಸಿದ್ದಾರೆ.

Advertisement

ಯುಟ್ಯೂಬರ್‌ ಆಗಿರುವ ಫಿದಿಯಾಸ್‌ ಸೆ.21, 2023ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ತಮ್ಮ ಯಟ್ಯೂಬ್‌ ವ್ಲಾಗ್‌ಗಾಗಿ ಬೆಂಗಳೂರು ಮೆಟ್ರೋದಲ್ಲಿ ನಿಯಮ ಉಲ್ಲಂ ಸಿದ್ದರು. ಟಿಕೆಟ್‌ ಪಡೆಯದೇ ಗೇಟ್‌ ಹಾರಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಈ ವಿಡಿಯೋವನ್ನು ಅವರ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಬೆಂಗಳೂರು ಮೆಟ್ರೋ ರೈಲು ಪ್ರಾಧಿಕಾರ ಈ ಬಗ್ಗೆ ಆಕ್ಷೇಪಿಸಿ, ಕೇಸು ದಾಖಲಿಸುವುದಾಗಿ ಹೇಳಿತ್ತು. ಫಿದಿಯಾಸ್‌ನ ಈ ನಡೆಗೆ ಆಗ ಜಾಲತಾಣಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.

ಫಿದಿಯಾಸ್‌ ಮೇಲೆ ಕ್ರಿಮಿನಲ್‌ ಕೇಸ್‌: ಫಿದಿಯಾಸ್‌ ಪನಯೋತು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಬಿಎಂ ಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಅವರು ಅಸಮಾಧಾನ ಹೊರ ಹಾಕಿದ್ದರು. ವ್ಯಕ್ತಿಯೊಬ್ಬ ಟಿಕೆಟ್‌ ಇಲ್ಲದೆ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿ ಮೆಟ್ರೋದಲ್ಲಿ ಪ್ರಯಾಣಿಸುವ ವಿಡಿಯೋ ವನ್ನು ಗಮನಿಸಿದ್ದೇನೆ. ಇಂತಹ ನಡವಳಿಕೆಯನ್ನು ನಾವು ಸಹಿಸುವುದಿಲ್ಲ. ಈ ವಿಡಿಯೋ ಬಗ್ಗೆ ಸಂಬಂಧಿಸಿದ ಅಧಿಕಾರಿಯನ್ನು ಪ್ರಕರಣ ದಾಖಲಿಸಲು ಕೇಳಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೇವೆ ಎಂದು ಹೇಳಿದ್ದರು. ವಿಡಿಯೋ ಕ್ಲಿಪ್‌ನಲ್ಲಿ, ಫಿಡಿಯಾಸ್‌ ಸ್ಮಾರ್ಟ್‌ ಕಾರ್ಡ್‌ ಅಥವಾ ಟೋಕನ್‌ ಅನ್ನು ಟ್ಯಾಪ್‌ ಮಾಡದೆ ಟಿಕೆಟ್‌ ಇಲ್ಲದೆಯೇ ನಿಲ್ದಾಣ ಪ್ರವೇಶಿಸುವ ಮೊದಲು ಮತ್ತು ನಿಲ್ದಾಣದಿಂದ ನಿರ್ಗಮಿಸುವ ವೇಳೆ ಜಂಪ್‌ ಮಾಡಿದ್ದಾರೆ. ಇಂತಹ ಕೃತ್ಯವನ್ನು ವಿದೇಶಗಳನ್ನು ಅಪರಾಧವೆಂದು ಪರಿಗಣಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next