ಬೆಂಗಳೂರು: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಡೇಲ್ ಸ್ಟೇನ್ ದಾಖಲೆ ಮುರಿದಿದ್ದಾರೆ.
ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ 8ನೇ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 439 ವಿಕೆಟ್ ಪಡೆದಿದ್ದರು. ಬೆಂಗಳೂರು ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಧನಂಜಯ ಡಿಸಿಲ್ವ ವಿಕೆಟ್ ಪಡೆದ ಅಶ್ವಿನ್ ಈ ದಾಖಲೆ ಮುರಿದಿದ್ದಾರೆ. ಧನಂಜಯ ಡಿಸಿಲ್ವ ವಿಕೆಟ್ ಅಶ್ವಿನ್ ಅವರ 440ನೇ ಟೆಸ್ಟ್ ವಿಕೆಟ್ ಆಗಿದೆ.
ಅತೀ ಹೆಚ್ಚು ವಿಕೆಟ್ ಪಡೆದವರ ಭಾರತೀಯ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:‘ಜೇಮ್ಸ್’ ಚಿತ್ರ ವಿಶ್ವದಾಖಲೆ ಆಚರಿಸಿಲೆಂದು ಪುಟಾಣಿಗಳು, ಪೋಷಕರಿಂದ 525 ಕಿ.ಮೀ ಪಾದಯಾತ್ರೆ
ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ವಿಕೆಟ್ ಪಡೆದವರು
800: ಮುರಳೀಧರನ್
708: ಶೇನ್ ವಾರ್ನ್
640: ಜೇಮ್ಸ್ ಆಂಡರ್ಸನ್
619: ಅನಿಲ್ ಕುಂಬ್ಳೆ
563: ಗ್ಲೆನ್ ಮೆಕ್‌ಗ್ರಾತ್
537: ಸ್ಟುವರ್ಟ್ ಬ್ರಾಡ್
519: ಕರ್ಟ್ನಿ ವಾಲ್ಷ್
440: ಆರ್ ಅಶ್ವಿನ್
439: ಡೇಲ್ ಸ್ಟೇಯ್ನ್
434: ಕಪಿಲ್ ದೇವ್