Advertisement
ತ್ಯಾಜ್ಯ ನೀರು ವಿಲೇವಾರಿ ಮಾಡುವುದೇ ಮಂಡಳಿಗೆ ದೊಡ್ಡ ಸವಾಲಾಗಿದೆ. ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಹೊಂದಿರುವವರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಹೀಗಾಗಿ ಜಲಮಂಡಳಿಯು ಅನಧಿಕೃತ ಒಳಚರಂಡಿ ಸಂಪರ್ಕಗಳ ಮೂಲಕ ತ್ಯಾಜ್ಯ ನೀರು ಹರಿಸುತ್ತಿ ರುವು ದನ್ನು ಪತ್ತೆ ಹಚ್ಚಲು ನಗರದ 18,367 ಕಡೆ ಸರ್ವೆ ನಡೆಸಿದೆ. ಆ ವೇಳೆ 2,929 ಕಡೆ ಅನಧಿಕೃತ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಇಂತಹ ಮನೆ, ಕಟ್ಟಡ ಮಾಲಿಕರಿಂದ ಇದುವರೆಗೆ ಒಟ್ಟು 24.27 ಕೋಟಿ ರೂ. ಶುಲ್ಕ ಸಂಗ್ರಹಿಸಿ, ತ್ಯಾಜ್ಯ ನೀರನ್ನು ಅಧಿಕೃತವಾಗಿ ಒಳಚರಂಡಿಗೆ ಹರಿಸಲು ಜಲಮಂಡಳಿಯು ಕ್ರಮ ಕೈಗೊಂಡಿದೆ.
Related Articles
Advertisement
ಅನಧಿಕೃತ ಸಂಪರ್ಕದಿಂದ ತೊಡಕೇನು?
ಕಾವೇರಿ ನೀರಿನ ಸಂಪರ್ಕ ಪಡೆದವರಿಂದ ಜಲಮಂಡಳಿ ಮೊದಲೇ ಶುಲ್ಕ ಸಂಗ್ರಹಿಸಿ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ಆದರೆ, ಕಾವೇರಿ ನೀರಿನ ಸಂಪರ್ಕ ಹೊಂದದೇ ಇರುವವರು ಜಲಮಂಡಳಿಗೆ ಅರ್ಜಿ ಸಲ್ಲಿಸಿ ಅಧಿಕೃತ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕು. ಇದರ ಆಧಾರದಲ್ಲಿ ಜಲಮಂಡಳಿ ಎಸ್‌ಟಿಪಿ ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಿಸುತ್ತದೆ. ಅನಧಿಕೃತ ಒಳಚರಂಡಿ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಒಳಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ತೊಡಕಾಗುತ್ತದೆ. ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗಿ ರಸ್ತೆಗಳಲ್ಲಿ ತ್ಯಾಜ್ಯ ನೀರು ಹರಿಯುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಭೀರುವ ಸಾಧ್ಯತೆಗಳಿವೆ.
ಅನಧಿಕೃತ ಒಳಚರಂಡಿ ಸಂಪರ್ಕಗಳನ್ನು ಜನ ಸ್ವಯಂ ಪ್ರೇರಿತರಾಗಿ ಸಕ್ರಮಗೊಳಿಸಿಕೊಳ್ಳಬೇಕು. ಮನೆ ಬಳಕೆ ನೀರನ್ನು ಅಕ್ರಮವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡು ಬಂದಲ್ಲಿ ಅಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗುವುದು. -ಡಾ.ವಿ.ರಾಮ್‌ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ.