ಬೆಂಗಳೂರು: ವಿಶೇಷ ಚೇತನ ಯುವತಿಗೆ ಯುವಕ ನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದಲ್ಲದೇ, ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಂಜಯನಗರ ನಿವಾಸಿ ಯುವತಿ(28) ನೀಡಿದ ದೂರಿನ ಮೇರೆಗೆ ಸುರೇಂದ್ರ ಮೂರ್ತಿ(35) ಎಂಬಾತನ ವಿರುದ್ಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಘಟನೆ ಕೊಡಿಗೇಹಳ್ಳಿ ಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಕೊಡಿಗೇಹಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಆರೋಪಿ ತಲೆಮರೆ ಸಿಕೊಂಡಿದ್ದಾನೆ. ಶೋಧಕಾರ್ಯ ಮುಂದುವರಿದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಮಾಡಿಕೊ ಡುವ ಕೆಲಸ ಮಾಡುತ್ತಿದ್ದ ಸುರೇಂದ್ರಮೂರ್ತಿಗೆ 2018ರಲ್ಲಿ ಸಂತ್ರಸ್ತೆ ಪರಿಚಯವಾಗಿದೆ. ಕೆಲ ದಿನಗಳ ಬಳಿಕ, ‘ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯಾಗು ತ್ತೇನೆಂದು ಭರವಸೆ ನೀಡಿ, ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೇ ವೇಳೆ ಹೊಸ ಕಂಪನಿ ಪ್ರಾರಂಭಿಸುತ್ತಿದ್ದೇನೆ. ಅದಕ್ಕೆ ಸಾಕಷ್ಟು ಹಣ ಬೇಕಾಗಿದ್ದು, ಅದನ್ನು ಕೊಟ್ಟರೆ, ಕಂಪನಿ ಲಾಭ ಬಂದ ಬಳಿಕ ವಾಪಸ್ ನೀಡುತ್ತೇನೆ’ ಎಂದು ನಂಬಿಸಿದ್ದಾನೆ.
ಮರುಳಾದ ಸಂತ್ರಸ್ತೆ ನಗದು ಚಿನ್ನಾಭರಣ ನೀಡಿ ವಂಚನೆಗೆ ಒಳಗಾಗಿದ್ದಳು. ಈ ಕುರಿತು ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಕಾಂತ್, 2018ರಿಂದ ಆರೋಪಿ ಯೊಂದಿಗೆ ವಿಶೇಷ ಚೇತನ ಯುವತಿ ಸಂಪರ್ಕ ಹೊಂದಿದ್ದು ಮದುವೆ ಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾನೆ. ಪತ್ತೆ ಕಾರ್ಯ ಮುಂದುವರಿದಿದೆ ಎಂದರು.
ಮದುವೆ ನಿಶ್ಚಯ: ಆರೋಪಿ ಪರಾರಿ ಸಂತ್ರಸ್ತೆ, ಕೂಡಿಟ್ಟಿದ್ದ ಒಡವೆ ಹಾಗೂ ತಾಯಿಯ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಅಂದಾಜು 50 ಲಕ್ಷ ರೂ.ಗೂ ಅಧಿಕ ಹಣವನ್ನು ಆರೋಪಿಗೆ ಕೊಟ್ಟಿದ್ದರು ಎನ್ನಲಾಗಿದೆ. ಈ ಪೈಕಿ 9 ಲಕ್ಷ ರೂ. ವಾಪಸ್ ನೀಡಿದ್ದಾನೆ. ಬಾಕಿ ಹಣ ಕೊಟ್ಟಿಲ್ಲ. ಹಣ ಕೇಳಿದರೆ, ಇಲ್ಲದ ಸಬೂಬು ಹೇಳಿಕೊಂಡು ದಿನ ಮುಂದೂಡಿದ್ದಾನೆ. ಜತೆಗೆ ಅಂಗವಿಕಲೆ ಎಂದೆಲ್ಲ ನಿಂದಿಸಿ, ಮದುವೆ ಆಗಲು ಸಾಧ್ಯವಿಲ್ಲ ಎಂದಿದ್ದ. ಜನವರಿಯಲ್ಲಿ ಆತನೊಂದಿಗೆ ಮದುವೆ ನಿಶ್ಚಯ ವಾಗಿತ್ತು. ಆದರೆ, ಆರೋಪಿ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸಂಜಯನಗರ ಠಾಣೆಯಲ್ಲಿ ದೂರು ದಾಖಲಿಸ ಲಾಗಿತ್ತು ಎಂದು ಪೊಲೀಸರು ತಿಳಿಸಿದರು.