Advertisement
ಈ ಇಬ್ಬರ ಮೊಬೈಲ್‌ನಿಂದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ಸಂಪರ್ಕಿಸಿರುವುದು ತಿಳಿದುಬಂದಿದೆ. ಘಟನೆಗೆ ಮುನ್ನವೂ ಈ ನಂಬರ್‌ಗಳಿಂದ ಬಹಳಷ್ಟು ಸಂದೇಶ ಮತ್ತು ಕರೆಗಳು ಹೋಗಿವೆ ಎಂಬುದು ಗೊತ್ತಾಗಿದೆ. ಹೀಗಾಗಿ ಇಬ್ಬರ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಸಂಪತ್ ರಾಜ್ ಮತ್ತು ಜಾಕೀರ್ ವಿಚಾರಣೆ ಸಂದರ್ಭದಲ್ಲಿ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಲಿಖೀತ ರೂಪದಲ್ಲಿ ಉತ್ತರ ನೀಡಿದ್ದಾರೆ. ಸಂಪತ್ ರಾಜ್ 18 ಪುಟ ಮತ್ತು ಜಾಕೀರ್ 14 ಪುಟಗಳ ಹೇಳಿಕೆ ದಾಖಲಿಸಿದ್ದಾರೆ. ಸಂಪತ್ ರಾಜ್ ಆಪ್ತ ಅರುಣ್ ರಾಜ್ ಹೇಳಿಕೆ ಕೂಡ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ವಕೀಲರ ಜತೆ ಆಗಮಿಸಿದ ಡಿ.ಜೆ. ಹಳ್ಳಿ ಪಾಲಿಕೆ ಸದಸ್ಯ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಪುಲಕೇಶಿನಗರದ ಪಾಲಿಕೆ ಸದಸ್ಯ ಎ.ಆರ್. ಜಾಕೀರ್ ಅವರನ್ನು ಸಂಜೆ ಐದು ಗಂಟೆಯ ವರೆಗೆ ವಿಚಾರಣೆ ನಡೆಸಲಾಗಿದೆ.
Related Articles
ಸಂಪತ್ ರಾಜ್, ಎ.ಆರ್. ಜಾಕೀರ್ ಮತ್ತು ಅರುಣ್‌ಗೆ ಸೇರಿದ ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಮೊಬೈಲ್‌ನಲ್ಲಿರುವ ಡಾಟಾವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ವಿಭಾಗದ ಅಧಿಕಾರಿಗಳು ಅವುಗಳನ್ನು ಮತ್ತೂಮ್ಮೆ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.
Advertisement
ಗಲಭೆಗೂ ನನಗೂ ಸಂಬಂಧವಿಲ್ಲಗಲಭೆಗೂ ನನಗೂ ಸಂಬಂಧವಿಲ್ಲ. ಸಿಸಿಬಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಜತೆ ಉತ್ತಮ ಸಂಬಂಧವಿದೆ ಎಂದು ಸಂಪತ್ ರಾಜ್ ಹೇಳಿದರು. ಆರೋಪಿಗಳ ಸಂಖ್ಯೆಯಲ್ಲಿ ಏರಿಕೆ
ಸೋಮವಾರ ತಡರಾತ್ರಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮತ್ತೆ 30 ಮಂದಿ ಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 420ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಷ್ಟ ಮೊತ್ತ ಪರಿಶೀಲನೆಗೆ ತಂಡ
ಗಲಭೆಯಲ್ಲಿ ಆಗಿರುವ ನಷ್ಟದ ಮೊತ್ತ ಪರಿಶೀಲನೆಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ “ಡ್ಯಾಮೆಜ್ ಆ್ಯಂಡ್ ಲಾಸ್ ಅಸೆಸ್‌ಮೆಂಟ್’ ತಂಡ ರಚಿಸಲಾಗಿದೆ. ಇದುವರೆಗೆ ದಾಖಲಾಗಿರುವ ಎಫ್‌ಐಆರ್ ಅನ್ವಯ 11 ಕೋಟಿ ರೂ.ಗೂ ಹೆಚ್ಚಿನ ಆಸ್ತಿ ನಷ್ಟ
ವಾಗಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಆರ್‌ಟಿಒ ಅಧಿಕಾರಿಗಳು ನೀಡುವ ಮೊತ್ತವನ್ನು ಆಧರಿಸಿ ಸರಕಾರಕ್ಕೆ ವರದಿ ನೀಡ
ಲಾಗುವುದು ಎಂದು ಮೂಲಗಳು ತಿಳಿಸಿವೆ.
ಫೇಸ್ ಬುಕ್, ಇನ್‌ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಗಲಭೆಗೆ ಪ್ರಚೋದನೆ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜಾಕೀರ್ ಮತ್ತು ಸೈಯದ್ ಸೋಹಿಲ್ ಬಂಧಿತರು. ಆರೋಪಿಗಳು ಘಟನೆ ವೇಳೆ ಸಾಮಾಜಿಕ ಜಾಲತಾಣದ ಲೈವ್‌ನಲ್ಲಿ ಡಿ.ಜೆ. ಹಳ್ಳಿ ಘಟನೆಯನ್ನು ತೋರಿಸಿದ್ದರು. ಮತ್ತೂಂದೆಡೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ನವೀನ್ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ತಿಪಟೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗಳನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಮೊಬೈಲ್ ವಶಕ್ಕೆ
ಘಟನೆ ಸಂದರ್ಭದಲ್ಲಿ ಸಂಪತ್ ರಾಜ್, ಎ.ಆರ್. ಜಾಕೀರ್ ಹಾಗೂ ಅರುಣ್ ರಾಜ್ ಮೊಬೈಲ್‌ಗಳಿಂದ ಬಂಧಿತ ಆರೋಪಿಗಳಿಗೆ ಕರೆಗಳು ಹೋಗಿವೆ. ವಾಟ್ಸ್ ಆ್ಯಪ್ ಸಂದೇಶಗಳು ರವಾನೆಯಾಗಿವೆ. ಮುಖ್ಯವಾಗಿ ಎಸ್‌ಡಿಪಿಐಯ ಮುಜಾಮಿಲ್ ಪಾಷಾ ಮತ್ತು ಜೆಡಿಎಸ್ ಮುಖಂಡ ವಾಜೀದ್ ಪಾಷಾಗೆ ಸಾಕಷ್ಟು ಕರೆ ಮತ್ತು ಸಂದೇಶಗಳು ಹೋಗಿವೆ. ಹೀಗಾಗಿ ಇಬ್ಬರ ಮೊಬೈಲ್ ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಬುಧವಾರ ಸಂಜೆ ವೇಳೆಗೆ ಇಬ್ಬರು ಸದಸ್ಯರ ಪಾತ್ರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಅರುಣ್‌ರಾಜ್ ವಶಕ್ಕೆ
ಅರುಣ್ ರಾಜ್ ತಮಿಳುನಾಡಿನ ಹೊಸೂರು ಮೂಲದ ವನು. ನಗರದಲ್ಲಿ ಗುತ್ತಿಗೆದಾರನಾಗಿದ್ದು, ಸಂಪತ್ ರಾಜ್‌ಗೆ
ಆಪ್ತನಾಗಿದ್ದಾನೆ. ಸದ್ಯ ಅರುಣ್‌ರಾಜ್ (43)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ದಿನ ಅರುಣ್ ಮೊಬೈಲ್‌ನಿಂದ ಗಲಭೆಕೋರರಿಗೆ ಸಾಕಷ್ಟು ಕರೆಗಳು ಮತ್ತು ಸಂದೇಶಗಳು ಹೋಗಿವೆ. ಅಲ್ಲದೆ ಸಂಪತ್ ರಾಜ್ ಸೂಚನೆ ಮೇರೆಗೆ ಹಣ, ದಿನಸಿ ಹಂಚಿಕೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ.