Advertisement
1997ರ ಅಕ್ಟೋಬರ್ 1ರಂದು 17.8 ಸೆಂ.ಮೀ. (178.9 ಮಿ.ಮೀ) ಮಳೆಯಾಗಿತ್ತು. ಅದಾದ ಬಳಿಕ ಈವರೆಗೆ 2017ರ 6 ಅಕ್ಟೋಬರ್ 6ರಂದು 7.6 ಸೆಂ.ಮೀ. ಮಳೆಯಾಗಿದ್ದು ಅತಿ ಹೆಚ್ಚಾಗಿತ್ತು. ಈಗ 2017ರ ದಾಖಲೆ ಮೀರಿ 15.7 ಸೆಂ.ಮೀ. ಮಳೆಯಾಗಿ ದಾಖಲೆ ನಿರ್ಮಾಣವಾಗಿದೆ
ಮಂಗಳವಾರ ಹಂಪಿನಗರದಲ್ಲಿ 6.3 ಸೆಂ.ಮೀ ಮಳೆ ಸುರಿದಿದ್ದು, ಇದು ನಗರದಲ್ಲಿ ಮಂಗಳವಾರ ಸುರಿದ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಉಳಿದಂತೆ ಮಾರುತಿ ಮಂದಿರದಲ್ಲಿ 5.7, ಕೆಂಗೇರಿ 5.2, ಆರ್‌ಆರ್‌ನಗರ 5.1, ಬಸವೇಶ್ವರನಗರ 4.1, ಕಾಡುಗೋಡಿ4, ವಿ.ನಾಗೇನಹಳ್ಳಿ, ಬಾಣಸವಾಡಿ ತಲಾ 3.7, ಬಾಗಲಗುಂಟೆ 3.6, ನಾಗಪುರ 3.4, ರಾಮಮೂರ್ತಿನಗರ 3.4, ರಾಜಾಜಿನಗರ 3.1, ಮನೋರಾಯನಪಾಳ್ಯ 2.7, ನಂದಿನಿಲೇಔಟ್ 2.4, ಚೊಕ್ಕಸಂದ್ರ 2.2, ಹೆಮ್ಮೆಗೆಪುರ 2.1, ಬಸವನಪುರ, ಹೂಡಿ ತಲಾ 2, ಪೀಣ್ಯ 1.9, ಪುಲಕೇಶಿನಗರ 1.8, ಅಂಜನಾಪುರ
1.7, ಶೆಟ್ಟಿಹಳ್ಳಿ 1.7, ವಿದ್ಯಾರಣ್ಯಪುರ 1.7, ಚಾಮರಾಜಪೇಟೆ 1.7, ವಿವಿಪುರ 1.4, ದೊಡ್ಡಬಿದಿರಕಲ್ಲು 1.2, ದೊಡ್ಡನೆಕ್ಕುಂದಿ, ಹೊರಮಾವು ತಲಾ 1.2, ದಯಾನಂದ ಸಾಗರ್ 1.1 ಸೆಂ.ಮೀ ಮಳೆಯಾಗಿದೆ.
Related Articles
ದುಬೈ ಸೇರಿದಂತೆ ಹಲವೆಡೆ ಮಳೆ ಆಗುತ್ತಿದೆ. ಬರಪೀಡಿತ ಪ್ರದೇಶದಲ್ಲಿಯೂ ಮಳೆ ಆಗುತ್ತಿದೆ. ಪ್ರಕೃತಿ ಮುಂದೆ ಯಾರೂ ಇಲ್ಲ. ಬೆಂಗಳೂರಿನಲ್ಲಿ ಸುರಿಯುತ್ತಿರುವಮಳೆ ಮತ್ತು ಅದರಿಂದಾದ ಅವಾಂತರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಬೆಂಗಳೂರು ಅಭಿವೃದ್ಧಿ
ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Advertisement
ನಗರದ ಮಳೆ ಕುರಿತು ಮಾಹಿತಿ ನೀಡಿರುವ ಅವರು, “ರಾಜ್ಯ ರಾಜಧಾನಿಯ ಚೌಡೇಶ್ವರಿನಗರದಲ್ಲಿ 150 ಮಿ.ಮೀ. ಮಳೆ ಬಿದ್ದಿದೆ. ಇದೇ ರೀತಿ ನಗರದ ವಿವಿಧೆಡೆ ಗರಿಷ್ಠ ಮಳೆಯಾಗಿದೆ. ದುಬೈ ಸೇರಿದಂತೆ ಹಲವೆಡೆಯೂ ಮಳೆ ಆಗುತ್ತಿದೆ. ಬರಪೀಡಿತ ಪ್ರದೇಶ ಗಳಲ್ಲೂ ವರುಣನ ಆರ್ಭಟ ಮುಂದುವರಿದಿದೆ. ನಗರದಲ್ಲಿ ಮಳೆಯಿಂದಾದ ಸಮಸ್ಯೆ ಗಳ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿರುವೆ, ಎಲ್ಲರಿಗೂ ಸೂಚನೆಕೂಡ ನೀಡಿದ್ದೇನೆ. ಐದು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಪ್ರಕೃತಿ ಮುಂದೆ ಯಾರೂ ಇಲ್ಲ’ ಎಂದರು. ನಾನು ಸ್ಥಳಕ್ಕೆ ಭೇಟಿ ನೀಡುವುದು ದೊಡ್ಡದೇನು ಅಲ್ಲ. ಪ್ರಚಾರ ನನಗೆ ಮುಖ್ಯವಲ್ಲ; ಮಳೆ ಹಾನಿ ನಿರ್ವಹಣೆಗಾಗಿ ಪ್ರತ್ಯೇಕ ತಂಡ ಮಾಡಿದ್ದೇವೆ ಎಂದು ಹೇಳಿದರು. ಮಳೆ ದೂರುಗಳಿದ್ದರೆ 1533ಗೆ ಕರೆ ಮಾಡಿ
ಪಾಲಿಕೆಯ ಅಧಿಕಾರಿಗಳು ಸಮಸ್ಯೆಯಾಗಿರುವ ಕಡೆ ಸ್ಥಳದಲ್ಲಿದ್ದು, ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಸಂಬಂಧಿಸಿದ ದೂರುಗಳಿದ್ದರೆ ನಾಗರಿಕರು ಕೂಡಲೆ ದಯಮಾಡಿ 1533 ಕರೆ ಮಾಡಲು ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿಗೆ ಬಂದಿವೆ1,328 ದೂರುಗಳು
ಮಳೆಯಿಂದ ಆದ ಅವಾಂತರಗಳ ಕುರಿತು ಬಿಬಿಎಂಪಿಗೆ ಇದುವರೆಗೆ 1,328 ದೂರುಗಳು ಬಂದಿವೆ. ಈ ಪೈಕಿ ರಸ್ತೆಯಲ್ಲಿ ನೀರು ನಿಂತಿರುವುದಕ್ಕೆ ಸಂಬಂಧಿಸಿದ 232,ಮನೆಗೆ ನೀರು ನುಗ್ಗಿರುವುದು 1066, ಮರ ಉರುಳಿರುವುದು 8, ಮರದ ರೆಂಬೆ ಉರುಳಿರಿವುದು 22 ಸೇರಿ ಒಟ್ಟಾರೆ 1328 ದೂರುಗಳು ಬಿಬಿಎಂಪಿಗೆ ಬಂದಿವೆ. ಈ ಪೈಕಿ 590 ದೂರುಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಿಬ್ಬಂದಿ ಈ ಸಮಸ್ಯೆ ಪರಿಹರಿಸಿದೆ.