Advertisement

ಬೆಂಗಳೂರು: ಮನೆಗೆ ನುಗ್ಗಿ ಪುತ್ರಿಯರ ಎದುರೇ ವ್ಯಕ್ತಿಯ ಕೊಚ್ಚಿ ಕೊಲೆ

05:16 PM Nov 22, 2021 | Team Udayavani |

ಬೆಂಗಳೂರು: ಬೆಂಗಳೂರಿನ ಅವರ ನಿವಾಸದಲ್ಲಿ 46 ವರ್ಷದ ವ್ಯಕ್ತಿಯನ್ನು ಇಬ್ಬರು ಪುತ್ರಿಯರ ಎದುರೇ ನಾಲ್ವರ ತಂಡವು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸೋಮವಾರ ನಡೆದಿದೆ.

Advertisement

ಮೃತರನ್ನು ಬಿಹಾರ ಮೂಲದ ಯಲಹಂಕ ನ್ಯೂ ಟೌನ್‌ನಲ್ಲಿ ವಾಸವಾಗಿರುವ ದೀಪಕ್ ಕುಮಾರ್ ಸಿಂಗ್ (46) ಎಂದು ಗುರುತಿಸಲಾಗಿದೆ. ದೀಪಕ್ ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಪತ್ನಿ ಬಿಹಾರಕ್ಕೆ ಹೋಗಿದ್ದರಿಂದ ದೀಪಕ್ ಮನೆಯಲ್ಲಿ ಇಬ್ಬರು ಪುತ್ರಿಯರೊಂದಿಗೆ ಇದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮನೆಗೆ ನುಗ್ಗಿದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಅವರ ಪುತ್ರಿಯರಿಗೂ ಬೆದರಿಕೆ ಹಾಕಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next