Advertisement

BIFFES ಮೂರನೇ ದಿನದ ಹೈಲೈಟ್ಸ್ : ‘ಸೈಕೋಬಿಚ್’ ದಿನದ ಜನಪ್ರಿಯ ಚಿತ್ರ

10:23 AM Mar 02, 2020 | Hari Prasad |

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಅಂತರ ರಾಷ್ಟ್ರೀಯ ಚಲನಚಿತ್ರೊತ್ಸವದ ಮೂರನೇ ದಿನವಾದ ಶನಿವಾರ ಕೆಲವೊಂದು ವಿದೇಶಿ ಚಿತ್ರಗಳು ಸಿನಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದವು.

Advertisement

ದಿನದ ಪ್ರಾರಂಭದಲ್ಲಿ ಬಲ್ಗೇರಿಯನ್ ಚಿತ್ರ ‘ಸಿಸ್ಟರ್’ ಮತ್ತು ಇಂಗ್ಲಿಷ್ ಚಿತ್ರ ‘ಬೈಟ್’ ಪ್ರದರ್ಶನ ಕಂಡಿತು. ಇನ್ನು ‘ಎ ರೆಗ್ಯುಲರ್ ವುಮೆನ್’ ಮತ್ತು ‘ಹಿರೋಯಿಕ್ ಲೂಸರ್ಸ್’ ಹೌಸ್ ಫುಲ್ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಆದರೆ ದಿನದ ಜನಪ್ರಿಯ ಚಿತ್ರ ಎಂಬ ಪಟ್ಟ ಮಾತ್ರ ಮಾರ್ಟಿನ್ ಲಂಡ್ ನಿರ್ದೇಶನದ ಚಿತ್ರ ‘ಸೈಕೋಬಿಚ್’ ಪಾಲಾಯ್ತು.

ಎರಡು ವಿಭಿನ್ನ ಮನಸ್ಥಿತಿಯ ಹುಡುಗ – ಹುಡುಗಿ ಶಾಲೆಯಲ್ಲಿ ಜೊತೆಯಾಗಿ ಕೆಲಸ ಮಾಡುವ ಸನ್ನಿವೇಶ ಸೃಷ್ಟಿಯಾದಾಗ ಅದು ಬಳಿಕ ಹೇಗೆ ಒಂದು ಪ್ರೇಮ ಪ್ರಕರಣದಲ್ಲಿ ಮುಕ್ತಾಯವಾಗುತ್ತದೆ ಎಂಬ ಸಂಕೀರ್ಣ ಕಥೆಯನ್ನು ಹೇಳುವ ಚಿತ್ರವಾಗಿ ‘ಸೈಕೋಬಿಚ್’ ಚಿತ್ರರಸಿಕರನ್ನು ಸೆಳೆದಿಟ್ಟುಕೊಂಡಿತು.

BIFFES ಸಹಯೋಗದೊಂದಿಗೆ ಡೈರೆಕ್ಟರ್ಸ್ ಫಿಲ್ಮ್ ಬಝಾರ್ ನಡೆಸಿದ ‘ಐ ಆಫ್ ಸಿನೇಮಾ ಡೈರೆಕ್ಟರ್ಸ್’ ಸೆಷನ್ ಚಿತ್ರನಿರ್ಮಾಣದಲ್ಲಿ ಆಸಕ್ತಿ ಇರುವವರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಚಿತ್ರ ನಿರ್ಮಾಣದ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ದೇಶಕ ಜೋ ಸೈಮನ್, ಪಿ. ಶೇಷಾದ್ರಿ, ಸಂಕಲನಕಾರ ಬಸವರಾಜ ಅರಸ್, ಛಾಯಾಚಿತ್ರ ನಿರ್ದೇಶಕ ಜೆ ಜೆ ಕೃಷ್ಣ ಮತ್ತು ಚಿತ್ರ ಸಂಕಲನಕಾರ ಕ್ರೇಝಿ ಮೈಂಡ್ ಅವರು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next