Advertisement

ಚಿತ್ರೋತ್ಸವದ ಮೊದಲ ದಿನ ಗಮನ ಸೆಳೆದ ‘ಸಿನೇಮಾ ಡಾಂಕಿ’!

10:09 AM Feb 29, 2020 | Hari Prasad |

ಬೆಂಗಳೂರು: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ದಿನ ಪ್ರದರ್ಶನಕಂಡ ಚಿತ್ರಗಳಲ್ಲಿ ಶಹೇದ್ ಅಹ್ಮದ್ಲೌ ನಿರ್ದೇಶನದ ಪರ್ಷಿಯನ್ ಚಿತ್ರ ‘ಸಿನೇಮಾ ಡಾಂಕಿ’ಗೆ ಸಿಲಿಕಾನ್ ಸಿಟಿ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

Advertisement

ಮಾನವೀಯತೆಯ ಸಂದೇಶ ಸಾರುವ ಚಿತ್ರವೊಂದನ್ನು ತಯಾರಿಸುವ ಉದ್ದೇಶವಿಟ್ಟುಕೊಂಡು ಚಿತ್ರನಿರ್ಮಾಣಕ್ಕಿಳಿಯುವ ತಂಡಕ್ಕೆ ತಮ್ಮ ಚಿತ್ರದಲ್ಲಿ ನಟಿಸಲು ಅನುಭವಿ ಕತ್ತೆಯೊಂದರ ಅಗತ್ಯವಿರುತ್ತದೆ.

ಆದರೆ ಹಣದ ಕೊರತೆ ಮತ್ತು ಸಮಯದ ಅಭಾವದಿಂದಾಗಿ ಅನುಭವಿ ಕತ್ತೆ ಸಿಗುವುದು ಸಾಧ್ಯವಾಗದೇ ಇದ್ದಾಗ ಕಾಡಿನಲ್ಲಿ ಅಡ್ಡಾಡಿಕೊಂಡಿದ್ದ ಕತ್ತೆಯನ್ನು ತಂದು ಶೂಟಿಂಗ್ಪ್ರಾ ರಂಭಿಸಲಾಗುತ್ತದೆ. ಆದರೆ ಕಾಡಿನಲ್ಲಿ ಅಲೆದಾಡಿಕೊಂಡಿದ್ದ ಕತ್ತೆಗೆ ಯಾವುದೇ ರೀತಿಯ ತರಬೇತಿ ಇಲ್ಲದಿದ್ದ ಕಾರಣದಿಂದಾಗಿ ಶೂಟಿಂಗ್ ಸಮಯದಲ್ಲಿ ಸಾಕಷ್ಟು ಪರಿಪಾಟಲು ಪಡಬೇಕಾಗುತ್ತದೆ.

ಒಟ್ಟಿನಲ್ಲಿ ಶೂಟಿಂಗ್ ಪರಿಸ್ಥಿತಿಗೆ ಒಗ್ಗಿಕೊಳ್ಳದೆ ಕತ್ತೆ ಮತ್ತು ತಮಗೆ ಬೇಕಾದ ರೀತಿಯಲ್ಲಿ ಚಿತ್ರದ ಶೂಟಿಂಗ್ ಮುಗಿಸಲು ಅನನುಭವಿ ಚಿತ್ರತಂಡದ ಒದ್ದಾಟವನ್ನು ಕಲಾತ್ಮಕವಾಗಿ ಪ್ರೇಕ್ಷಕರ ಎದುರು ಯುವ ನಿರ್ದೇಶಕ ತೆರೆದಿಡುತ್ತಾ ಹೋಗುತ್ತಾರೆ.

ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿರುವ ಈ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲೂ ಉತ್ತಮ ಪ್ರೇಕ್ಷಕ ಪ್ರತಿಕ್ರಿಯೆಗೆ ಪಾತ್ರವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next